ನಗರದ ಮತದಾರರ ಚಿತ್ತ ಭಾರತೀಯ ಜನತಾ ಪಕ್ಷದತ್ತ- ಬಿ.ವಿ.ಸಿರಿಯಣ್ಣ

ಚಳ್ಳಕೆರೆ

               ಪ್ರಸ್ತುತ ನಗರಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 23 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 18ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವ ವಿಶ್ವಾಸವನ್ನು ಹೊಂದಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ತಿಳಿಸಿದರು.

              ಅವರು, ಮಂಗಳವಾರ ನಗರದ 14, 15, 17, 18, 21, 29 ಮತ್ತು 30ನೇ ವಾರ್ಡ್‍ಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು. ಎಲ್ಲಾ ವಾರ್ಡ್‍ಗಳಲ್ಲೂ ಬಿಜೆಪಿ ಪಕ್ಷದ ಮುಖಂಡರು ಹಾಗೂ ಮಹಿಳೆಯರು ಮನೆ ಮನೆಗೂ ಭೇಟಿ ನೀಡಿ ಪಕ್ಷದ ಚಿಹ್ನೆಯಾದ ಕಮಲಕ್ಕೆ ಮತ ನೀಡುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಬಿ.ವಿ.ಸಿರಿಯಣ್ಣ ಈ ಬಾರಿ ನಗರಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿ ಹೆಚ್ಚಿನ ಸ್ಥಾನ ಗಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ನಗರದ ಜನತೆಗೆ ರಾಜ್ಯ ಹಾಗೂ ರಾಷ್ಟ್ರದ ಹಿತದೃಷ್ಠಿಯಿಂದ ಬಿಜೆಪಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡುತ್ತಿದ್ದು, ನಗರದ ನಾಗರೀಕರು ಬಿಜೆಪಿಯ ಬಗ್ಗೆ ಹೆಚ್ಚು ಒಲವನ್ನು ಹೊಂದಿದ್ಧಾರೆಂದು ಸಿರಿಯಣ್ಣ ತಿಳಿಸಿದರು.

                     ಚಳ್ಳಕೆರೆ ನಗರಕ್ಕೆ ಇಂದು ಸಮರ್ಥವಾಗಿ ಕುಡಿಯುವ ನೀರು ದೊರಕುವಂತಾಗಲು ಮಾಜಿ ಸಚಿವ ತಿಪ್ಪೇಸ್ವಾಮಿ ಅಂದಿನ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಮೇಲೆ ಒತ್ತಡ ತಂದ ಪ್ರತಿಫಲವೇ ಕಳೆದ 2017ರಲ್ಲಿ ವಿವಿಧ ಸಾಗರದ ನೀರು ಚಳ್ಳಕೆರೆಗೆ ಬರುವಂತಾಗಿದೆ ಎಂದರು. ನಗರದ ಅಭಿವೃದ್ಧಿಗೆ ಅವಶ್ಯವಿರುವ ಎಲ್ಲಾ ಯೋಜನೆಗಳನ್ನು ಭಾರತೀಯ ಜನತಾ ಪಕ್ಷ ಕೈಗೊಳ್ಳಲಿದೆ. ನಗರದ ನಾಗರೀಕರು ರಾಷ್ಟ್ರದ ಹಿತವನ್ನು ಗಮನಿಸಿ ಸ್ಥಳೀಯ ಸಂಸ್ಥೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಪ್ರಚಾರ ಕಾರ್ಯದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ.ಜಯಪಾಲಯ್ಯ, ಪಿ.ಬೋರನಾಯಕ, ದಿನೇಶ್‍ರೆಡ್ಡಿ, ಡಿ.ಎಂ.ತಿಪ್ಪೇಸ್ವಾಮಿ, ಎ.ವಿಜಯೇಂದ್ರ, ಅಭ್ಯರ್ಥಿಗಳಾದ ಲಕ್ಷ್ಮಣ್, ಆರ್.ನಾಗೇಶ್, ಎಂ.ಟಿ.ಪುಪ್ಪಲತಾ, ಪಾಲಮ್ಮ ಮುಂತಾದವರು ಉಪಸ್ಥಿತರಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap