ರಾಯಚೂರು:
ದೇಶಕ್ಕಾಗಿ ಹೋರಾಡುವ ಪ್ರಸಂಗ ಬಂದರೆ, ಸನ್ಯಾಸಿಯೂ ಸಹಾ ಸೈನಿಕನಾಗುತ್ತಾನೆ ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಮಹಾ ಭಗವತ್ಪಾದರು ಹೇಳಿದ್ದಾರೆ.
ಜಿಲ್ಲೆಯ ದೇವದುರ್ಗ ತಾಲೂಕಿನ ವೀರಗೋಟ ಆದಿ ಮೌನೇಶ್ವರ ದೇವಸ್ಥಾನದಲ್ಲಿ ಇಷ್ಟ ಲಿಂಗ ಮಹಾಪೂಜೆ ನೆರವೇರಿಸಿ ಮಾತನಾಡಿದ ಶ್ರೀಗಳು, ಉಗ್ರರು ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲಾ ಎನ್ನುವ ಸಂದೇಶ ಕೊಡಬೇಕಾಗಿದೆ ಎಂದು ಹೇಳುವ ಮೂಲಕ ಪುಲ್ವಾಮಾ ಘಟನೆಯನ್ನ ಖಂಡಿಸಿದರು.
ದೇಶಕ್ಕಾಗಿ ಹೋರಾಡುವ ಪ್ರಸಂಗ ಬಂದರೆ, ಸನ್ಯಾಸಿಯೂ ಸಹಾ ಸೈನಿಕನಾಗುತ್ತಾನೆ. ಈ ದೇಶದಲ್ಲಿ ರೈತ ಕೂಡಾ ಜವಾನ ಆಗ್ತಾನೆ. ಸರ್ಕಾರದ ಜೊತೆ ನಾವಿದ್ದೇವೆ. ಇಡೀ ದೇಶದ ಜನತೆ ಇದ್ದಾರೆ. ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರಕ್ಕೆ ಸ್ವಾಮೀಜಿ ಆಗ್ರಹಿಸಿದರು.
ಮಹಾಲಿಂಗಪೂಜೆಯಲ್ಲಿ ಸುಮಾರು 800 ಮಠಾಧೀಶರು ಹಾಗೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