ದುಡಿಮೆಯ ಒಂದಂಶವನ್ನು ಸತ್ಕಾರ್ಯಗಳಿಗೆ ವಿನಿಯೋಗಿಸಿ

ಬ್ಯಾಲ್ಯ:

          ಭಕ್ತ ಸಮೂಹಕ್ಕೆ ದೇವರ ಅನುಗ್ರಹ ಪಡೆಯುವ ದರ್ಶನ ಮಾಡುವ ಹಂಬಲ ಹೇಗಿರುತ್ತದೆಯೋ ಹಾಗೆಯೇ ದೇವರಿಗೂ ಸಹ ತನ್ನ ಸನಿಧಿಗೆ ಬರುವ ಭಕ್ತಾದಿಗಳಲ್ಲಿ ಸದ್ಭಕ್ತರನ್ನು ಕಾಣುವ ಹಂಬಲವಿರುತ್ತದೆ ಎಂದು ಸಿದ್ದರಬೆಟ್ಟ ಶ್ರೀಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ನುಡಿದರು.
           ಅವರು ಕೊರಟಗೆರೆ ತಾಲ್ಲೂಕಿನ ದೇವರಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಬೆಟ್ಟದಲ್ಲಿ ನೆಲೆಸಿರುವ ಶ್ರೀ ಮುಕುಂದ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ನಡೆದ ಕಲ್ಯಾಣೋತ್ಸವ ಮತ್ತು ಸುದರ್ಶನ ಹೋಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಭಗವಂತ ನಿಷ್ಕಲ್ಮಶ, ನಿಷ್ಕಳಂಕ, ಅಹಂಕಾರವಿಲ್ಲದ ಮನಸ್ಸಿನ ಕಿಂಕರನೇ ಭಗವಂತಿಗೆ ಪ್ರಿಯವಾದ ಭಕ್ತ. ಹೆಸರಿನ ಹಂಬಲಕ್ಕಾಗಿ ಸನ್ಮಾನದ ಆಸೆಗಾಗಿ ಪುಣ್ಯ ಪ್ರಾಪ್ತಿಯ ಮೋಹಕ್ಕಾಗಿ ದಾನ ಮಾಡದೆ ತನ್ನ ದುಡಿಮೆಯ ಒಂದಂಶವನ್ನು ಸತ್ಕಾರ್ಯಗಳಿಗೆ ವಿನಿಯೋಗಿಸುವಂತೆ ತಿಳಿಸಿದರು.
           ಇದೇ ಸಂದರ್ಭದಲ್ಲಿ ದೇವಾಲಯದ ಟ್ರಸ್ಟ್ ವತಿಯಿಂದ ಪಾದಪೂಜೆ ಮಾಡಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್‍ನ ಗೌರವಾಧ್ಯಕ್ಷರಾದ ಸಿದ್ಧಲಿಂಗಪ್ಪ, ಅಧ್ಯಕ್ಷ ರಂಗನಾಥಪ್ಪ, ಕಾರ್ಯದರ್ಶಿ, ಅರ್ಚಕ ಸ್ವಾಮಿ ಸಹ ಕಾರ್ಯದರ್ಶಿ ಅರ್ಚಕರಾದ ಮೋಹನ್ ಕುಮಾರ್ ಆಗಮಿಕರಾದ ಸುದರ್ಶನ್, ಕಾರ್ಯದರ್ಶಿ ಸುರೇಶ್, ಖಜಾಂಚಿ ರಾಕೇಶ್, ನಾಗರಾಜ ಗೌಡ, ವೀರಭದ್ರಯ್ಯ ಮತ್ತು ದೇವರಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು. ಬಂದ ಭಕ್ತಾದಿಗಳಿಗೆ ಟ್ರಸ್ಟ್‍ನ ವತಿಯಿಂದ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು.

Recent Articles

spot_img

Related Stories

Share via
Copy link