ದೊಡ್ಡಣ್ಣನಿಗೆ ಬೆವರಿಳಿಸಿದ ಚೀನಾ ಫೈಟರ್‌ ಜೆಟ್….!

ನವದೆಹಲಿ :

       ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಅಮೆರಿಕ & ಚೀನಾ ನಡುವಿನ ತಿಕ್ಕಾಟ ಮುಂದುವರಿದ್ದು, ಅಮೆರಿಕದ ಯುದ್ಧ ವಿಮಾನವು ತನ್ನ ವಾಯುಗಡಿ ಮೇಲೆ ಹಾರಾಟ ನಡೆಸುತ್ತಿದೆ ಎಂದು ಆರೋಪಿಸಿ ಚೀನಾ ರೊಚ್ಚಿಗೆದ್ದಿದೆ. ಇಷ್ಟಕ್ಕೇ ಬಿಡದೆ ಅಮೆರಿಕ ಯುದ್ಧ ವಿಮಾನಕ್ಕೆ ಚೀನಾ ಯುದ್ಧ ವಿಮಾನ ಟಾರ್ಚರ್ ಕೊಟ್ಟಿರುವ ಆರೋಪ ಕೂಡ ಕೇಳಿಬಂದಿದೆ. ಹೌದು, ದಕ್ಷಿಣ ಚೀನಾ ಸಮುದ್ರ ಭಾಗ ನನ್ನದು ಅಂತಾ ಈ ಮೊದಲಿನಿಂದ ಚೀನಾ ಘೋಷಿಸಿಕೊಂಡೇ ಬಂದಿದೆ. ಆದರೆ ಈ ವಿಚಾರದಲ್ಲಿ ಅಮೆರಿಕ ಕೂಡ ಹಠ ಮಾಡುತ್ತಿದ್ದು, ದಕ್ಷಿಣ ಚೀನಾ ಸಮುದ್ರ ಇಡೀ ಜಗತ್ತಿಗೆ ಸೇರಬೇಕು ಎಂದು ವಾದಿಸುತ್ತಾ ಬಂದಿದೆ. ಈ ನಡುವೆ ಅಮೆರಿಕ ಮತ್ತು ಚೀನಾ ಮಧ್ಯೆ ಇದೇ ವಿಚಾರಕ್ಕೆ ಸಿಕ್ಕಾಪಟ್ಟೆ ಕಿರಿಕ್ ಕೂಡ ಆಗುತ್ತಿದೆ. ಇದೀಗ ಕಿರಿಕ್ ದೊಡ್ಡ ಮಟ್ಟಕ್ಕೆ ಹೋಗಿದ್ದು, ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ಹಾರುತ್ತಿದ್ದ ಅಮೆರಿಕದ ಯುದ್ಧ ವಿಮಾನಕ್ಕೆ ಚೀನಾ ಯುದ್ಧ ವಿಮಾನ ಎಚ್ಚರಿಕೆ ರವಾನಿಸಿದೆ. 

     ಅದರಲ್ಲೂ ಚೀನಾದ ಜಲಗಡಿ ವಿಚಾರದಲ್ಲಿ ಅಮೆರಿಕ ಮೇಲಿಂದ ಮೇಲೆ ಕಿರಿಕ್ ಮಾಡುತ್ತಲೇ ಇದೆ. ಈಗಲೂ ಅಷ್ಟೇ ಸಾವಿರಾರು ಅಡಿ ಎತ್ತರದಲ್ಲಿ ತನ್ನ RC-135 ಯುದ್ಧ ವಿಮಾನ ಹಾರಿಸಿ ಶಾಕ್ ನೀಡಿದೆ ಅಮೆರಿಕ. ಹೀಗೆ ದಕ್ಷಿಣ ಚೀನಾ ಸಮುದ್ರದ ಮೇಲೆ ಅಮೆರಿಕದ ಯುದ್ಧ ವಿಮಾನ ಹಾರಾಟ ನಡೆಸುತ್ತಿರುವುದನ್ನು ಗಮನಿಸಿದ ಚೀನಾ, ಕೂಡಲೇ ಆ ಜಾಗಕ್ಕೆ ತನ್ನ J-16 ಫೈಟರ್ ಜೆಟ್ ಕಳುಹಿಸಿ ಶಾಕ್ ನೀಡಿದೆ. 

