ದೇಶಾಭಿಮಾನಿಗಳ ಹೃದಯದಲ್ಲಿ ವಾಜಪೇಯಿ ಅಜರಾಮರ

ಹುಳಿಯಾರು :

          ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಪ್ಪಟ ದೇಶಾಭಿಮಾನಿಯಾಗಿದ್ದರು. ಅವರು ಇಂದು ದೈಹಿಕವಾಗಿ ನಮ್ಮನ್ನು ಅಗಲಿರಬಹುದು. ಆದರೆ ದೇಶಾಭಿಮಾನಿಗಳ ಹೃದಯದಲ್ಲಿ ಅವರು ಅಜರಾಮರರಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರು ಅಭಿಪ್ರಾಯಪಟ್ಟರು. ಹುಳಿಯಾರಿನ ಎಸ್‍ಬಿಐ ಬಳಿ ಏರ್ಪಡಿಸಿದ್ದ ವಾಜಪೇಯಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

           ದೇಶದ ಉದ್ದಗಲಕ್ಕೂ ವಿಶಾಲವಾದ ಹೆದ್ದಾರಿಗಳನ್ನು ಜೋಡಿಸುವ ಸುವರ್ಣ ಚತುಷ್ಪಥ ಯೋಜನೆ ಹಾಗೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗಳು ಅಟಲ್ ಜಿ ಅವಧಿಯ ಬಹು ಅಮೂಲ್ಯ ಕೊಡುಗೆಗಳಾಗಿವೆ. ಅಲ್ಲದೆ ಸರ್ವ ಶಿಕ್ಷಣ ಅಭಿಯಾನ ಮೂಲಕ ಬಾರತದ ಪ್ರತಿಯೊಬ್ಬ ಮಕ್ಕಳಿಗೂ ಉಚಿತ ಶಿಕ್ಷಣ ನಿಡುವ ಯೋಜನೆ ಜಾರಿಗೆ ತಂದಿದ್ದು, ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಯ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದು ವಾಜಪೇಯಿ ಅವರ ಸಾಧನೆಯಾಗಿದೆ ಎಂದು ತಿಳಿಸಿದರು.

           ವಾಜಪೇಯಿ ಅವರು ಗಂಗಾ-ಕಾವೇರಿ ನದಿ ಜೋಡಣೆಯ ಕನಸು ಕಂಡಿದ್ದರು. ಈ ಮೂಲಕ ದೇಶದ ರೈತರ ಕೃಷಿ ಚಟುವಟಿಕೆಗಳಿಗೆ ನೆರವಾಗುವ ಮಹತ್ವಾಕಾಂಕ್ಷೆ ಹೊಂದಿದ್ದರು. ಇವರ ಈ ಕನಸನ್ನು ನನಸು ಮಾಡುವ ಹೊಣೆ ರಾಜಕಾರಣಿಗಳ ಮೇಲಿದೆ. ಪ್ರತಿಯೊಬ್ಬ ಭಾರತೀಯರೂ ವಾಜಪೇಯಿ ಅವರಲ್ಲಿದ್ದ ದೇಶಾಭಿಮಾನ ಬೆಳೆಸಿಕೊಳ್ಳಬೇಕಿದೆ. ಪ್ರತಿಯೊಬ್ಬ ರಾಜಕಾರಣಿಗಳೂ ವಾಜಪೇಯಿ ಅವರ ಅಜಾತಶತ್ರು ಗುಣ ಬೆಳೆಸಿಕೊಳ್ಳಬೇಕಿದೆ ಎಂದರು.

           ಹಿಂದೂ ಜಾಗರಣೆ ವೇದಿಕೆ ಅಧ್ಯಕ್ಷ ಶ್ರೀಧರ್, ನಿವೃತ್ತ ಶಿಕ್ಷಕ ಹು.ಲ.ವೆಂಕಟೇಶ್, ದಾನಿಗಳಾದ ಬ್ಯಾಂಕ್ ಮರುಳಪ್ಪ, ದೇವರಾಜ್, ಪ್ರಕಾಶ್ ಚೌದ್ರಿ, ನರೇಂದ್ರಬಾಬು, ಸಿ.ವಿಶ್ವನಾಥ್, ಪೈಪ್ ಸ್ವಾಮಿನಾಥ್, ಗಂಗಣ್ಣ, ಕೈಲಾಶ್, ಬಾಲಾಜಿಸಿಂಗ್ ಮತ್ತಿತರರು ಇದ್ದರು.

Recent Articles

spot_img

Related Stories

Share via
Copy link