ದೇಶಕ್ಕೆ ಹಮ್ಮೆ ತರುವಂತಹ ಕಾರ್ಯ ಮಾಡೋಣ : ಸಪ್ತಶ್ರೀ

ತಿಪಟೂರು :

       ಮಹಾತ್ಮ ಗಾಂಧೀಜಿ, ಸುಭಾಷ್‍ಚಂದ್ರಬೋಸ್, ಬಾಲಗಂಗಾಧರ ತಿಲಕ್, ಮತ್ತಿತರ ಮಹನೀಯರ ತ್ಯಾಗಬಲಿದಾನದಿಂದ ನಾವಿಂದು ಆಂಗ್ಲರ ದಾಸ್ಯದಿಂದ ಬಿಡಗಡೆಹೊಂದಿದಕ್ಕೆ ಸ್ವತಂತ್ರ್ಯ ದಿನವನ್ನು ಆಚರಿಸುತ್ತಾ ನಾವೆಲ್ಲರೂ ದೇಶಕ್ಕೆ ಹೆಮ್ಮೆ ತರುವಂತಹ ಕಾರ್ಯಮಾಡಲು ಪಣತೊಡೋಣವೆಂದು ಉಪವಿಭಾಗಾಧಿಕಾರಿ ಸಪ್ತಶ್ರೀ ಕರೆನೀಡಿದರು.

      ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನದ ಅಂಗವಾಗಿ ರಾಷ್ಟ್ರಧ್ವವನ್ನು ಆರೋಹಿಸಿ ಮಾತನಾಡಿದ ಅವರು ನಮ್ಮ ಭಾತರ ದೇಶವು ಪುರಾತನ ಸಂಸ್ಕತಿ ಮತ್ತು ಮೌಲ್ಯಗಳಿಂದ ಸಮೃದ್ಧವಾಗಿದ್ದ ಭಾರತ್ವನ್ನು ನಮ್ಮ ವ್ಯಾಪಾರಕ್ಕೆ ಬಂದ ಆಂಗ್ಲರು ನಮ್ಮಲ್ಲಿನ ಒಡಕನ್ನು ಉಪಯೋಗಿಸಿಕೊಮಡು ದೇಶವನ್ನೇ ಕೊಳ್ಳೆಹೊಡೆದರು. ಆಂಗ್ಲರಿಂದ ಸ್ವಾತಂತ್ಯವನ್ನು ಪಡೆಯಲು ನಮ್ಮ ಅನೇಕ ನಾಯಕರುಗಳು ತ್ಯಾಗ ಬಲಿದಾನದ ಮೂಲಕ ಮತ್ತೆ ನಮಗೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟರು.

    ಇಂದು ನಾವು ಅಂಬೇಡ್ಕರ್ ರಚಿಸಿದ ಸಂವಿಧಾನದ ಮುಖಾಂತರ ದೇಶವನ್ನು ಪಾಲಿಸುತ್ತಾ ಇದ್ದೇವೆ. ನಾವು ಸ್ವಾತಂತ್ರ್ಯಾ ನಂತರ ದೇಶವನ್ನು ಅಭಿವೃದ್ಧಿ ಪತದತ್ತಸಾಗುತ್ತಿದ್ದು ಇದಕ್ಕೆ ಎಲ್ಲರೂ ಸಹಕರಿಸುತ್ತಿದ್ದಾರೆ. ಈಗ ನಾನು ಕುಲ, ಧರ್ಮ, ಜಾತಿ ಮತಗಳನ್ನು ಮೀರಿ ಚಂದ್ರಲೋಕಕ್ಕೆ ಪ್ರಯಾಣಿಸುತ್ತಿದ್ದಾವೆ ಎಲ್ಲರೂ ಭಾರತೀಯರೆಂದು ಹೇಳುತ್ತಾ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಪ್ರಯತ್ನಮಾಡೋಣ. ಹೆಚ್ಚಿನದಾಗಿ ಯುವಕರು ದೇಶವನ್ನು ಕಟ್ಟಲು ಕಟಿ ಬದ್ದರಾಗಬೇಕೆಂದರು.

