ನಂದಿಬೇವೂರಿನಲ್ಲಿ ಅದ್ದೂರಿ ಕನ್ನಡ ರಾಜೋತ್ಸವ.

ಹರಪನಹಳ್ಳಿ:

     ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ಗುರುವಾರ ನವೆಂಬರ್ ಒಂದರ 63ನೇ ಕನ್ನಡ ರಾಜೋತ್ಸವವನ್ನು ಅತ್ಯಂತ ಸಂಬ್ರಮದಿಂದ ಅದ್ದೂರಿಯಾಗಿ ಆಚರಿಸಲಾಯಿತು.

      ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಕಲಾಕುಂಚ ಅಕಾಡೆಮಿ, ಗ್ರಾಮ ಪಂಚಾಯಿತಿ ಹಾಗೂ ಹಳೇ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಸ್ತಬ್ಧ ಚಿತ್ರಗಳ ಮೇರವಣಿಗೆಯನ್ನು ಹಮ್ಮಿಕೊಳ್ಳಲಾಯಿತು.

      ಕನ್ನಡ ತಾಯಿ ಭುವನೇಶ್ವರಿ ಚಿತ್ರಕ್ಕೆ ಪೂಜೆ ನೇರವೇರಿಸಿ, ಗ್ರಾಪಂ ಅಧ್ಯಕ್ಷ ಎಂ.ಪರಮೇಶ್ವರಪ್ಪ ಪುಷ್ಪ ಸಲ್ಲಿಸುವ ಮೂಲಕ ಮೇರವಣಿಗೆಗೆ ಚಾಲನೆ ನೀಡಿದರು.

      ವೀರಭದ್ರೇಶ್ವರ ನಂದಿಕೋಲು, ಸಮಾಳ, ಮಹಜನದಹಳ್ಳಿ ಗ್ರಾಮದ ಡೊಳ್ಳು ಕುಣಿತದೊಂದಿಗೆ ಮೇರವಣಿಗೆಯಲ್ಲಿ ಕರ್ನಾಟಕ ಏಕೀಕರಣದಿಂದ ಪ್ರಸ್ತುತ ವರ್ಷದ 63ನೇ ವರ್ಷದ ಕನ್ನಡ ಧ್ವಗಳನ್ನು ಹೊತ್ತ ಸೈಕಲ್‍ಗಳ ಜಾಥ, 63 ಅಡಿ ಉದ್ದನೇಯ ಬಾವುಟವನ್ನು ಶಾಲೆಯ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಹಾರಾಡಿಸಿದರು. ಸಾಹಿತಿಗಳ, ಕರ್ನಾಟಕ ಸ್ವಾತಂತ್ಯ ಹೋರಾಟಗಾರರ ವೇಷಧರಿಸಿದ ವಿದ್ಯಾರ್ಥಿಗಳ ಸ್ತಬ್ದ ಚಿತ್ರಗಳು ಮೇರವಣಿಗೆಯಲ್ಲಿ ಸಂಚಲನ ಸೃಷ್ಟಿಸಿದವು.

        ಈ ಸಂದರ್ಭದಲ್ಲಿ ಆಯೋಜಕರಾದ ಗಣೇಶ್ ಆಚಾರ, ಹೆಚ್.ಕೊಟ್ರೇಶ್, ಶಾಲೆಯ ಮುಖ್ಯೋಪಾಧ್ಯಾಯ ನಾಗರತ್ನಮ್ಮ, ಎಸ್.ವೀರಣ್ಣ, ಎಸ್‍ಡಿಎಂಸಿ ಉಪಾಧ್ಯಕ್ಷ ಡಿ.ಕರಿಬಸಪ್ಪ, ಸಿ.ವೀರೇಶ್, ಬಿ.ವಸಂತ, ಹೆಚ್.ನವೀನ್,ಚಿಗಟೇರಿ ನಾರಪ್ಪ, ಬೋವಿ ಸೋಮಶೇಖರ, ಹಳೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು, ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link