ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಛೇರಿ ಉದ್ಗಾಟನೆ

ಬೆಂಗಳೂರು:

     ದೇಶದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿಯನ್ನು ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು  ಬೆಳಗ್ಗೆ ಜಿಪಿಒ ಬೆಂಗಳೂರಿನಿಂದ ರಿಮೋಟ್ ಮೂಲಕ ಉದ್ಘಾಟಿಸಲಿದ್ದಾರೆ. 

     ಮಾರ್ಚ್ 21ರಿಂದ ನಿರ್ಮಾಣ ಕಾರ್ಯ ಆರಂಭವಾಗಿದ್ದು 44 ದಿನಗಳ ಅವಧಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಇದನ್ನು ‘ಕೇಂಬ್ರಿಡ್ಜ್ ಲೇಔಟ್ ಪಿಒ’ ಎಂದು ಹೆಸರಿಸಲಾಗಿದೆ.

     ಕಟ್ಟಡದ ರಚನೆಯು ಮೇ 3ರೊಳಗೆ ಪೂರ್ಣಗೊಂಡಿದ್ದರೂ, ಒಳಚರಂಡಿ ಮತ್ತು ನೀರಿನ ಜಾಲವನ್ನು ರಚಿಸುವುದು ಎರಡು ತಿಂಗಳುಗಳನ್ನು ತೆಗೆದುಕೊಂಡಿತ್ತು. ನಂತರ ಸಚಿವರ ಸಮಯಾವಕಾಶಕ್ಕಾಗಿ ಇನ್ನೂ ಒಂದು ತಿಂಗಳು ಹಿಡಿಯಿತು. ಇನ್ನು ಔಪಚಾರಿಕವಾಗಿ 3ಡಿ ಮುದ್ರಿತ ಕಚೇರಿ ಆರಂಭದ ನಂತರ ಹಲಸೂರು ಬಜಾರ್‌ನಲ್ಲಿರುವ ಪ್ರಸ್ತುತ ಅಂಚೆ ಕಚೇರಿಯನ್ನು ಮುಚ್ಚಲಾಗುವುದು ಮತ್ತು ಸಿಬ್ಬಂದಿ ಮತ್ತು ಸಾಮಗ್ರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

      L&T ನಿರ್ಮಿಸುತ್ತಿರುವ ಕಟ್ಟಡವು ಸುಮಾರು 1,100 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. 3ಡಿ ಕಾಂಕ್ರೀಟ್ ಮುದ್ರಣದ ವೆಚ್ಚವು ತೆರಿಗೆಯೊಂದಿಗೆ ಸುಮಾರು 26 ಲಕ್ಷ ರೂಪಾಯಿ ಆಗಿದ್ದು ಪೇವರ್, ಡ್ರೈನೇಜ್ ಸಂಪರ್ಕ ಮತ್ತು ನೀರಿನ ಸಂಪರ್ಕದಂತಹ ಇತರ ವೆಚ್ಚಗಳನ್ನು ಅಂಚೆ ಇಲಾಖೆಯ ಸಿವಿಲ್ ವಿಂಗ್ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

      ಇತರ 3D-ಮುದ್ರಿತ ಕಟ್ಟಡವು ಉತ್ಪಾದನಾ ಸೌಲಭ್ಯದಲ್ಲಿ ಆಫ್-ಸೈಟ್ ಮುದ್ರಿತ ಅಂಶಗಳನ್ನು ನಿರ್ಮಿಸುವುದನ್ನು ಒಳಗೊಂಡಿರುತ್ತದೆ. ನಂತರ ಸೈಟ್ನಲ್ಲಿ ಜೋಡಿಸಲಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap