ಬೆಂಗಳೂರು:
ಇನ್ನುಮುಂದೆ ಕ್ಲಬ್‌ಗಳು, ಪಬ್‌ಗಳು, ಬಾರ್ ಮತ್ತು ಹೋಟೆಲ್-ರೆಸ್ಟೊರೆಂಟ್‌ಗಳನ್ನು ‘ಸಂಪೂರ್ಣ ಧೂಮಪಾನ ನಿಷೇಧಿತ’ ಪ್ರದೇಶಗಳನ್ನಾಗಿ ರೂಪಿಸುವುದನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.
‘ಧೂಮಪಾನ ಮಾಡದ ಸಾರ್ವಜನಿಕರು ‘ಪರೋಕ್ಷ ಧೂಮಪಾನ’ದಿಂದ ಆರೋಗ್ಯ ಸಮಸ್ಯೆಗೆ ಒಳಗಾಗುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಈ ನಿಯಮವನ್ನು ಉಲ್ಲಂಘಿಸುವವರ ಪರವಾನಗಿ ರದ್ದುಪಡಿಸುತ್ತೇವೆ’ ಎಂದು ಪಾಲಿಕೆ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ಸಂಪೂರ್ಣ ನಿಷೇಧ ಮಾಡಿದ ರೀತಿಯಲ್ಲೇ, ಹೋಟೆಲ್, ಬಾರ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಪರೋಕ್ಷ ಧೂಮಪಾನಕ್ಕೆ ಅವಕಾಶ ಕಲ್ಪಿಸುತ್ತಿರುವ ‘ಧೂಮಪಾನ ಪ್ರದೇಶ’ಗಳನ್ನು ಸಂಪೂರ್ಣ ನಿಷೇಧ ಮಾಡಬೇಕು ಎಂದು ಅವರು ಸಲಹೆ ನೀಡಿದ್ದರು.
‘ಧೂಮಪಾನ ಪ್ರದೇಶ’ ಹೊಂದುವುದಾದರೆ, ಅದಕ್ಕೆ ಪಾಲಿಕೆಯ ತಂಬಾಕು ನಿಯಂತ್ರಣ ಕೋಶದಿಂದ ಅನುಮತಿ ಪಡೆಯುವುದು ಕಡ್ಡಾಯಧೂಮಪಾನ ಪ್ರದೇಶಕ್ಕೆ ತಿಂಡಿ, ಊಟ, ಮದ್ಯ, ಸಿಗರೇಟು, ನೀರು, ಟೀ, ಕಾಫಿ ಪೂರೈಕೆ ಮಾಡುವಂತಿಲ್ಲ ಹಾಗೂ ಅಪ್ರಾಪ್ತರಿಗೆ ಹಾಗೂ ಧೂಮಪಾನ ಮಾಡದ ಸಾರ್ವಜನಿಕರಿಗೆ ಈ ಪ್ರದೇಶಕ್ಕೆ ಪ್ರವೇಶಾವಕಾಶ ಇರಬಾರದು. ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