ದೇಶಕ್ಕೆ ಪ್ರಾಣಾರ್ಪಣೆ ಮಾಡಿದವರೇ ದೇಶ ಭಕ್ತರು

ಚಿತ್ರದುರ್ಗ;

         ಭಾರತ ಮಾತೆಯ ವಿಮೋಚನೆ ಸಂದರ್ಭಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಮುಕಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರೇ ನೈಜ ದೇಶಭಕ್ತರು ಎಂದು ಜನಪರ ಹೋರಾಟಗಾರ ನರೇನಹಳ್ಳಿ ಅರುಣ್ ಕುಮಾರ್ ಹೇಳಿದರು.

         ಎಂ.ಆರ್.ಪಿ. ಬಿಲ್ಡಿಂಗ್ ಸಭಾಂಗಣದಲ್ಲಿ ಕರ್ನಾಟಕ ಮುಸ್ಲಿಂ ಕಲ್ಚರ್ ಅಕಾಡೆಮಿ ವತಿಯಿಂದ ಏರ್ಪಡಿಸಲಾಗಿದ್ದ ಹುತಾತ್ಮ ಅಶ್ವಾಕುಲ್ಲಾ ಖಾನ್, ರಾಂಪ್ರಸಾದ್ ಬಿಸ್ಮಲ್ಲಾ,ರಾಜೇಂದ್ರ ಲಹರಿ ಠಾಕೋರ್, ರೋಷನ್ ಸಿಂಗ್,ಇವರ ತ್ಯಾಗ,ಬಲಿದಾನದ ಸ್ಮರಣೆ ಮತ್ತು ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ ಹೋರಾಟಕ್ಕೆ ಸಾಮಾಜಿಕ ಹೊಣೆಗಾರಿ ಇತ್ತೇವಿನ; ಯಾವುದೇ ರಾಜಕೀಯ ಉದ್ದೇಶಗಳಿರಲಿಲ್ಲ.

           ದೇಶಭಕ್ತರಿಗೆ ಬಹಳ ಜವಾಬ್ದಾರಿಗಳಿದ್ದು ಹಾಗಯೇ ರಾಷ್ಟ್ರವನ್ನು ಬ್ರಿಟಿಷರಿಂದ ವಿಮೋಚನೆಗೊಳಿಸುವುದೆ ಪ್ರತಿಯೊಬ್ಬರ ಕರ್ತವ್ಯವಾಗಿತ್ತು ಅಂದಿನ ಸಂದರ್ಭದಲ್ಲಿ ಅಲ್ಲಿ ಯಾರು ಜಾತಿ,ಧರ್ಮದ ಹುಡುಕಾಟಮಾಡಿದವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಂಡುಬರುವುದಿಲ್ಲ ಎಂದು ನುಡಿದರು.

          ಸ್ವಾತಂತ್ರ್ಯ ಸಂಗ್ರಾಮವು ದೇಶಿಯ ಜನರ ನೈe ಹೋರಾಟವಾಗಿದ್ದು. ದೇಶದ ಪ್ರತಿಯೋಬ್ಬ ಪ್ರಜೆಯ ತಮ್ಮ ನೈತಿಕತೆಯನ್ನು ಪ್ರದರ್ಶನ ಮಾಡಿದಂತಹ ಸಮಯವದು.ಅಂತಹ ಕಾಲಘಟ್ಟದಲ್ಲಿ ರೈಲ್ವೆಯೊಂದನ್ನು ಲೂಟಿಮಾಡಿ ದೇಶದ ಸೈನಿಕರಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿ ಹುರಿದುಂಬಿಸಿದ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ಅಶ್ವಾಕುಲ್ಲಾ ಖಾನ್ ಮತ್ತು ಅವರ ತಂಡ ಬ್ರಿಟಿಷರ ನ್ಯಾಯಾಲಯದ ಮುಂದೆ ಆರೋಪಿತರಾಗಿ ನಿಲ್ಲಬೇಕಾಗುತ್ತದೆ ಆದ್ದರಿಂದಲೇ ಅವರನ್ನು ಗಲ್ಲಿಗೇರಿಸಲಾಗುತ್ತದೆ ಆ ಕಾರಣಕ್ಕಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಮುಕಿದವರು ಹುತಾತ್ಮರಾಗುತ್ತರೆಂದರು.

