ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಅವಹೇಳಕನಕಾರಿಯಾಗಿ ಫೇಸ್‍ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಪ್ರಾಧ್ಯಾಪಕರ ಮೇಲೆ ಹಲ್ಲೆ

ಪಾಟ್ನಾ:

          ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಅವಹೇಳಕನಕಾರಿಯಾಗಿ ಟೀಕಿಸಿ ಫೇಸ್‍ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಪ್ರಾಧ್ಯಾಪಕರ ಮೇಲೆ ಹಲ್ಲೆ ಮಾಡಿರುವ ಘಟನೆ ಪಾಟ್ನಾದಲ್ಲಿ  ನಡೆದಿದೆ.

           ವೃತಿಯಿಂದ ಪ್ರೊಫೆಸರ್ ಆಗಿರುವ ಸಂಜಯ್ ಕುಮಾರ್ ಅವರು ಫೇಸ್‍ಬುಕ್ ನಲ್ಲಿ ದಿ.ವಾಜಪೇಯಿ ಅವರ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಇವರು ಬಿಹಾರದ ಮಹಾತ್ಮ ಗಾಂಧಿ ಸೆಂಟ್ರಲ್ ವಿಶ್ವವೊದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದಾರೆ. ಪ್ರೊಫೆಸರ್ ಅವರು  ಮಾಡಿದ್ದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸುಮಾರು 20-25 ಜನರು ಗುಂಪು ಪ್ರೊ. ಸಂಜಯ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

           ಪ್ರೊ. ಸಂಜಯ್ ಹಲ್ಲೆಯ ಕುರಿತು  ದೂರು ಸಲ್ಲಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಪ್ರೊ. ಸಂಜಯ್ ಅವರು ಈ ಹಿಂದೆ ಕೂಡ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ವಿರುದ್ಧ ಮಾತನಾಡಿದ್ದರು. ನಂತರದಲ್ಲಿ ಈ ಬಗ್ಗೆ ಕ್ಷಮೆಯನ್ನು ಕೇಳಿದ್ದರು. ಆದರೆ ಈಗ ಆ ಘಟನೆಯನ್ನು ಟಾರ್ಗೆಟ್ ಮಾಡಿಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರೊ. ಸಂಜಯ್ ಹೇಳಿದ್ದಾರೆ.

            ಅವರು ಹೇಳುವ ಪ್ರಕಾರ ರಾಹುಲ್ ಪಾಂಡೆ ಮತ್ತು ಅಮನ್ ಬಿಹಾರಿ ವಾಜಪೇಯಿ ಸೇರಿದಂತೆ 20-25 ಜನರ ಗುಂಪು ಮೋತಿಹಾರಿಯಲ್ಲಿರುವ ಆಜಾದ್ ನಗರದ ಕೋಣೆಯಲ್ಲಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ.

            ಈ ಘಟನೆ ಸಂಬಂಧ ಪೊಲೀಸರು 12 ಜನರನ್ನು ಬಂಧಿಸಿದ್ದಾರೆ. ಕುಮಾರ್ ರವರಿಗೆ ಗಂಭೀರವಾಗಿ ಗಾಯವಾಗಿದ್ದು, ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಮಾರ್ ಸಹೋದ್ಯೋಗಿ ಹೇಳಿದ್ದಾರೆ.

            ಪ್ರೊ.ಸಂಜಯ್ ಹೇಳುವ ಪ್ರಕಾರ  ರಾಹುಲ್ ಕುಮಾರ್ ಪಾಂಡೆ, ಸನ್ನಿ ವಾಜಪೇಯಿ, ಅಮಾನ್ ಬಿಹಾರಿ ವಾಜಪೇಯಿ, ಪುರುಷೋತ್ತಮ್ ಮಿಶ್ರಾ, ರವಿಕೇಶ್ ಮಿಶ್ರಾ, ಜ್ಞಾನೇಶ್ವರ್ ಗೌತಮ್, ಸಂಜಯ್ ಕುಮಾರ್ ಸಿಂಗ್ ಡೈಯಿಕ್ ಭಾಸ್ಕರ್ನ ಸ್ಥಳೀಯ ಬ್ಯೂರೋ ಮುಖ್ಯಸ್ಥ ಡಾ. ಬಾವೇಶ್ ಕುಮಾರ್ ಸಿಂಗ್, ದಿವಾಕರ್ ಸಿಂಗ್, ದಿನೇಶ್ ವ್ಯಾಸ್, ಜಿತೇಂದ್ರ ಗಿರಿ ಮತ್ತು ರಾಕೇಶ್ ಪಾಂಡೆ ಎಂದು ಗುರುತಿಸಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

 

Recent Articles

spot_img

Related Stories

Share via
Copy link