ನವದೆಹಲಿ:
ಜನ್ ಧನ್ ಖಾತೆದಾರರ ಸಂಖ್ಯೆ ದೇಶದಲ್ಲಿ 50 ಕೋಟಿ ದಾಟಿರುವುದು ಮಹತ್ವದ ಮೈಲಿಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಶ್ಲಾಘಿಸಿದ್ದಾರೆ.
ಈ ಖಾತೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಖಾತೆಗಳು ಮಹಿಳೆಯರಿಗೆ ಸೇರಿರುವುದು ಮತ್ತೊಂದು ಖುಷಿಯ ವಿಚಾರ ಎಂದು ಕೂಡ ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶದಲ್ಲಿ ಒಟ್ಟು ಜನ್ ಧನ್ ಖಾತೆಗಳ ಸಂಖ್ಯೆ 50 ಕೋಟಿ ದಾಟಿದ್ದು, ಅದರಲ್ಲಿ ಶೇ.56 ರಷ್ಟು ಮಹಿಳೆಯರಿಗೆ ಸೇರಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಜನ್ ಧನ್ ಖಾತೆಗಳಲ್ಲಿನ ಒಟ್ಟು ಠೇವಣಿ 2.03 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿದ್ದು, ಸುಮಾರು 34 ಕೋಟಿ ರೂಪಾಯಿ ಕಾರ್ಡ್‌ಗಳನ್ನು ಈ ಖಾತೆಗಳೊಂದಿಗೆ ಉಚಿತವಾಗಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
