ನಗರದ ಪ್ರಮುಖ ಜಂಕ್ಷನ್ ಗಳಲ್ಲಿ ಸಿಟಿ ರೌಂಡ್ಸ್ ಅಂತ್ಯ : ಶೀಘ್ರ ಟ್ರಾಫಿಕ್ ಸಮಸ್ಯೆ ಬಗೆ ಹರಿಸಲು ಕ್ರಮ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಅಧಿಕಾರಿಗಳ ಜಂಟಿ ಪರಿಶೀಲನೆ

ಸಂಪೂರ್ಣ ಮಾಹಿತಿ ಪ್ರಜಾ ಪ್ರಗತಿ ಪತ್ರಿಕೆಯಲ್ಲಿ ಮಾತ್ರ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಪ್ರಮುಖ ಜಂಕ್ಷನ್ ಗಳನ್ನು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ನಗರ ಪೆÇ?ಲಿಸ್ ಆಯುಕ್ತ ಪ್ರತಾಪ್ ರೆಡ್ಡಿ ರವರು ಮಂಗಳವಾರ ರಾತ್ರಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

1 ಗೊರಗುಂಟೆ ಪಾಳ್ಯ ಜಂಕ್ಷನ್ ಪರಿಶೀಲನೆ: ನಗರದ ಗೊರಗುಂಟೆ ಪಾಳ್ಯ ಜಂಕ್ಷನ್ ಸುಮಾರು 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಪ್ರತಿನಿತ್ಯ ಸಹಸ್ರಾರು ವಾಹನಗಳು ಸಂಚರಿಸುತ್ತಿದ್ದಾವೆ. ವಾರದ ಕೊನೆಯ ದಿನ ಸಂಚಾರ ದಟ್ಟಣೆ ಇನ್ನೂ ಹೆಚ್ಚಾಗಿ ಸಾಲುಗಟ್ಟಲೆ ವಾಹನಗಳು ನಿಂತಿರುತ್ತವೆ. ಈ ಪೈಕಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಅಲ್ಪಾವಧಿಯ ಯೋಜನೆಗಳನ್ನು ಕೈಗೆತ್ತಿಕೊಂಡು ಅವುಗಳನ್ನು ತುರ್ತಾಗಿ ಪೂರ್ಣಗೊಳಿಸುವುದರಿಂದ ವಾಹನ ಸಂಚಾರ ದಟ್ಟಣೆ ಶೇ. 20 ಸುಧಾರಿಸಲಿದೆ. ತುರ್ತಾಗಿ ಈ ಕೆಲಸಗಳನ್ನು ಪ್ರಾರಂಭಿಸಲು ಆಡಳಿತಗಾರರಾದ ರಾಕೇಶ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗೊರಗುಂಟೆ ಪಾಳ್ಯ ಜಂಕ್ಷನ್ ನಲ್ಲಿ ಬಸ್ ಗಳು ರಸ್ತೆಯಲ್ಲೇ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಈ ಪೈಕಿ ಪೀಣ್ಯಾ ಬಸ್ ಟರ್ಮಿನಲ್ ಗೆ ಬಸ್ ಗಳು ಹೋಗುವ ವ್ಯವಸ್ಥೆ ಮಾಡಿದರೆ ಬಹುತೇಕ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಆದ್ದರಿಂದ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬ???ಗಳ ಸಂಚಾರವನ್ನು ನಗರದೊಳಗೆ ನಿಬರ್‍ಂಧಿಸಿ ಪೀಣ್ಯ ಬಸ್ ಟರ್ಮಿನಲ್ ಬಳಿಯೇ ಬಸ್ ನಿಲುಗಡೆ ಮಾಡುವ ಸಂಬಂಧ ಕೆಎ???ಆ???ಟಿಸಿ ಇಲಾಖೆ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ರಸ್ತೆ ಹಾಳಾಗಿದ್ದು, ದುರಸ್ತಿ ಕಾರ್ಯವನ್ನು ಕೂಡಲೇ ಆರಂಭಿಸಿ ರಸ್ತೆಯನ್ನು ಮಿಲ್ಲಿಂಗ್ (ರಸ್ತೆ ಮೇಲ್ಪದರವನ್ನು ಯಂತ್ರದ ಮೂಲಕ ಕೆರೆದು ಡಾಂಬರೀಕರಣ ಮಾಡುವುದು) ಮಾಡಿ ರಾತ್ರಿ ವೇಳೆ ಸಂಚಾರ ದಟ್ಟಣೆ ಕಡಿಮೆಯಿದ್ದು, ಸಂಚಾರಿ ಪೆÇಲೀಸ್ ಅಧಿಕಾರಿಗಳ ಸಹಯೋಗದೊಂದಿಗೆ ರಾತ್ರಿ 11.00 ಗಂಟೆಯ ನಂತರ ಗುಣಮಟ್ಟ ಕಾಪಾಡಿಕೊಂಡು ರಸ್ತೆ ದುರಸ್ತಿ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಹೆಬ್ಬಾಳದ ಕಡೆಯಿಂದ ಬರುವ ರಸ್ತೆ ಮಾರ್ಗದ ಜಂಕ್ಷನ್ ನಲ್ಲಿರುವ ಪೆÇಲೀಸ್ ಕಿಯೋಸ್ಕ್ ರಸ್ತೆಗೆ ಹೊಂದಿಕೊಂಡಿದ್ದು, ಇದರಿಂದ ನಗರದ ಕಡೆ ತಿರುವು ತೆಗೆದುಕೊಳ್ಳುವ ವಾಹನಗಳಿಗೆ ಸಮಸ್ಯೆಯಾಗುವುದನ್ನು ಗಮನಿಸಿ, ವಾಹನಗಳು ಸರಾಗವಾಗಿ ತಿರುವು ತೆಗೆದುಕೊಳ್ಳುವ ಸಲುವಾಗಿ ಪೆÇಲೀಸ್ ಕಿಯೋಸ್ಕ್ ಅನ್ನು ತೆರವು ಮಾಡಿ ಪಕ್ಕದಲ್ಲಿರುವ ಖಾಲಿ ಸ್ಥಳಕ್ಕೆ ಸ್ಥಳಾಂತರಿಸಿ ವಾಹನಗಳು ಸರಾಗವಾಗಿ ತಿರುವು ತೆಗೆದುಕೊಳ್ಳುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ದೀರ್ಘಾವಧಿ ಯೋಜನೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಪ್ಲಾನ್ ಮಾಡುತ್ತಿದ್ದು, ಸಮರ್ಪಕ ಯೋಜನೆ ರೂಪಿಸಲು ಬಿಡಿಎ ಆಯುಕ್ತರಿಗೆ ಸೂಚನೆ.

