ದ್ವಿಚಕ್ರ ವಾಹನ ಮತ್ತು ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅಂದರ್

ತುರುವೇಕೆರೆ:

       ತುರುವೇಕೆರೆ ತಾಲ್ಲೂಕು ಟಿ.ಬಿ.ಕ್ರಾಸ್ ಬಳಿ ಇರುವಾಗ್ಗೆ, ಒಂದು ಬೈಕ್ ನಲ್ಲಿ ಇಬ್ಬರು ವ್ಯಕ್ತಿಗಳು ಬರುತಿದ್ದು, ಪೊಲೀಸರನ್ನು ನೋಡಿ ಬೈಕ ನ್ನು ಬೇರೆಡೆಗೆ ತಿರುಗಿಸಿಕೊಂಡು ಹೋಗಲು ಪ್ರಯತ್ನಿಸುತಿದ್ದಾಗ, ಅನುಮಾನ ಬಂದು ವಶಕ್ಕೆ ತೆಗೆದುಕೊಂಡು ತುರುವೇಕೆರೆ ಸರ್ಕಲ್ ಇನ್ಸ್ ಪೆಕ್ಟರ್ ರವರ ಕಛೇರಿಯಲ್ಲಿ ವಿಚಾರಣೆಗೊಳಪಡಿಸಿದಾಗ ಒಬ್ಬನ ಹೆಸರು ಸಂತೋಷ  ಸಂತು ಬಿನ್ ದೇವರಾಜು, 32 ವರ್ಷ, ನಾಯಕ ಜನಾಂಗ, ಎಲೆಕ್ಟ್ರೀಕಲ್ ಕೆಲಸ, ಇಂದಿರಾನಗರ, ತುರುವೇಕೆರೆ ಟೌನ್ ಮತ್ತೊಬ್ಬನ ಹೆಸರು ದೇವರಾಜ @ ದೇವ ಬಿನ್ ಲೇಟ್ ಕೃಷ್ಣಪ್ಪ, 34 ವರ್ಷ, ಆದಿಕರ್ನಾಟಕ ಜನಾಂಗ, ಗಾರೆ ಕೆಲಸ, ವಾಸ- ಬೇಟೆರಾಯಸ್ವಾಮಿ ದೇವಸ್ಥಾನ ರಸ್ತೆ, ತುರುವೇಕೆರೆ ಟೌನ್, ಸ್ವಂತ ವಿಳಾಸ- ಎನ್.ರಾಂಪುರ, ನಿಟ್ಟೂರು ಹೋ, ಗುಬ್ಬಿ ತಾಲ್ಲೂಕು ಎಂಬುದಾಗಿ ತಿಳಿದು ಬಂದಿದ್ದು,

        ಈಗ್ಗೆ ಒಂದುವರೆ ವರ್ಷದ ಹಿಂದೆ ಆರೋಪಿತರುಗಳು ಬೇಟೆರಾಯಸ್ವಾಮಿ ದೇವಸ್ಥಾನದ ಬಳಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಸರವನ್ನು ಅಪಹರಿಸಿ, ನಂತರ ತುರುವೇಕೆರೆ ಟೌನ್ ನ ಬಿರ್ಲಾ ಕಾರ್ನರ್ ಬಳಿ ಮನೆಯೊಂದರ ಬೀಗ ಮುರಿದು ಮನೆಯಲ್ಲಿದ್ದ ನಗದು ಹಾಗೂ ಚಿನ್ನ ಮತ್ತು ಬೆಳ್ಳಿಯ ಒಡವೆಗಳನ್ನು ಕಳ್ಳತನ ಮಾಡಿ ಒಡವೆಗಳನ್ನು ಆರೋಪಿ ಸಂತೋಷನು ಅತನ ಮನೆಯಲ್ಲಿಟ್ಟಿದ್ದು, ಆನಂತರ ಆರೋಪಿ ಸಂತೋಷನು ಹಾಸನ ಜಿಲ್ಲಾ ಪೊಲೀಸರಿಗೆ ಕಳ್ಳತನ ಪ್ರಕರಣದಲ್ಲಿ ಸಿಕ್ಕಿ ಜೈಲಿಗೆ ಹೋಗಿಬಂದಿದ್ದು,

        ಈಗ್ಗೆ ಸುಮಾರು 4 ತಿಂಗಳ ಹಿಂದೆ ದೇವರಾಜನು ವಿದ್ಯಾನಗರದಲ್ಲಿ ಸ್ಟಾರ್ ಸಿಟಿ ಬೈಕನ್ನು ಕದ್ದು ಮನೆಯಲ್ಲಿಟ್ಟಿದ್ದು ಮತ್ತು ಈಗ್ಗೆ ಒಂದುವರೆ ತಿಂಗಳ ಹಿಂದೆ ಸಂತೋಷನು ತುರುವೇಕೆರೆಯ ವಿಶ್ವ ವಿಜಯ ವಿದ್ಯಾ ಶಾಲೆಯ ಬಳಿ ಸ್ಪ್ಲೆಂಡರ್ ಪ್ಲಸ್ ಬೈಕನ್ನು ಕಳ್ಳತನ ಮಾಡಿ ಅದೇ ಬೈಕಿನಲ್ಲಿ ಟಿ.ಬಿ.ಕ್ರಾಸ್ ಬಳಿ ಬರುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಮೇಲ್ಕಂಡ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿರುತ್ತೆ. ‘’ಆರೋಪಿಗಳಿಂದ 60 ಗ್ರಾಂ ಎರಡೆಳೆ ಚಿನ್ನದ ಸರ, 15 ಗ್ರಾಂ ನ ಎರಡು ಜೊತೆ ಚಿನ್ನದ ಓಲೆ, ಒಂದು ಜೊತೆ ಮಾಟಿ, ಒಂದು ಬೆಳ್ಳಿಯ ಪೂಜಾ ತಟ್ಟೆ, ಬೆಳ್ಳಿಯ ಎರಡು ದೀಪಗಳು ಮತ್ತು ಎರಡು ಮೋಟಾರು ಸೈಕಲ್ ಗಳನ್ನು ವಶಪಡಿಸಿಕೊಂಡಿರುತ್ತೆ.

         ಇವುಗಳ ಒಟ್ಟು ಮೌಲ್ಯ-3,15,000/- ರೂಗಳಾಗಿದ್ದು,‘’ ತನಿಖೆ ಕೈಗೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.ಸದರಿ ಕೇಸಿನಲ್ಲಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಕುಣಿಗಲ್ ಉಪವಿಭಾಗದ ಡಿ.ವೈ.ಎಸ್.ಪಿ. ಶ್ರೀ ವೆಂಕಟೇಶ್ ರವರ ಮಾರ್ಗದರ್ಶನದಲ್ಲಿ ತುರುವೇಕೆರೆ ಸಿ.ಪಿ.ಐ. ಸಿ.ಡಿ ಜಗದೀಶ್, ಪಿಎಸ್‍ಐ ರಾಜು ಜಿ.ಪಿ., ಎ.ಎಸ್.ಐ-ಕೃಷ್ಣಪ್ಪ.ಡಿ, ಸಿಬ್ಬಂದಿಯವರುಗಳಾದ ಮಂಜುನಾಥ್, ಮಲ್ಲಿಕಾರ್ಜುನ್, ಮಧುಸೂಧನ, ರಾಜಕುಮಾರ್, ಜೀಪ್ ಚಾಲಕ ಪರಮೇಶ್ ಮತ್ತು ಪಾರ್ವತಮ್ಮ ರವರುಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರವರು ಶ್ಲಾಘಿಸಿರುತ್ತಾರೆ.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link