ಹರಪನಹಳ್ಳಿ:
ಪ್ರಧಾನಿ ನರೇಂದ್ರ ಮೋದಿಜಿ ದೇಶವನ್ನೆ ಕುಟುಂಭ ಎಂದು ಭಾವಿಸಿದ್ದರೆ, ರಾಹುಲ್ ಗಾಂಧಿ ಹಾಗೂ ದೇವೆಗೌಡರ ಸ್ವಕುಟುಂಭಕ್ಕಷ್ಟೇ ಸೀಮಿತವಾದ ಕುಟುಂಭ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ಮುಖಂಡ ನಂಜನಗೌಡ್ರು ಹೇಳಿದರು.
ಪಟ್ಟಣದ ಪ್ರೆಸ್‍ಕ್ಲಬ್‍ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ಕಾಂಗ್ರೆಸ್ ಕೇವಲ ಓಟಿನ ರಾಜಕಾರಣ ಮಾಡುತ್ತಿದೆ. ಬಿಜೆಪಿ ದೇಶದ ಉಳಿವಿಗಾಗಿ ರಾಜಕಾರಣ ಮಾಡುತ್ತಿದೆ. ದೇಶದ ಭದ್ರತೆ ಹಾಗೂ ಅಭಿವೃದ್ದಿಗಾಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಅನಿವಾರ್ಯವಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 23 ಸ್ಥಾನಗಳನ್ನು ಗಳಿಸುವುದು ಖಚಿತ ಎಂದರು.
ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಪ್ರಭುದ್ದ ರಾಜಕಾರಣಿಯಲ್ಲ ಎಂದು ಸ್ವಪಕ್ಷದವರೇ ಒಪ್ಪಿಕೊಂಡಿದ್ದಾರೆ. ಸುಪ್ರಿಂ ಕೋರ್ಟ್ ರಾಫೆಲ್ ಹಗರಣದಲ್ಲಿ ಗೊಂದಲವಿಲ್ಲ ಎಂದರೂ ಸಹ ತಮ್ಮ ಸ್ವಪ್ರತಿಷ್ಟೆಗಾಗಿ ಬಬಲ್‍ಗಮ್ ನಂತೆ ಎಳೆದದ್ದು ಅವರ ಅಪ್ರಭುದ್ದತೆಯನ್ನು ತೋರಿಸುತ್ತದೆ. ರಾಹುಲ್‍ಗಾಂಧಿ ದೇಶದ ಜನತೆಯ ಮುಂದೆ ಕ್ಷೆಮೆಯಾಚಿಸುವ ದಿನಗಳು ದೂರವಿಲ್ಲ ಎಂದರು.
ಮುಖಂಡ ಮಹಭಲೇಶ್ವರಗೌಡ ಮಾತನಾಡಿ. ತಾಲುಕಿನ ಪ್ರತೀ ಗ್ರಾಮಗಳಿಗೂ ಬೇಟಿ ನೀಡಿದ್ದೇವೆ. ಶೇಖಡ 70% ಮತದಾರ ಬೇಟಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಇಡೀ ತಾಲೂಕು ಬಿಜೆಪಿಗೆ ಒನ್ ವೇ ಆಗಿದೆ. ಪ್ರಚಾರದ ವೇಳೆ ಮೋದಿ ಪ್ರಧಾನಿಯಾಗುವ ಇಂಗಿತವನ್ನು ಪ್ರತಿಯೊಬ್ಬ ಮತದಾರನೂ ವ್ಯಕ್ತಪಡಿಸಿದ್ದಾನೆ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್‍ರವರಿಗೆ ತಾಲೂಕಿನಿಂದ 20 ಸಾವಿರ ಬಹುಮತ ದೊರೆಯುವ ನಿರೀಕ್ಷೆ ಬಹುತೇಕ ಖಚಿತವಾಗಿದೆ. ಮೋದಿಯವರ ಅಭಿವೃದ್ದಿಯ ಸಾಧನೆಗಳ ಜೊತೆಯಲ್ಲಿ ಪುಲ್ವಾಮ ದಾಳಿಯ ಪ್ರತಿಕಾರವಾಗಿ ಏರ್‍ಸ್ಟ್ರೈಕ್ ಮಾಡಿದ್ದನ್ನು ಜನರು ಮನಗಂಡಿದ್ದಾರೆ. ಜಿಲ್ಲೆಯಲ್ಲಿ ಸಿದ್ದೇಶ್ವರ್ ಕೇಂದ್ರದಲ್ಲಿ ನರೇಂದ್ರ ಮೋದಿ ಗೆಲುವು ಶತಸಿದ್ದ ಎಂದರು.
ಮುಖಂಡ ವೈ.ಕೆ.ಬಿ.ದುರುಗಪ್ಪ ಮಾತನಾಡಿ. ಜಾತಿರಹಿತ ರಾಜಕಾರಣ ಮಾಡಿರುವ ನರೇಂದ್ರ ಮೋದಿಯವರ ಸರಳ ಮತ್ತು ಸಜ್ಜನಿಕೆಯ ರಾಜಕಾರಣವನ್ನ ಮತ್ತೊಮ್ಮೆ ಜನರು ಬಯಸಿದ್ದಾರೆ. ವಿರೋಧಿಗಳಿಗೆ ನಿಷ್ಠೂರವಾದ ಪ್ರತಿಕ್ರಿಯೆ ನೀಡುವ ಮೋದಿಯವರು ನೂರಕ್ಕೆ ನೂರರಷ್ಟು ಪ್ರಧಾನಿಯಾಗುವುದು ನಿಶ್ಚಿತ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಪಂ ಸದಸ್ಯೆ ಸುವರ್ಣ ಆರುಂಡಿ ನಾಗರಾಜ್, ಮುಖಂಡರಾದ ಕಣಿವಿಹಳ್ಳಿ ಮಂಜುನಾಥ್, ಕೆ.ಲಕ್ಷ್ಮಣ್, ಆರುಂಡಿ ನಾಗರಾಜ್, ಬೆಣ್ಣಿಹಳ್ಳಿ ರೇವಣ್ಣ, ಓಂಕಾರಗೌಡ, ನೀಲಗುಂದ ನಾಗರಾಜ್ ಪಾಟೀಲ್, ವೆಂಟಕರಾವ್, ಜಿ.ಎಂ.ಸಿದ್ದೇಶ್ವರ ಸಹೋದರಿ ಪ್ರಮಿಳಾ ನಟರಾಜ್, ಲೀಲಾ ರಾಜಶೇಖರ್, ಗಾಯತ್ರಿ ಸುಭಾಷ್, ವೀಣಾ ಲಿಂಗರಾಜ್, ಶಿವಕುಮಾರ್ ಬೂದಾಳ್, ಕಸವನಹಳ್ಳಿ ನಾಗೇಂದ್ರಪ್ಪ ಹಾಗೂ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