2. ಹೆಬ್ಬಾಳ ಜಂಕ್ಷನ್ ಪರಿಶೀಲನೆ: ನಗರದ ಹೆಬ್ಬಾಳ ಜಂಕ್ಷನ್ ತುಮಕೂರು ರಸ್ತೆ ಮೂಲಕ ಬಳ್ಳಾರಿ ರಸ್ತೆಯ ಕಡೆ ಹೋಗುವ ಸರ್ವೀಸ್ ರಸ್ತೆಯನ್ನು ಎನ್.ಹೆಚ್.ಎ.ಐ ಕಡೆಯಿಂದ ಅಭಿವೃದ್ಧಿಪಡಿಸಿ ಅಗಲೀಕರಣಗೊಳಿಸಿ, ಎಸ್ಟಿಮ್ ಮಾಲ್ ಮುಂಭಾಗ ರಸ್ತೆಯಲ್ಲಿ ಬಸ್ ಗಳು ನಿಲ್ಲುವುದನ್ನು ತಪ್ಪಿಸಿದಾಗ ಸ್ವಲ್ಪ ಮಟ್ಟದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯಲಿದೆ. ಈ ಸಂಬಂಧ ಎನ್.ಹೆಚ್.ಎ.ಐ ಕಡೆಯಿಂದ ಸೂಕ್ತ ಕ್ರಮ ಕೈಗೊಳ್ಳಲು ಆಡಳಿತಗಾರರು ಸೂಚನೆ ನೀಡಿದರು.

