ಚಿತ್ರದುರ್ಗ
ದೇಶದಲ್ಲಿ ರಾಜಕೀಯಕ್ಕಾಗಿ ಸೈನಿಕರನ್ನು ಬಲಿ ಕೊಡಲಾಗುತ್ತಿದೆ. ಇದರಲ್ಲಿ ರಾಜಕೀಯ ಮಾಡಬಾರದು ಮನಸ್ಸಿಗೆ ಬೇಡವಾಗಿದ್ದರೂ ಸರ್ಕಾರಿ ಕಾರ್ಯಕ್ರಮಕ್ಕೆ ನೋವಿನಲ್ಲೂ ನಾವು ಭಾಗವಹಿಸಿದ್ದೆವೆ. ಎಂದು ಶಾಸಕ ತಿಪ್ಪಾರೆಡ್ಡಿ ಹೇಳಿದರು.
ಚಿತ್ರದುರ್ಗದ ರಂಗಮಂದಿರದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕತಿ ಇಲಾಖೆ ಆಯೋಜಿಸಿದ್ದ ಮಹಿಳಾ ಸಂಸ್ಕøತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಮೌನ ಮೆರವಣಿಗೆ ಮಾಡುವ ಮೂಲಕ ರಾಷ್ಟ್ರದ ದೇಶ ಸೇವೆ ಮಾಡುವ ಯೋಧರಿಗೆ ನಮನ ಸಲ್ಲಿಸಿದ್ದೆವೆ. ಉಗ್ರರು ಕೊಂದಿರುವ ನಮ್ಮವರೆ ಅಗಿದ್ದಾರೆ. ಭಾರತದ ಇತಿಹಾಸದಲ್ಲಿ ಎಂದೂ ನಡೆದಿಲ್ಲ. ನಮ್ಮನ್ನು ಅಗಲಿರುವ ಯೋಧರ ಕುಟುಂಬದ ಪರಿಸ್ಥಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ. ಯೋಧರ ಫೋಷಕರು ಕೂಲಿ ಮಾಡಿ ಮಕ್ಕಳನ್ನು ಸೈನ್ಯಕ್ಕೆ ಸೇರಿಸಿರುತ್ತಾರೆ. ಯೋಧರುಗಳು ತಮ್ಮ ಕುಟುಂಬಕ್ಕೆ ನೆರವಾಗಲು ಸೈನ್ಯಕ್ಕೆ ಸೇರುತ್ತಾರೆ. ಉತ್ತಮ ಆರ್ಥಿಕ ಜೀವನನಡೆಸುವ ಉದ್ದೇಶದಿಂದ ಈ ಸೈನ್ಯಕ್ಕೆ ಸೇರುತ್ತಾರೆ. ಅದರೆ ಇಲ್ಲಿ ಉಗ್ರರು ಇಂತವರನ್ನು ಕೊಲ್ಲುತ್ತಿದ್ದಾರೆ ಎಂದು ವಿಷಾಧಿಸಿದರು.
ದೇಶವನ್ನು ಕಾಪಾಡುವ ದೃಷ್ಟಿಯಿಂದಲೂ ಸೈನ್ಯಕ್ಕೆ ಸೇರಿ ಅವರು ಹಾಕುವ ಶ್ರಮಕ್ಕೆ ನಾವು ಏನೂ ಕೊಡಲು ಸಾಧ್ಯವಿಲ್ಲ. ಕೊರೆಯುವ ಚಳಿಯಲ್ಲಿ ನಮ್ಮ ದೇಶವನ್ನು ಕಾಯುತ್ತಾರೆ. ವರ್ಷಗಟ್ಟಲೆ ಕುಟುಂಬವನ್ನು ತೊರೆದು ಇರುತ್ತಾರೆ. ಪಾಕಿಸ್ತಾನದ ದುಷ್ಮನ್‍ಗಳು ಸೈನಿಕರ ರುಂಡಗಳನ್ನು ಚಂಡಾಡಿದ್ದಾರೆ. ಕೆಲವು ರಾಜಕೀಯ ನಾಯಕರುಗಳು ಮೋದಿಯವರನ್ನು ಸೋಲಿಸಲು ಪಾಕಿಸ್ತಾನ್‍ಗೆ ಹೋಗಿ ಅಲ್ಲಿ ಮೋದಿ ಸೋಲಿಸಲು ನಮಗೆ ಸಾತ್ ನೀಡಿ ಎಂದು ಕೇಳಿಕೊಂಡು ಬಂದಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದೆಯಾ ಎಂದ ಕಣ್ಣಲ್ಲಿನೀರು ಹಾಕಿದ ತಿಪ್ಪಾರೆಡ್ಡಿಯವರು.
