ದೃಷ್ಟಿ ದಿವ್ಯಾಂಗಚೇತನ ಕಲಾವಿದರಿಂದ ಐತಿಹಾಸಿಕ ಸಂಗೀತ ಸಂಜೆ

ಬೆಂಗಳೂರು

      ಸಿಲಿಕಾನ್ ನಗರಿ ಬೆಂಗಳೂರು ನಗರದಲ್ಲಿ ಪ್ರತಿಭಾವಂತ ದೃಷ್ಟಿ ದಿವ್ಯಾಂಗಚೇತನ ಕಲಾವಿದರಿಂದ ಐತಿಹಾಸಿಕ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.

      ದೃಷ್ಟಿ ದಿವ್ಯಾಂಗರು ಎದುರಿಸುತ್ತಿರುವ ಸವಾಲುಗಳ ಕುರಿತಂತೆ ಜನ ಸಾಮಾನ್ಯರಲ್ಲಿ ಪ್ರಜ್ಞೆ ಮೂಡಿಸಲು ಇದೇ 27 ರಂದು ಬೆಂಗಳೂರಿನ ರಿಚ್ ಮಂಡ್ ಟೌನ್‍ನ ಗುಡ್ ಶೆಫರ್ಡ್ ಆಡಿಟೋರಿಯಂನಲ್ಲಿ ಮೆಗಾ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಒಟ್ಟು 40ಕ್ಕೂ ಹೆಚ್ಚು ದೃಷ್ಟಿ ದಿವ್ಯಾಂಗಚೇತನ ಕಲಾವಿದರು ಇದೇ ಮೊದಲ ಬಾರಿಗೆ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.

      ತಮ್ಮದೇ ಸಮುದಾಯದವರ ಸಮಸ್ಯೆಗಳ ನಿವಾರಣೆಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಾಮಾಜಿಕ ಕಳಕಳಿ ಉದ್ದೇಶದ ಕಾರ್ಯಕ್ರಮದಲ್ಲಿ ಪಂಡಿತ್ ಪುಟ್ಟರಾಜ ಗವಾಯಿ ದಿವ್ಯಾಂಗ ಟ್ರಸ್ಟ್, ರಮಣಮಹರ್ಷಿ ಅಕಾಡೆಮಿ ಆಫ್ ಬ್ಲೈಂಡ್ ಮತ್ತು ಉದಾನ್ ಫೌಂಡೇಷನ್‍ನ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.

      ಮೆಂಡೋಸಾ ಫೌಂಡೇಷನ್‍ನ ಟ್ರಸ್ಟಿ ಡಾ: ವಿವೇಕ್ ಜಿ. ಮೆಂಡೋಸ ಮಾತನಾಡಿ, ದೃಷ್ಟಿ ದಿವ್ಯಾಂಗ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಈ ಕಲಾವಿದರು ತಮ್ಮ ಪ್ರದರ್ಶವನ್ನು ಬೆಂಗಳೂರಿನಿಂದ ರಾಷ್ಟ್ರಮಟ್ಟಕ್ಕೆ ಕೊಂಡ್ಯೊಯ್ಯಲಿದ್ದಾರೆ. ವಿವಿಧ ಬಗೆಯ ಕಲಾವಿದರನ್ನು ಇದೇ ಮೊದಲ ಬಾರಿಗೆ ಒಂದೇ ವೇದಿಕೆ ಕರೆ ತರಲಾಗುತ್ತಿದೆ. ಖ್ಯಾತ ಸೆಲೆಬ್ರಿಟಿಗಳು ಮತ್ತು ವಿವಿಧ ಕ್ಷೇತ್ರದ ತಜ್ಞರು ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

      ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾಹಿತಿ ನೀಡಿದ ಸಂಘಟಕ ಎನ್.ಎನ್. ಪ್ರವೀಣ್ ಕುಮಾರ್, ದೃಷ್ಟಿ ದಿವ್ಯಾಂಗರಿಗಾಗಿ ನಿಧಿ ಸಂಗ್ರಹಿಸುವ ಉದ್ದೇಶದ ಈ ಅಭಿಯಾನಕ್ಕೆ ಹಲವಾರು ಮಂದಿ ಕೈ ಜೋಡಿಸಲಿದ್ದಾರೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