ಬಳ್ಳಾರಿ ರಸ್ತೆ(ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ) ಮಾರ್ಗದ ಮೇಲುಸೇತುವೆಯಿಂದ ಬರುವ ವಾಹನಗಳನ್ನು ನೇರವಾಗಿ ಹೆಬ್ಬಾಳದ ಮೇಲುಸೇತುವೆ ಮೂಲಕ ಹೋಗಲು ಅನುವು ಮಾಡಿ, ಸದರಿ ಮೇಲುಸೇತುವೆಯ ಕೆಳಗಿರುವ ರಸ್ತೆ ಮೂಲಕ ಬರುವ ವಾಹನಗಳನ್ನು ಮೇಲುಸೇತುವೆಯ ರಸ್ತೆಗೆ ಹೋಗಲು ಬಿಡದೆ ಮಿಡಿಯನ್ ಅಳವಡಿಸಿ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಬೇಕು. ನಗರದೊಳಗೆ ಹೋಗಬೇಕಿರುವ ವಾಹನಗಳು ಹೆಬ್ಬಾಳ ಜಂಕ್ಷನ್ ಮೂಲಕ ನಗರಕ್ಕೆ ಹೋಗಲು ಸಂಪರ್ಕವಿರುವ ಯಾರ್ಂಪ್ ಮೂಲಕ ಹೋಗಲು ಅವಕಾಶ ನೀಡಿದಲ್ಲಿ ಸಂಚಾರದಟ್ಟಣೆ ಕಡೆಮೆಯಾಗುವ ನಿರೀಕ್ಷೆಯಿದೆ. ಆದ್ದರಿಂದ ಈ ಕ್ರಮವನ್ನು ಕೂಡಲೆ ಜಾರಿಗೊಳಿಸಲು ಸಂಚಾರಿ ಪೆÇಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇನ್ನು ಹೆಬ್ಬಾಳ ಜಂಕ್ಷನ್ ನಲ್ಲಿ(ತುಮಕೂರಿನಿಂದ ಕೆ.ಆರ್.ಪುರ ಕಡೆಯ ರಸ್ತೆ) ನಗರದೊಳಗೆ ಹೋಗಲು ಸಂಪರ್ಕ ಕಲ್ಪಿಸುವ ಯಾರ್ಂಪ್ ಬಳಿ ಕೆ.ಆರ್.ಪುರದ ಕಡೆ ಹೋಗುವ ಬಸ್ ಗಳು ನಿಲ್ಲುವುದರಿಂದ ಸಂಚಾರ ದಟ್ಟಣೆಯಾಗುತ್ತಿರುವುದುನ್ನು ಗಮನಿಸಿ, ಕೆ.ಆರ್.ಪುರದ ಕಡೆ ಗಂಟೆಗೆ ಸುಮಾರು 150 ಬಸ್ ಗಳು ಹೋಗಲಿದ್ದು, ಎಲ್ಲಾ ಬಸ್ ಗಳನ್ನು ನಗರಕ್ಕೆ ಸಂಪರ್ಕವಿರುವ ಯರ್ಂಪ್ ಗಿಂತಲೂ ಮುಂದೆ ನಿಲ್ಲಿಸಬೇಕು. ಜೊತೆಗೆ ಯಾವ ಬಸ್ ಎಲ್ಲಿಗೆ ಹೋಗಲಿದೆ ಎಂಬುದರ ಬಗ್ಗೆ ಬಿ.ಎಂ.ಟಿ.ಸಿ ವತಿಯಿಂದ ಸೈನೇಜ್ ಗಳನ್ನು ಅಳವಡಿಸಬೇಕು. ಇದಲ್ಲದೆ ಪಾದಚಾರಿಗಳು ಒಂದೆಡೆ ಮಾತ್ರ ರಸ್ತೆ ದಾಟುವ ಸಲುವಾಗಿ ಜೀಬ್ರಾ ಕ್ರಾಸಿಂಗ್ ಮಾರ್ಕ್ ಗಳನ್ನು ಅಳವಡಿಸುವುದು ಹಾಗೂ ಬೀದಿ ದೀಪಗಳನ್ನು ಅಳವಡಿಸಿ ರಸ್ತೆ ಬದಿಯಿರುವ ಮರದ ಕೊಂಬೆಗಳನ್ನು ಕತ್ತಿರಲಸು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಪಾವಧಿ ಯೋಜನೆಗಳು:

ಪಾದಚಾರಿಗಳ ಓಡಾಟಕ್ಕೆ ಜೀಬ್ರಾ ಕ್ರಾಸಿಂಗ್ ನಿರ್ಮಾಣ
ಎಲ್ಲಾ ಬಸ್ ಗಳು ಒಂದೇ ಕಡೆ ನಿಲ್ಲಬೇಕು
ಯಾವ ಬಸ್ ಎಲ್ಲಿಗೆ ಹೋಗಲಿದೆ ಎಂಬುದರ ಬಗ್ಗೆ ಸೈನೇಜ್ ಅಳವಡಿಕೆ
ಬೀದಿ ದೀಪ ಅಳವಡಿಕೆ
ಪಾದಚಾರಿ ಮಾರ್ಗ ಅಭಿವೃದ್ಧಿ

ದೀರ್ಘಾವದಿ ಯೋಜನೆಗಳು: ಹೆಬ್ಬಾಳ ಜಂಕ್ಷನ್ ನಲ್ಲಿರುವ ರೈಲ್ವೇ ಹಳಿ ಕೆಳಗೆ ಪಾದಚಾರಿ ಓಡಾಟಕ್ಕೆ ಕೆಳಸೇತುವೆ ನಿರ್ಮಾಣ, ತುಮಕೂರು ರಸ್ತೆ ಮೂಲಕ ಬಳ್ಳಾರಿ ರಸ್ತೆಯ ಕಡೆ ಹೋಗುವ ಸರ್ವೀಸ್ ರಸ್ತೆ ಅಗಲೀಕರಣ ಮಾಡುವುದು. ಬಿಡಿಎ ವತಿಯಿಂದ ಹೆಚ್ಚುವರಿ ಮೇಲುಸೇತುವೆ ನಿರ್ಮಾಣ.

