ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ನೀಡುವ ಭರವಸೆ : ದಿನೇಶ್ ಗುಂಡುರಾವ್

 ಹರಿಹರ:

      ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ದೊರಕಿಸುವ ಕೊಡುವ ಭರವಸೆಯನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು ನೀಡಿದರು.

      ಅವರು ಹಾವೇರಿ ಜಿಲ್ಲೆಯಿಂದ ದಾವಣಗೆರೆ ಜಿಲ್ಲೆಗೆ ಸ್ಥಳೀಯ ಚುನಾವಣೆಗಳ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂದರ್ಭದಲ್ಲಿ, ಮಾರ್ಗ ಮಧ್ಯದಲ್ಲಿ ಹರಿಹರ ಶಾಸಕ ಎಸ್.ರಾಮಪ್ಪ ನವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

      ದಾವಣಗೆರೆ ಜಿಲ್ಲೆಯಿಂದ ಆಯ್ಕೆಯಾಗಿರುವ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಎಸ್.ರಾಮಪ್ಪನವರಿಗೆ ಮುಂದಿನ ಮಂತ್ರಿಮಂಡಳ ವಿಸ್ತರಣೆ ಸಂದರ್ಭದಲ್ಲಿ ಅವಕಾಶ ಸಿಗಬಹುದೇ.? ಎಂಬ ಪ್ರಶ್ನೆಗೆ ಅವರು ಹೈಕಮಾಂಡ್ ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜಿಲ್ಲೆಗೆ ಖಂಡಿತವಾಗಿಯೂ ಅನ್ಯಾಯವಾಗದಂತೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಮುಂದಿನ ತಿಂಗಳು ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದ ನಂತರ ಮಂತ್ರಿಮಂಡಳ ವಿಸ್ತರಣೆ ಮತ್ತು ನಿಗಮಮಂಡಳಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಉತ್ತರಿಸಿದರು.

      ಮಾನ್ಯ ಮುಖ್ಯಮಂತ್ರಿಗಳು ಈಗಾಗಲೇ ಸಹಕಾರಿ ಬ್ಯಾಂಕ್‍ಗಳಲ್ಲಿ ಇರುವ ಸಾಲಮನ್ನವನ್ನು ಘೋಷಣೆ ಮಾಡಿದ್ದು, ಇದುವರೆಗೂ ಸಹಕಾರ ಬ್ಯಾಂಕ್‍ಗಳಿಗೆ ಯಾವುದೇ ರೀತಿಯ ಆದೇಶ ಬಂದಿರುವುದಿಲ್ಲ ಎಂದು ಪತ್ರಕರ್ತರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು ನಾನು ಸರ್ಕಾರದ ಮಂತ್ರಿಮಂಡಲದಲ್ಲಿ ಇಲ್ಲದೆ ಇರುವುದರಿಂದ ಈ ವಿಷಯ ಬಗ್ಗೆ ಸರ್ಕಾರ ಮಟ್ಟದಲ್ಲಿ ಮತ್ತು ಸಮನ್ವಯ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದರಿಂದ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ ಎಂದರು.

      ಕಾಂಗ್ರೆಸ್ ಪಕ್ಷದಲ್ಲಿಯೆ ಸರ್ಕಾರವನ್ನು ಅಭದ್ರಗೊಳಿಸುವ ಚಟುವಟಿಕೆಗಳ ಹೇಳಿಕೆಗಳು ನಡೆಯುತ್ತಲಿವೆ.? ಎಂಬ ಪ್ರಶ್ನೆಗೆ ಅವರು ಮಾಜಿ ಮುಖ್ಯಮಂತ್ರಿ ಎಂದು ಮಾನ್ಯ ಸಿದ್ದರಾಮಯ್ಯನವರು ನಾನೇ ಮುಂದಿನ ಮುಖ್ಯಮಂತ್ರಿ ಎಂದು ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಇತ್ತೀಚೆಗೆ ಬಹಿರಂಗ ಸಭೆಯಲ್ಲಿ ಅಭಿಮಾನಿಗಳು ನೀವೇ ಮುಖ್ಯಮಂತ್ರಿಯಾಗಬೇಕೆಂದು ಒತ್ತಾಯಿಸಿದ ಸಂದರ್ಭದಲ್ಲಿ ಆ ರೀತಿ ಹೇಳಿದ್ದಾರೆ. ಇದು ವಾಸ್ತವ ಅಂಶವಾಗಿದೆ. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಹೇಳಿದರು.

      ನಮ್ಮ ಪಕ್ಷದಿಂದ ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣವಾಗಿ ಬೆಂಬಲ ನೀಡಿದ್ದು, ಸರ್ಕಾರ ಐದು ವರ್ಷ ನಮ್ಮ ಬೆಂಬಲದಿಂದ ಪೂರ್ಣಗೊಳಿಸಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ರಮೇಶ್ ಜಾರಕಿಹೊಳೆ ಮತ್ತು ಸಿದ್ದರಾಮಯ್ಯನವರು ಗೌಪ್ಯವಾದ ಮಾತುಗಳನ್ನು ನಡೆಸುತ್ತಿರುವುದು ಸರಿಯೇ.? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಅವರಿಬ್ಬರೂ ನಮ್ಮ ಪಕ್ಷದವರೆ ಆಗಿರುವುದರಿಂದ ಗೌಪ್ಯದ ಪ್ರಶ್ನೆ ಉದ್ಬವಿಸುವುದಿಲ್ಲ. ಇದು ಬರಿ ಉಹಾಪೊಹದ ಸುದ್ದಿಯಾಗಿದೆ ಎಂದು ಸ್ಪಷ್ಟಪಡಿಸಿದರು.

      ಈ ಸಂದರ್ಭದಲ್ಲಿ ಶಾಸಕ ಎಸ್.ರಾಮಪ್ಪ, ಕೆಪಿಸಿಸಿ ಕಾರ್ಯದರ್ಶಿಗಳಾದ ಡಿ.ಬಸವರಾಜ್, ಬಲ್ಕಿಶ್ ಭಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ತಾ.ಪಂ.ಮಾಜಿ ಸದಸ್ಯ ಬೆಳ್ಳೂಡಿ ಬಸವರಾಜ್, ತಹಶೀಲ್ದಾರ್ ರೆಹನ್ ಪಾಷಾ, ಎಲ್.ಬಿ.ಹನುಮಂತಪ್ಪ, ಮಲೇಬೆನ್ನೂರು ಅಬೀದಾಲಿ, ನಗರಸಭೆ ಸದಸ್ಯ ಬಿ.ರೇವಣಸಿದ್ದಪ್ಪ, ಗೀತಾ ಕದರಮಂಡಲಗಿ, ಪರ್ವಾತಿ, ನೇತ್ರಾವತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link