ದೊಡ್ಮನೆ ಸೊಸೆಗೆ ಲೋಕಸಭಾ ಟಿಕೆಟ್‌ : ವರಿಷ್ಠರಿಗೆ ಬಿಟ್ಟ ವಿಚಾರ : ಮಧು ಬಂಗಾರಪ್ಪ

ತೀರ್ಥಹಳ್ಳಿ: 

      ಕೆಲ ದಿನಗಳ ಹಿಂದಷ್ಟೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ಬಂಗಾರಪ್ಪನವರ ಪುತ್ರಿ ಹಾಗೂ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಅವರ ಪತ್ನಿ ಶ್ರೀಮತಿ ಗೀತಾ ಶಿವರಾಜಕುಮಾರ್‌ ಅವಗೆ  ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

     ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ  ಮಾತನಾಡಿದ ಅವರು, ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಗೀತಾ ಅವರಿಗೆ ಪಕ್ಷದ ಹಿರಿಯರು ಸೂಚನೆ ನೀಡಿದ್ದಾರೆ. ಗೀತಕ್ಕ ಪಕ್ಷಕ್ಕೆ ಸೇರಿದ್ದಾರೆ. ಚುನಾವಣೆ ಸ್ಫರ್ಧೆ ಬಗ್ಗೆ ಪಕ್ಷದ ನಾಯಕರು ತೀರ್ಮಾನ ಮಾಡ್ತಾರೆ. ಅದನ್ನೆಲ್ಲಾ ನಾನು ಮಾತಾಡಲ್ಲ, ತಪ್ಪಾಗುತ್ತೇ ಎಂದರು.

 

    ಮಕ್ಕಳ ಶೂ ಸಾಕ್ಸ್ ಗೆ ಅನುದಾನ ಕಡಿಮೆ ಮಾಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅನುದಾನ ಮೊದಲೇ ಬಿಡುಗಡೆ ಮಾಡಲಾಗಿತ್ತು. ಇದೀಗ ಹೆಚ್ಚುವರಿ ಅನುದಾನ ಕೊಡಲಿದ್ದೇವೆ. ಗಂಡುಮಕ್ಕಳಿಗೂ ಸೈಕಲ್ ಕೊಡಲು ಪ್ರಸ್ತಾವ ಬಜೆಟ್‌ನಲ್ಲಿ ಸೇರಿಸಲು ಚರ್ಚಿಸಿದ್ದೇವೆ. ಎಷ್ಟು ಆಗುತ್ತೊ ಅಷ್ಟು ಮಾಡಲು ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link