ದಿಢೀರ್ ಹೆಚ್ಚಾದ ಡ್ಯಾಂ ನೀರು 4 ಜನ ಕಣ್ಮರೆ

ಕುಣಿಗಲ್:

ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮಾರ್ಕೋನಹಳ್ಳಿ ಜಲಾಶಯ ನೋಡಲು ಹೋಗಿದ್ದ ನಾಲ್ಕು ಜನರು ದಿಢೀರ್ ಹೆಚ್ಚಾದ ಕೋಡಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಮಾರ್ಕೋಹಳ್ಳಿ ಜಲಾಶಯದ ಕುಣಿಗಲ್ ತಾಲ್ಲೂಕು ಹಾಗೂ ನಾಗಮಂಗಲ ತಾಲ್ಲೂಕು ಗಡಿ ಭಾಗದಲ್ಲಿ ನಡೆದಿದೆ.

ಭಾನುವಾರ ರಜಾ ದಿನವಾಗಿದ್ದರಿಂದ ಮಾರ್ಕೋನಹಳ್ಳಿ ಡ್ಯಾಂ ತುಂಬಿ ಹರಿಯುತ್ತಿರುವ ನೀರು ನೋಡಲು ಹೋದವರ ಪೈಕಿ ಇಬ್ಬರು ಯುವತಿಯರು, ಇಬ್ಬರು ಯುವಕರು ಸೇರಿ ಒಟ್ಟು ನಾಲ್ಕು ಜನರು ನೀರಿನಲ್ಲಿ ಕಣ್ಮರೆಯಾಗಿದ್ದಾರೆ.

ಕುಣಿಗಲ್ ಪಟ್ಟಣದ ಕೋಟೆ ಬೀದಿಯ ವಾಸಿಗಳಾದ ಪರ್ವಿನ್‍ತಾಜ್ (22) ಸಾಧಿಕಾ (17) ಇವರುಗಳು ತಮ್ಮ ಕುಟುಂಬ ಸದಸ್ಯರ ಜೊತೆಯಲ್ಲಿ ಜಲಾಶಯದ ಕೋಡಿ ಹಳ್ಳದ ನೀರಿನಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ನೀರಿನ ಹರಿವು ಹೆಚ್ಚಾಗಿದ್ದರಿಂದ ನೀರಿನ ರಭಸಕ್ಕೆ ಪರ್ವಿನ್‍ತಾಜ್ ಮತ್ತು ಸಾಧಿಕಾ ಇಬ್ಬರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಇದೇ ರೀತಿಯ ಪ್ರಕರಣದಲ್ಲಿ ಮದ್ದೂರಿನಿಂದ ಅಜ್ಜಿ ಮನೆ ಎಡೆಯೂರಿಗೆ ಬಂದಿದ್ದ ರಾಜು 24, ಅಪ್ಪು ಅಲಿಯಾಸ್ ಗುಂಡ 19, ಈ ಇಬ್ಬರು ಹುಡುಗರು ಟಿವಿಎಸ್‍ನಲ್ಲಿ ಬಂದು ನದಿಯ ದಡದಲ್ಲಿ ನಿಲ್ಲಿಸಿ ನೀರಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಕೊಚ್ಚಿ ಹೋಗಿದ್ದು, ಇತರೆ ಮೂರ್ನಾಲ್ಕು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದಕೂಡಲೇ ಮಾರ್ಕೋನಹಳ್ಳಿ ಜಲಾಶಯದ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಅಮೃತೂರು ಪೆÇಲೀಸ್ ಠಾಣೆಯ ಪಿಎಸ್‍ಐ ಮಂಗಳಗೌರಮ್ಮ, ಸಿಪಿಐ ಗುರುಪ್ರಸಾದ್ ಜೊತೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆಯಲ್ಲಿ ತೊಡಗಿದರು. ಸ್ಥಳಕ್ಕೆ ಕುಣಿಗಲ್ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿ ಸಹ ಆಗಮಿಸಿ ಪರಿಶೀಲಿಸಿದರು. ನೀರಿನ ರಭಸ ಇನ್ನೂ ಹೆಚ್ಚಾಗಿರುವುದರಿಂದ ತಕ್ಷಣಕ್ಕೆ ಯಾವುದೇ ರೀತಿಯ ಕಾರ್ಯಾಚರಣೆ ನಡೆಸಲು ಸಾಧ್ಯವಾಗದ ಕಾರಣ ಸೋಮವಾರ ನೀರಿನ ಹರಿವಿನ ಮಟ್ಟವನ್ನು ನೋಡಿಕೊಂಡು ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಕುಣಿಗಲ್ ಶಾಸಕ ಡಾ.ಹೆಚ್.ಡಿ.ರಂಗನಾಥ್, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ತಹಶೀಲ್ದಾರ್ ಮಹಾಬಲೇಶ್ವರ್ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ನಡೆದಿರುವ ಸ್ಥಳವು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿಗೆ ಸೇರಿರುವುದರಿಂದ ನಾಗಮಂಗಲ ತಾಲ್ಲೂಕಿನ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap