ನಗರದ ಜನರ ಹುಳಿಯಾರು ರಸ್ತೆಯ ಅಗಲೀಕರಣದ ಕನಸು ನನಸಾಗಿದೆ : ಪೂರ್ಣಿಮಾ ಶ್ರೀನಿವಾಸ್ ಚಾಲನೆ

ಹಿರಿಯೂರು :

      ಹಿರಿಯೂರು ನಗರವನ್ನು ಒಂದು ಮಾದರಿ ನಗರವನ್ನಾಗಿ ಮಾಡಬೇಕೆನ್ನುವುದು ನಮ್ಮ ಗುರಿಯಾಗಿದ್ದು. ಈ ನಿಟ್ಟಿನಲ್ಲಿ ನಗರದ ಜನರ ಬಹುದಿನಗಳ ಬೇಡಿಕೆಯಾದ ಮೈಸೂರು ರಸ್ತೆಯ[ಹುಳಿಯಾರು ರಸ್ತೆ] ಅಗಲೀಕರಣದ ಕನಸು ಈ ದಿನ ನನಸಾಗಿದೆ ಎಂಬುದಾಗಿ ಕ್ಷೇತ್ರದ ಶಾಸಕರಾದ ಶ್ರೀಮತಿ ಕೆ.ಪೂರ್ಣಿಮಾ ಶ್ರೀನಿವಾಸ್ ರವರು  ಹೇಳಿದರು.

      ನಗರದ ಮೈಸೂರು ರಸ್ತೆಯಲ್ಲಿ ಈ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ನಗರೋತ್ಥಾನದ 3ನೇ ಹಂತದ ಯೋಜನೆಯಡಿಯಲ್ಲಿ ನಗರದ ವಿಜಯ ಬ್ಯಾಂಕ್ ನಿಂದ ಹುಳಿಯಾರು ರಸ್ತೆಯ ಗಾಡಿಬಸಣ್ಣ ಲೇಔಟ್ ನ ಚಾನಲ್ ವರೆಗೆ ಹಾಗೂ ಈ ಚಾನಲ್ ನಿಂದ ಮೈಸೂರು ರಸ್ತೆಯ ನಗರದ ಸ್ವಾಗತ ಕಮಾನ್ ವರೆಗೆ ಸುಮಾರು 8 ಕೋಟಿ ರೂಗಳ ವೆಚ್ಚದಲ್ಲಿ ಈ ಎರಡು ಕಾಮಗಾರಿಗಳನ್ನು ಆರಂಭಿಸಲಿದ್ದು ಈ ಕಾಮಗಾರಿಗಳ ಮೂಲಕ ರಸ್ತೆ ಅಗಲೀಕರಣ, ರಸ್ತೆ ಎರಡು ಕಡೆ ಚರಂಡಿ,  ಪುಟ್ ಪಾತ್ ,  ರಸ್ತೆ ವಿಭಜಕ ಸೇರಿದಂತೆ ಬೀದಿ ದೀಪಗಳನ್ನು ಅಳವಡಿಸಲಾಗುವುದು ಎಂಬುದಾಗಿ ಅವರು ಹೇಳಿದರು.

      ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮುಖಂಡರಾದ ಡಿ.ಟಿ.ಶ್ರೀನಿವಾಸ್, ನಗರಸಭೆ ಅಧ್ಯಕ್ಷರಾದ ಮಂಜುಳ, ಉಪಾಧ್ಯಕ್ಷರಾದ ಇಮ್ರಾನ್ ಬಾನು, ಜಿ.ಪಂ.ಸದಸ್ಯೆ ರಾಜೇಶ್ವರಿ ನಗರಸಭೆ ಸದಸ್ಯರುಗಳಾದ ಟಿ.ಚಂದ್ರಶೇಖರ್,  ಪ್ರೇಮ್ ಕುಮಾರ್, ಹೆಚ್.ನಟರಾಜ್, ಜಬೀವುಲ್ಲಾ, ನಾರಾಯಣಚಾರ್, ಶಿವುಯಾದವ್, ಜೈರಾಜ್, ತಿಮ್ಮರಾಜ್, ಚಿರಂಜೀವಿ, ತಿಪ್ಪಮ್ಮ, ವನಿತಮ್ಮ, ಸುಜಾತ, ಉಷಾದೇವಿ, ನಗರಸಭೆ ಕಮೀಷನರ್ ರಮೇಶ್ ಸುಣಗಾರ್, ನಗರಸಭೆ ಇಂಜಿನಿಯರ್ ಗಳಾದ ಎಇಇ ಶ್ರೀನಿವಾಸ್, ಕೃಷ್ಣನಾಯ್ಕ, ನಿಕೇತನ್ ಕನ್ಸಲ್ ಟೆಸ್ಸಿ ಪ್ರಾಜೆಕ್ಟ್ ಮ್ಯಾನೆಜರ್ ರಮೇಶ್, ಬಿಜೆಪಿ ಮುಖಂಡರುಗಳಾದ ಅಸ್ಗರ್ ಅಹಮ್ಮದ್, ಗಂಗಾಧರ್, ಕೇಶವಮೂರ್ತಿ, ಕೆ.ವಿ.ರಂಗನಾಥ್, ಮಂಜುನಾಥ್, ಕಾಂತರಾಜ್, ಡಾ||ನಾಗೇಶ್, ಪ್ರಥಮದರ್ಜೆ ಗುತ್ತಿಗೆದಾರರಾದ ಡಿ.ನಾರಾಯಣರೆಡ್ಡಿ ಇತರರು ಉಪಸ್ಥಿತರಿದ್ದರು. ಈ ಕಾಮಗಾರಿಯನ್ನು ಎಸಿಆರ್ ಪ್ರಾಜೆಕ್ಟ್ ಬೆಂಗಳೂರು ಇವರಿಗೆ ಟೆಂಡರ್ ನೀಡಲಾಗಿದೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link