ದೇಶದಲ್ಲಿ ರಾಜಕೀಯಕ್ಕಾಗಿ ಸೈನಿಕರನ್ನು ಬಲಿ ಕೊಡಲಾಗುತ್ತಿದೆ. ಇದರಲ್ಲಿ ರಾಜಕೀಯ ಮಾಡಬಾರದು ಅವರಿಗೆ ನಾವು ಕೊಡುವ ಹಣವಾಗಲಿ ಪರಿಹಾರವಾಗಲಿ ಕೆಲಸಕ್ಕೆ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ಪರವಾಗಿ ಮಾತನಾಡುವವರಿಗೆ ಹೇಳುತ್ತೇನೆ, ನೀವು ಪಾಕಿಸ್ತಾನ್ ಪರವಾಗಿ ಮಾತನಾಡುವುದು ಸರಿಯಲ್ಲ. ಮೋದಿಯವರು ಇನ್ನೊಂದು ಬಾರಿ ಗೆದ್ದಲ್ಲಿ ಪಾಕಿಸ್ತಾನ್‍ಗೆ ತಕ್ಕ ಪಾಠ ಕಲಿಸುತ್ತೆವೆ. ಇಂದು ಭಾರತಕ್ಕೆ ಪಾಕಿಸ್ತಾನದ ವಿರುದ್ದ ನಿಲ್ಲುವ ಶಕ್ತಿ ಬಂದಿದೆ. ವೀರ ಯೋಧರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಕಾನೂನು ಪ್ರಕಾರ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಈ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಇದು ಯಶಸ್ವಿಯಾಗಲಿ ಎಂದು ಹಾರೈಸುತ್ತೆನೆ ಎಂದರು. ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾಮಲ್ಲಿಕಾರ್ಜುನ್ ಮಾತನಾಡಿ, ದೇಶದಲ್ಲಿ ಅಂದಾಜು 125 ಕೋಟಿ ಜನರಿದ್ದಾರೆ. ನಿತ್ಯ ಒಂದು ರೂಪಾಯಿಯನ್ನು ಯೋಧರ ಕಲ್ಯಾಣ ನಿಧಿಗೆ ನೀಡಬೇಕು. ಅಂದರೆ ಒಬ್ಬ ಪ್ರಜೆ ಒಂದು ವರ್ಷಕ್ಕೆ 365 ರೂಪಾಯಿಯನ್ನು ಬ್ಯಾಂಕಿನಲ್ಲಿ ಕಡಿತಗೊಳಿಸಿ ನಿಧಿಗೆ ನೀಡಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಕಾಂತರಾಜ್ ಮಾತನಾಡಿ, ಮಹಿಳೆಯರು ಚುನಾಯಿತ ಪ್ರತಿನಿಧಿಗಳಾದ ಮೇಲೆ ಪತಿ, ತಂದೆ, ಸಹೋದರನ್ನು ಅಧಿಕಾರ ಚಲಾಯಿಸಲು ಬಿಡಬಾರದು. ತಾವೇ ಅಧಿಕಾರ ನಡೆಸುವಂತಾಗಬೇಕು. ಸರ್ಕಾರದ ಸೌಲಭ್ಯ ಬಳಕೆ ಮಾಡಿಕೊಂಡು ಸ್ವಾವಲಂಬನೆ ಜೀವನ ನಡೆಸುವಂತೆ ಕಿವಿಮಾತು ಹೇಳಿದರು.ಪೌರಾಯುಕ್ತ ಸಿ.ಚಂದ್ರಪ್ಪ ಮಾತನಾಡಿ, ಜಾಗತೀಕರಣ ನಗದೀಕರಣದಿಂದಾಗಿ ಸಮಯ ಇಲ್ಲವೆಂಬಂತಾಗಿದ್ದು ಒತ್ತಡದಲ್ಲಿ ಕೆಲಸ ಮಾಡಲಾಗುತ್ತಿದೆ. ಒತ್ತಡ ಮುಕ್ತ ಜೀವನಕ್ಕೆ ಇಂತಹ ಸಾಂಸ್ಕøತಿಕ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ. ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ರೇಖಾ, ನೃತ್ಯ ಕಲಾವಿದೆ ನಂದಿನಿಶಿವಪ್ರಕಾಶ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ರಂಗಭೂಮಿ ಕಲಾವಿದ ಕೆ.ಪಿ.ಎಂ.ಗಣೇಶಯ್ಯ, ಜಯಪ್ರಾಣೇಶ್ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