3. ಕೆ.ಆರ್.ಪುರ(ಟಿನ್ ಪ್ಯಾಕ್ಟರಿ) ಜಂಕ್ಷನ್ ತಪಾಸಣೆ: ನಗರದ ಕೆ.ಆರ್.ಪುರ(ಟಿನ್ ಪ್ಯಾಕ್ಟರಿ) ಜಂಕ್ಷನ್ ಬಳಿ ಬಸ್ ಗಾಗಿ ಪ್ರಯಾಣಿಕರು/ಸಾರ್ವಜನಿಕರು ಹ್ಯಾಂಗಿಂಗ್ ಮೇಲುಸೇತುವೆ ಪ್ರಾರಂಭದ ಬಳಿ ನಿಲ್ಲುತ್ತಾರೆ. ಇದರಿಂದ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಜೊತೆಗೆ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ಮಾರ್ಗದಲ್ಲಿ ಬಸ್ ಗಳು ನಿಲ್ಲುವುದರಿಂದ ಈ ಭಾಗದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಈ ಸಂಬಂಧ ರಸ್ತೆ ಬದಿಯಿದ್ದ ದೇವಸ್ಥಾನವನ್ನು ಸ್ಥಳಾಂತರಿಸಿ ಆ ಸ್ಥಳದಲ್ಲಿ ಬಸ್ ಗಳು ನಿಲ್ಲಲು ಬಸ್ ಆದ್ಯತಾ ಮಾರ್ಗ(ಬಸ್ ಬೇ) ಮಾಡಲಾಗುತ್ತಿದ್ದು, ಬುಹುತೇಕ ಕೆಲಸ ಪೂರ್ಣಗೊಂಡಿದೆ. ತ್ವರಿತವಾಗಿ ಕೆಲಸ ಮಾಡಿ ರಸ್ತೆಗೆ ಡಾಂಬರೀಕರಣ ಹಾಕಿ ಆ ಸ್ಥಳದಲ್ಲಿ ಬಸ್ ಗಳು ನಿಲ್ಲುವಂತೆ ಮಾಡಲು ಬಿ.ಎಂ.ಆರ್.ಸಿ.ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದೇ ರೀತಿ ನಗರದೊಳಗೆ ಬರುವ ರಸ್ತೆ ಬದಿಯೂ ಬಸ್ ಬೇ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಆ ಸ್ಥಳದಲ್ಲಿ ಮಾತ್ರ ಬಸ್ ಗಳು ನಿಲ್ಲುವಂತೆ ಸಂಚಾರಿ ಪೆÇಲೀಸ್ ವಿಭಾಗವು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಅಲ್ಪಾವದಿ ಯೋಜನೆ: ಬಸ್ ಆದ್ಯತಾ ಮಾರ್ಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ಬೀದಿ ದೀಪ ಅಳವಡಿಕೆ, ಪಾದಚಾರಿ ಮಾರ್ಗ ನಿರ್ಮಾಣ, ರಸ್ತೆಯಲ್ಲಿ ಬಸ್ ಗಳು ನಿಲ್ಲದಂತೆ ಕ್ರಮವಹಿಸುವುದು, ಸೈನೇಜ್ ಗಳ ಅಳವಡಿಕೆ

ದೀರ್ಘಾವಧಿ ಯೋಜನೆ: ರೈಲ್ವೆ ಬ್ರಿಡ್ಜ್ ಬಳಿ ಬಸ್ ಟರ್ಮಿನಲ್ ನಿರ್ಮಾಣ

ಈ ವೇಳೆ ಜಲಮಂಡಳಿ ಅಧ್ಯಕ್ಷ ಜಯರಾಮ್, ಬಿಡಿಎ ಆಯುಕ್ತ ರಾಜೇಶ್ ಗೌಡ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ, ಸಂಚಾರಿ ಪೆÇ?ಲಿಸ್ ಜಂಟಿ ಆಯುಕ್ತ ರವಿಕಾಂತೆ ಗೌಡ, ಸ್ಮಾರ್ಟ್ ಸಿಟಿ ಹಾಗೂ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ರಾಜೇಂದ್ರ ಚೋಳನ್, ಪಾಲಿಕೆಯ ಎಲ್ಲಾ ವಲಯ/ವಿಶೇಷ ಆಯುಕ್ತರುಗಳು, ಬಿ.ಎಂ.ಆರ್.ಸಿ.ಎಲ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap