ಬೆಂಗಳೂರು:
ನಗರದಲ್ಲಿ ಈಗಿರುವ ಬೀದಿದೀಪಗಳ ಬದಲು ಎಲ್‌ಇಡಿ ದೀಪಗಳನ್ನು ಅಳವಡಿಸುವ ಟೆಂಡರ್‌ಗೆ ಬಿಬಿಎಂಪಿ ಸಭೆ ಅನುಮೋದನೆ ನೀಡಿತು.
ಶಹಪುರ್‌ಜಿ ಪಲ್ಲೋಂಜಿ ಕನ್ಸೋರ್ಟಿಯಂ ಕಂಪನಿಗೆ ಈ ಕಾಮಗಾರಿಯ ಗುತ್ತಿಗೆ ನೀಡಲು ಬಿಬಿಎಂಪಿ ನಿರ್ಧರಿಸಿದ್ದು, ಕಂಪನಿ ಒಟ್ಟು 800 ಕೋಟಿ ಹೂಡಿಕೆ ಮಾಡಲಿದೆ. ಬಿಬಿಎಂಪಿ ಯಾವುದೇ ಹೂಡಿಕೆ ಮಾಡುತ್ತಿಲ್ಲ. ಕಂಪನಿಯು ಅದಕ್ಕೆ ಪ್ರತಿಯಾಗಿ 10 ವರ್ಷಗಳಲ್ಲಿ 1500 ಕೋಟಿ ವರಮಾನ ಗಳಿಸಲಿದೆ.
ಎಲ್‌ಇಡಿ ಬಲ್ಬ್‌ಗಳ ಬಳಕೆಯಿಂದ ಶೇ 85ರಷ್ಟು ವಿದ್ಯುತ್ ಉಳಿತಾಯವಾಗಲಿದೆ. ಬಿಬಿಎಂಪಿಗೆ ಪ್ರತಿ ತಿಂಗಳ ವಿದ್ಯುತ್ ಬಿಲ್‌ನಲ್ಲಿ 17 ಕೋಟಿ ಉಳಿಯಲಿದೆ. ಈ ಪೈಕಿ 13.5 ಕೋಟಿಯನ್ನು ಬಿಬಿಎಂಪಿಯು ಕಂಪನಿಗೆ ಪಾವತಿಸಲಿದೆ’ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.
ಮೊದಲು ‘ಪ್ರಸ್ತುತ ಬೀದಿದೀಪಗಳು ಕೆಟ್ಟುಹೋದರೆ, ಅವುಗಳನ್ನು ಪತ್ತೆ ಹಚ್ಚಿ ಸರಿಪಡಿಸುವಾಗ ವಿಳಂಬವಾಗುತ್ತಿದೆ. ಹೊಸ ವ್ಯವಸ್ಥೆಯಿಂದ ಈ ಸಮಸ್ಯೆ ನಿವಾರಣೆ ಆಗಲಿದೆ. ಯಾವುದೇ ದೀಪ ಕೆಟ್ಟು ಹೋದರೂ ಕಂಪನಿ 48 ಗಂಟೆಗಳ ಒಳಗೆ ಅದನ್ನು ಸರಿಪಡಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲು ಅವಕಾಶ ಇದೆ’ ಎಂದು ಅವರು ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
