ದಾಸೋಹ ಕೇಂದ್ರ ನಿರ್ಮಾಣಕ್ಕೆ 2ಕೋಟಿ 18ಲಕ್ಷ ಅನುಧಾನ: ಡಿಸಿ ರಾಕೇಶ್‍ಕುಮಾರ್

ಕೊರಟಗೆರೆ:-

              ರಾಜ್ಯದ ಪವಿತ್ರ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ದಾಸೋಹ ಕೇಂದ್ರದ ರೀತಿಯಲಿ ಕೊರಟಗೆರೆಯ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಪುಣ್ಯ ಕ್ಷೇತ್ರದಲ್ಲಿ ದಾಸೋಹ ಕೇಂದ್ರ ನಿರ್ಮಿಸಲು 2ಕೋಟಿ 18ಲಕ್ಷ ಅನುಧಾನದ ಯೋಜನೆ ರೂಪಿಸಲಾಗಿದೆ ಎಂದು ತುಮಕೂರು ಡಿಸಿ ರಾಕೇಶ್‍ಕುಮಾರ್ ತಿಳಿಸಿದರು.

            ಕೊರಟಗೆರೆ ತಾಲೂಕಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ಸನ್ನಿಧಾನಕ್ಕೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬೇಟಿ ನೀಡಿ ದೇವಿಯ ದರ್ಶನ ಪಡೆದ ಬಳಿಕ ದಾಸೋಹಕೇಂದ್ರ ವಿಕ್ಷಣೆ ಮಾಡಿದ ವೇಳೆಯಲ್ಲಿ ಮಾತನಾಡಿದರು.

            ದಾಸೋಹ ಕೇಂದ್ರ ನಿರ್ಮಾಣದ ಅನುಧಾನದ ಟೆಂಡರ್ ಪ್ರಕ್ರಿಯೆ ಪಿಡ್ಲ್ಯೂಡಿ ಇಲಾಖೆಯಲ್ಲಿ ಈಗಾಗಲೇ ಪೂರ್ಣವಾಗಿದೆ. ಮುಂದಿನ ವರ್ಷದೊಳಗೆ ದಾಸೋಹಕೇಂದ್ರದ ನೂತನ ಕಟ್ಟಡವನ್ನು ಪೂರ್ಣಗೊಳಿಸಲು ಅಗತ್ಯಕ್ರಮ ಕೈಗೊಳ್ಳಲು ಮಧುಗಿರಿ ಎಸಿಗೆ ಸೂಚಿಸಲಾಗಿದೆ. ನಮ್ಮಜಿಲ್ಲೆಯ ಪುಣ್ಯಕ್ಷೇತ್ರದಲ್ಲಿ ನಾವು ಮಾಡಿದಅಭಿವೃದ್ದಿಯ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.

               ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದ ಆಡಳಿತ ಅಧಿಕಾರಿ ವೆಂಕಟೇಶಯ್ಯ ಮಾತನಾಡಿ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ರಾಜ್ಯದ ಏಕೈಕ ಲಕ್ಷ್ಮೀ ಕ್ಷೇತ್ರವಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಒಂದು ವಾರದಿಂದ ಅಧಿಕಾರಿಗಳ ತಂಡ ಮತ್ತು ಸಂಘ ಸಂಸ್ಥೆಗಳು ಉತ್ತಮವಾಗಿ ಕೆಲಸ ನಿರ್ವಹಿಸಿದೆ. ದೇವಾಲಯ ಆವರಣದಲ್ಲಿ ಇನ್ನೂ ಹೆಚ್ಚಿನ ಅಂಗಡಿ ಮಳಿಗೆ ನಿರ್ಮಿಸುವ ಯೋಜನೆ ಈಗಾಗಲೇ ರೂಪಿಸಲಾಗಿದೆಎಂದು ತಿಳಿಸಿದರು.

              ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿಯ ಸಿರಿದೇವಿ ಸನ್ನಿದಾನದಲ್ಲಿ ಶುಭ ಶುಕ್ರವಾರ ಮುಂಜಾನೆ 5ರಿಂದ 7ರವರೆಗೆ ತಾಯಿಗೆ ಪಂಚಾಮೃತ ಅಭಿಷೇಕ, 8.30ಕ್ಕೆ ಮಹಾ ಮಂಗಳಾರತಿ, 9ಗಂಟೆಗೆ ಮಹಾಲಕ್ಷ್ಮೀ ಹೋಮ ಹವನ, 10ಗಂಟೆಗೆ ಪ್ರಕಾರೋತ್ಸವ ನಡೆಯಿತು. ಗುರುವಾರದಿಂದಲೇ ದೇವಾಲಯ ಮತ್ತುದೇವಿಗೆ ವಿಶೇಷ ಹೂವಿನ ಮತ್ತು ವಿದ್ಯುತ್ ಅಲಂಕಾರ. ಹಬ್ಬದ ಪ್ರಯುಕ್ತ ಇಡೀ ದಿನ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

             ಶ್ರೀಮಹಾಲಕ್ಷ್ಮೀ ದೇವಾಲಯಕ್ಕೆ ತುಮಕೂರು 2ನೇ ಅಧಿಕ ಸತ್ರ ನ್ಯಾಯಧೀಶ ಪ್ರಭಾಕರರೆಡ್ಡಿ, ಡಿಎಚ್‍ಓಚಂದ್ರಿಕಾ, ಬೆಂಗಳೂರಿನ ಹರಿಕೃಷ್ಣ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಭಕ್ತಾಧಿಗಳು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಕೊರಟಗೆರೆ ಫ್ರೇಂಡ್ಸ್‍ಗ್ರೂಪ್ ವತಿಯಿಂದ ದಾಸೋಹದ ನಿರ್ವಹಣೆಯನ್ನು ವಹಿಸಲಾಗಿತ್ತು. ಆಡಳಿತಾಧಿಕಾರಿ ವೆಂಕಟೇಶಯ್ಯ ನೇತೃತ್ವದಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಭದ್ರತೆಯೊಂದಿಗೆ ದರ್ಶನಕ್ಕೆ ಸಕಲ ಸಿದ್ದತೆ ಮಾಡಿದ್ದರು.

               ಗೊರವನಹಳ್ಳಿ ವರಲಕ್ಷ್ಮೀ ಹಬ್ಬದ ಪ್ರಯುಕ್ತ ತಹಶೀಲ್ದಾರ್ ನಾಗರಾಜು, ಇಓ ಶಿವಪ್ರಕಾಶ್, ಸಿಪಿಐ ಮುನಿರಾಜು, ಪಿಎಸ್‍ಐ ಮಂಜುನಾಥ, ಕಂದಾಯಇಲಾಖೆಯ ಮಧುಸೂದನ್, ದೇವಾಲಯದ ಸ್ಥಳೀಯ ಅಧಿಕಾರಿರಮೇಶ್, ಕೇಶವಮೂರ್ತಿ, ಭವ್ಯ, ಲಕ್ಷ್ಮಣ್, ಗ್ರಾಪಂಅದ್ಯಕ್ಷೆ ಮಂಜುಳ, ಪಿಡಿಓ ರಮೇಶ್, ಪ್ರಧಾನಅರ್ಚಕ ಪ್ರಸನ್ನಕುಮಾರ್, ಆಗಮಿಕರು ಸುಬ್ರಹ್ಮಣ್ಯ, ಗಿರೀಶ್ ಸೇರಿದಂತೆ ಇತರರು ಇದ್ದರು

Recent Articles

spot_img

Related Stories

Share via
Copy link
Powered by Social Snap