ದೂರ ಉಳಿದ ಮೈಸೂರು ಶಾಸಕರು

ಬೆಂಗಳೂರು

      ಮೈಸೂರು ದಸರಾ ಮಹೋತ್ಸವ ಜೆಡಿಎಸ್ ಜಾತ್ರೆಯಾಗಿ ಮಾರ್ಪಟ್ಟಿದ್ದು, ಬಹುತೇಕ ಕಾಂಗ್ರೆಸ್ ನಾಯಕರು ಗೈರು ಹಾಜರಾಗಿದ್ದರು. ಮೈತ್ರಿ ಸರ್ಕಾರದಲ್ಲಿ ಸಮನ್ವಯತೆ ಇಲ್ಲ ಎನ್ನುವ ಸಂದೇಶ ದಸರಾ ಉದ್ಘಾಟನಾ ದಿನದಂದೇ ರವಾನೆಯಾಯಿತು. ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷಗಳ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಮೈಸೂರು ಜಿಲ್ಲೆಯ ಕಾಂಗ್ರೆಸ್ ಶಾಸಕರೇ ದೂರ ಉಳಿದಿರುವುದು ಹಲವು ಅನುಮಾನ ಉಂಟು ಮಾಡಿದೆ.

      ಮೈಸೂರು ಕಾಂಗ್ರೆಸ್ ಶಾಸಕರಾದ ವರುಣಾ ಕ್ಷೇತ್ರದ ಡಾ.ಯತೀಂದ್ರ ಸಿದ್ದರಾಮಯ್ಯ, ನರಸಿಂಹ ವಿಧಾನಸಭಾ ಕ್ಷೇತ್ರದ ತನ್ವೀರ್ ಸೇಠ್, ಎಚ್.ಡಿ.ಕೋಟೆ ಕ್ಷೇತ್ರದ ಅನಿಲ್ ಚಿಕ್ಕಮಾದು, ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ್ ಮೈಸೂರು ದಸರಾ ಉದ್ಘಾಟನೆಯಿಂದ ದೂರ ಉಳಿದಿದ್ದರು. ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಸಹ ಆಗಮಿಸಿರಲಿಲ್ಲ. ಇನ್ನು ಆರಂಭದಲ್ಲೇ ಅಪಸ್ವರ ಎತ್ತಿದ್ದ ಸಚಿವ ಪುಟ್ಟರಂಗಶೆಟ್ಟಿ ಸಹ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.

     ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲ ಹೊರತು ಪಡಿಸಿ ಯಾವ ಕಾಂಗ್ರೆಸ್ ನಾಯಕರೂ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಈ ಕಾರ್ಯಕ್ರಮ ಜೆಡಿಎಸ್ ಜಾತ್ರೆಯಾಗಿ ಮಾರ್ಪಟ್ಟಿತ್ತು. ಎರಡು ಬಾರಿ ದಸರಾ ಕಾರ್ಯಕಾರಿಣಿ ಸಭೆಗೆ ಕಾಂಗ್ರೆಸ್ ಜನಪ್ರತಿನಿಧಿಗಳು ಗೈರಾಗಿದ್ದರು. .

     ಇನ್ನು ಮೈಸೂರು ಪಾಲಿಕೆ ಮೇಯರ್ ಆಯ್ಕೆಯಾಗದ ಹಿನ್ನೆಲೆ, ಮೇಯರ್ ಇಲ್ಲದೆ ದಸರಾ ಮಹೋತ್ಸವ ಉದ್ಘಾಟನೆ ಮಾಡಲಾಯಿತು. ಈ ಹಿಂದೆಯೂ ಕೂಡ ಮೇಯರ್ ಅನುಪಸ್ಥಿತಿಯಲ್ಲಿ ಎರಡು ಬಾರಿ ಮೇಯರ್ ಇಲ್ಲದೆ ದಸರಾ ಉದ್ಘಾಟನೆ ನಾಡಲಾಗಿತ್ತು. 1995 ಮತ್ತು 2013 ರಲ್ಲಿ ಮೇಯರ್ ಇಲ್ಲದೆ ದಸರಾ ಆಚರಣೆ ಮಾಡಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link