     ಅಮೆರಿಕದ ಯುದ್ಧ ವಿಮಾನದ ಸಮೀಪದಲ್ಲೇ ನುಗ್ಗಿ ಬಂದಿದೆ. ಆಗ ಶಾಕ್ ಆದ ಅಮೆರಿಕನ್ ಪೈಲಟ್, ತನ್ನ ವಿಮಾನ ಸೇಫ್ ಮಾಡಲು ಪ್ರಯತ್ನಿಸಿರೋದು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಕೂಡಲೇ ವಿಮಾನವನ್ನ ಬೇರೆ ಕಡೆಗೆ ತೆಗೆದುಕೊಂಡು ಹೋಗಲಾಗಿದ್ದು, ಚೀನಾ ಸೇನೆ ವಿರುದ್ಧ ಅಮೆರಿಕ ಮತ್ತಷ್ಟು ರೊಚ್ಚಿಗೆದ್ದಿದೆ. ಅಮೆರಿಕ ವಿರುದ್ಧ ಚೀನಾಗೆ ಸಿಟ್ಟು ಏಕೆ? ಅಮೆರಿಕ ಸೇನೆ ತೈವಾನ್ ಪರ ನಿಂತಿದೆ. ಚೀನಾ ಅದೇ ವಿಚಾರ ಹಿಡಿದು ತೈವಾನ್ ನಾಯಕರಿಗೆ ಎಚ್ಚರಿಕೆ ನೀಡುತ್ತಿದೆ.

     ಬೀಜಿಂಗ್ (Beijing) ಪದೇ ಪದೆ ತೈವಾನ್‌ಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಇದೇ ಸಂದರ್ಭದಲ್ಲಿ ತೈವಾನ್‌ಗೆ ಅಮೆರಿಕ 4 ಸಾವಿರ ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆಗೆ ಮುಂದಾಗಿದೆ ಎಂಬ ಮಾತು ಓಡಾಡ್ತಿದೆ. ಪರಿಸ್ಥಿತಿ ಇಷ್ಟು ಸೂಕ್ಷ್ಮವಾಗಿರುವ ಸಂದರ್ಭದಲ್ಲೇ ಅಮೆರಿಕ ಸೇನೆ ತನ್ನ ಯುದ್ಧ ವಿಮಾನವನ್ನ ವಿವಾದ ಇರುವ ಜಲಗಡಿ ಸಮೀಪದಲ್ಲೇ ತಂದಿರುವುದು ಚೀನಾ ಕೋಪವನ್ನ ನೆತ್ತಿಗೇರುವಂತೆ ಮಾಡಿದೆ.

     ಅಮೆರಿಕ ಸುಮ್ಮನೆ ಕೂರಲ್ವಾ? ಚೀನಾ ವಿರುದ್ಧ ಅಮೆರಿಕ ಏನಾದರೂ ಕಿರಿಕ್ ಮಾಡುತ್ತಲೇ ಬರುತ್ತಿದೆ. ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಕಿತಾಪತಿ ಕೈಬಿಟ್ಟಿಲ್ಲ. ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಾಗೇ ಸುಮ್ಮನೆ ಇರದೆ ತೈವಾನ್ ಸೇನೆಗೂ ಅಮೆರಿಕ ನೆರವು ನೀಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ತೈವಾನ್ ಜಲಸಂಧಿ ಮೂಲಕ ಸೇನಾ ಹಡಗನ್ನ ಪ್ರಯಾಣಿಸಿಕೊಂಡು ಹೋಗಿತ್ತು ಅಮೆರಿಕ.

     ಬಳಿಕ ಚೀನಾ ತನ್ನ ಶಕ್ತಿ ಏನು ಅಂತಾ ಶತ್ರು ರಾಷ್ಟ್ರ ತೈವಾನ್‌ಗೆ ತೋರಿಸುತ್ತಲೇ ಇದೆ. ಚೀನಾ ಸೇನೆ ತೈವಾನ್ ವಿರುದ್ಧ ನೇರ ತೊಡೆತಟ್ಟಿದೆ. ಇದೇ ಸಂದರ್ಭದಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ವಿಮಾನ ಪತ್ತೆಯಾಗಿದೆ. ಹಾಗೇ ಇನ್ನೊಂದು ಕಡೆ ಚೀನಾ ಸೇನೆ ಅಮೆರಿಕ ಸೇನೆಗೆ ಸೇರಿದ ಯುದ್ಧ ವಿಮಾನವನ್ನ ಅಲ್ಲಿಂದ ಓಡಿಸಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಮತ್ತೊಂದು ಯುದ್ಧದ ಮುನ್ಸೂಚನೆ ಸಿಗದೇ ಇರೋದಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