ಕೋಲ್ಕತ್ತಾ:
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಡಿರುವ ಗಡಿ ಪ್ರದೇಶಗಳಲ್ಲಿ ಮತದಾರರಿಗೆ ಬೆದರಿಕೆ ಹಾಕಲಾಗುತ್ತಿದೆ ಎನ್ನುವ ಆರೋಪಗಳು ‘ಆಧಾರರಹಿತ’ ಮತ್ತು ‘ಸತ್ಯಕ್ಕೆ ದೂರ’ ಎಂದು ಗಡಿ ಭದ್ರತಾ ಪಡೆ ಸೋಮವಾರ ಬಣ್ಣಿಸಿದೆ.
ಕೂಚ್ ಬೆಹಾರ್‌ನಲ್ಲಿ ಪಂಚಾಯತ್ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ಕೇಸರಿ ಪಾಳಯದ ಆಜ್ಞೆಯ ಮೇರೆಗೆ ಬಿಎಸ್‌ಎಫ್ ಗಡಿ ಪ್ರದೇಶಗಳಲ್ಲಿ ಮತದಾರರನ್ನು ಹೆದರಿಸುತ್ತಿದೆ ಎಂದು ಆರೋಪಿಸಿದರು ಮತ್ತು ಸೂಕ್ಷ್ಮವಾಗಿ ಗಮನಿಸುವಂತೆ ಪೊಲೀಸರನ್ನು ಕೇಳಿಕೊಂಡರು.
‘ಕೂಚ್ ಬೆಹಾರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಬಿಎಸ್‌ಎಫ್ ವಿರುದ್ಧ ಮಾಡಿದ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಮತ್ತು ಸತ್ಯಕ್ಕೆ ದೂರವಾಗಿವೆ’ ಎಂದು ಬಿಎಸ್‌ಎಫ್ ಗುವಾಹಟಿ ಫ್ರಾಂಟಿಯರ್ ಹೇಳಿಕೆಯಲ್ಲಿ ತಿಳಿಸಿದೆ.ಕೂಚ್ ಬೆಹರ್ ಬಿಎಸ್ಎಫ್‌ನ ಗುವಾಹಟಿ ಫ್ರಾಂಟಿಯರ್ ವ್ಯಾಪ್ತಿಯ ಅಡಿಯಲ್ಲಿ ಬರುತ್ತದೆ.