    ಶಾಸಕ ಕೆ.ಷಡಕ್ಷರಿ ಮಾತನಾಡಿ ನಮ್ಮ ಹಿರಿಯರು ನಮಗೆ ಕೊಟ್ಟಿರುವ ಸವಾತಂತ್ರ್ಯವನ್ನು ನಾವೆಲ್ಲರೂ ಅನುಭವಿಸುತ್ತಾ ಅದನ್ನು ಕಾಪಾಡಬೇಕಿದೆ. ಅಂಬೇಡ್ಕರ್ ನೀಡಿರುವ ಸಂವಿಧಾನದ ಆಶಯದಂತೆ ಬಾಳುತ್ತ ಎಲ್ಲೆಡೆಯು ಸಾಂಶತಿ ಸಹಬಾಳ್ವೆಯನ್ನು ತರೋಣ, ದೇಶವನ್ನು ಅಭಿವೃದ್ಧಿ ಪತದತ್ತ ಸಾಗಿಸಲು ಎಲ್ಲರೂ ಒಂದಾಗಿ ಪ್ರಯತ್ನಿಸೋಣ. ನಮ್ಮ ಮೊದಲ ಆದ್ಯತೆ ಎಂದರೆ ಶಿಕ್ಷಣ, ಆರೋಗ್ಯ ಇವೆರಡನ್ನು ನೀಡುತ್ತಾ ಅಸಹಾಯಕರಿಗೆ ಶಕ್ತಿಯಾಗಿ, ಹಸಿದವರಿಗೆ ಅನ್ನವಾಗಿ, ನಿರುದ್ಯೋಗಿಗಳಿಗೆ ಉದ್ಯೋಗ ಭತ್ಯೆಯಾಗಿ, ಎಲ್ಲರಿಗೂ ಸೂರಾಗಿ ನಮ್ಮ ಕಾಂಗ್ರೆಸ್ ಸರ್ಕಾರ ನಿಂತಿದೆ ಇದನ್ನು ಬಳಸಿಕೊಂಡು ಎಲ್ಲರೂ ಅಭಿವೃದ್ಧಿಯಾಗ ಬೇಕೆಂದು ಕರೆನೀಡಿದರು.

    ಮಕ್ಕಳಿಗೆ ಸ್ವಾತಂತ್ರ್ಯದಿನದಂದು ರಜೆಯೇ : ತಾಲ್ಲೂಕಿನ ಹಲವಾರು ಶಾಲೆಗಳಲ್ಲಿ ಇಂದು ಶಾಲೆಯ ವಾಹನ ಬರುವುದಿಲ್ಲ ಬೇಕಾದರೆ ನೀವು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಬೇಕೆಂಬ ಅಘೋಷಿತವಾದ ನಿಯಮವು ಜಾರಿಯಾದಂತೆ ಕಾಣುತ್ತಿದೆ. ಸರ್ಕಾರಿ ಶಾಲೆಗಳು ಮತ್ತು ಎಲವು ಖಾಸಗಿ ಶಾಲೆಗಳನ್ನು ಬಿಟ್ಟರೆ ಬಹುತೇಕ ಶಾಲೆಗಳಲ್ಲಿ ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದಿನದ ರಜೆ ಇದ್ದಂತೆ ಕಂಡುಬರುತ್ತಿರುವು ಮಕ್ಕಳಿಗೆ ವರ್ಷಕ್ಕೊಂದು ಸ್ವಾತಂತ್ರ್ಯದಿನದಂದು ನಮಗೆ ಸ್ವತಂತ್ರ್ಯ ದಿನವನ್ನು ಏಕೆ ಆಚರಿಸುತ್ತೇವೆ, ಇದಕ್ಕೆ ಕಾರಣವೇನು, ಯಾರು ನಮಗೆ ಸ್ವಾತಂತ್ರ್ಯ ತಂದುಕೊಟ್ಟರು ಎಂಬ ಮಾಹಿತಿಯನ್ನು ತಿಳಿಸದೇ ಹೋದರೆ ಭವ್ಯಭಾರತದ ಮುಂದಿನ ಪ್ರಜೆಗಳಿಗೆ ನಮ್ಮ ಇತಿಹಾಸ ತಿಳಿಯುವುದಾದರು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಈ ಬಗ್ಗೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮತೆಗೆದುಕೊಂಡು ಮಾತ್ರ ನಮ್ಮ ದೇಶದ ಪ್ರತಿ ಮಗುವು ನಮ್ಮ ಸ್ವಾತಂತ್ರ್ಯದಿನದ ರಾಷ್ಟ್ರೀಯ ಹಬ್ಬಗಳ ಮಹತ್ವನ್ನು ತಿಳಿಯುವಂತೆ ಮಾಡಬೇಕಾಗಿದೆ.

     ಕಾರ್ಯಕ್ರಮದಲ್ಲಿ ನಗರಸಭೆಯ ಜನಪ್ರತಿನಿಧಿಗಳು, ತಹಸೀಲ್ದಾರ್ ಪವನ್‍ಕುಮಾರ್, ಡಿ.ವೈ.ಎಸ್ಪಿ ವಿನಾಯಕ್.ಎನ್.ಶೆಟಗೇರಿ, ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಯ್ಯ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಶಮಂತ, ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link