            ಸ್ವಾತಂತ್ರ ಹೋರಾಟದಲ್ಲಿ ತಮ್ಮನ್ನು ತಾವೂ ಬಲಿದಾನಕ್ಕೆ ಇಡುಮಾಡಿಕೊಂಡವರು, ಹುತಾತ್ಮರಾದವರು ಮಾತ್ರ ನೈಜ ಹೋರಾಟಗಾರರಾಗುತ್ತಾರೆವಿನ; ದೇಶಭಕ್ತರು, ದೇಶಭಕ್ತರು ಎಂದು ಹಗಲು-ರಾತ್ರಿ ಹೇಳಿಕೊಳ್ಳುವವರು ಹೋರಾಟಗಾರರು ಆಗಲೂ ಸಾಧ್ಯವಿಲ್ಲ ಎಂದು ಹೇಳಿದರು.

          ಕರ್ನಾಟಕ ಮುಸ್ಲಿಂ ಕಲ್ಚರ್ ಅಕಾಡೆಮಿಯ ಅಧ್ಯಕ್ಷರಾದ ಎಂ. ಹನೀಪ್ ಅವರು ಮಾತನಾಡಿ ದೇಶದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಐಕ್ಯತೆಗೆ ಮುಸ್ಲಿಂ ಹೋರಾಟಗಾರರ ಕಾಣಿಕೆ ಬಹುದೊಡ್ಡದಿದ್ದು, ಈ ಸಮುದಾಯವನ್ನು ಕಡೆಗಣಿಸಲೂ ಸಾಧ್ಯವಾಗುವುದಿಲ್ಲ ಎಂದು ನುಡಿದರು.

           ಸ್ವಾತಂತ್ರ ಸಂಗ್ರಾಮವು ಜಾತಿ,ಧರ್ಮಗಳಿಗೆ ಸಿಮೀತವಾಗಿರಲ್ಲಿಲ್ಲ. ಎಲ್ಲಾ ಜಾತಿ,ಧರ್ಮ, ಪಂಥಗಳು ಒಂದಡೇ ಸೇರಿಕೊಂಡಗಾ ಮಾತ್ರ ಸ್ವಾತಂತ್ರ್ಯ ಪಡೆದುಕೊಳ್ಳಲು ಸಾಧ್ಯವಾಯಿತು ಎಂದರು.

          ದೇಶ,ರಾಷ್ಟ್ರ ಕಟ್ಟುವ ಕೆಲಸದಲ್ಲಿ ಎಲ್ಲಾ ಧರ್ಮಿಯರು ಕೈಜೋಡಿಸಿದ್ದಾರೆ ಸ್ವಾತಂತ್ರ ಭಾರತಕ್ಕೆ ಎಲ್ಲರ ಪಾಲು ಇದೆ ಎಂದು ಹೇಳಿದ ಅವರು ಇತಿಹಾಸಕಾರರು ದೇಶದ ಐಕ್ಯತೆಯ ದೃಷ್ಠಿಯಿಂದ ಉತ್ತಮವಾದ ಚರಿತ್ರೆಯನ್ನು ಬರೆದಿದ್ದಾರೆ.ಸಮಗ್ರ, ಸಮೃದ್ಧ,ಐಕ್ಯತೆ, ಸೌಹಾರ್ಧತೆ,ಸಹಾಭಾಳ್ವೆಯ ಭಾರತ ಕಟ್ಟುವುದು ಸ್ವಾತಂತ್ರ್ಯ ವೀರರ ಉದ್ದೇಶವಾಗಿತ್ತು ಆದರಂತೆಯೇ ನಡೆದಿದ್ದು ಮುಂದಿನ ದಿನಗಳಲ್ಲೂ ಜಾತ್ಯಾತೀತ ಭಾರತವಾಗಿ ಅಭಿವೃದ್ಧಿಯಾಬೇಕಾಗಿದೆ ಎಂದು ಎಂ.ಹನೀಫ್ ನುಡಿದರು.

         ಹುತಾತ್ಮರ ದಿನಾಚರಣೆ ಸಭೆಯಲ್ಲಿ ಇಖ್ರಾ ಯುವ ವೇದಿಕೆಯ ಅಧ್ಯಕ್ಷ ಆರೀಫ್,ಕಾರ್ಯದರ್ಶಿ ಫೈರೋಜ್ ಖಾನ್. ಅಸೀಫ್ ಮುಂತಾದವರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap