ಚಳ್ಳಕೆರ

         ತಾಲ್ಲೂಕಿನ ನನ್ನಿವಾಳ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ತನ್ನ ಮೇಕೆ ಮರಿಯನ್ನು ರಸ್ತೆಯಿಂದ ಓಡಿಸಲು ಯತ್ನದಲ್ಲಿದ್ದ ನರಸಿಂಹ(17) ಎಂಬುವವನ ಮೇಲೆ ಟ್ರ್ಯಾಕ್ಟರ್ ಹರಿದ ಪರಿಣಾಮವಾಗಿ ಆತ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.
ಕೂಡ್ಲಗಿ ತಾಲ್ಲೂಕಿನ ನರಸಿಂಹನಗೆರೆ ವಾಸಿಯಾದ ಈತ ಇಲ್ಲಿ ತನ್ನ ಅಜ್ಜ ಅಜ್ಜಿ ಮನೆಗೆ ಬಂದಿದ್ದು, ಪ್ರಥಮ ಪಿಯುಸಿ ಓದುತ್ತಿದ್ದು, ರಜೆ ಹಿನ್ನೆಲೆಯಲ್ಲಿ ತಮ್ಮದೇಯಾದ ಮೇಕೆಗಳನ್ನು ಕಾಯಲು ರಸ್ತೆ ಬದಿ ಇದ್ದಾಗ ನನ್ನಿವಾಳ ಕಡೆಯಿಂದ ಚಳ್ಳಕೆರೆ ಕಡೆಗೆ ಬರುತ್ತಿದ್ದ ಟ್ರ್ಯಾಕ್ಟರ್‍ವೊಂದು ಈತನಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈತ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.
          ನಗರ ಅಂಬೇಡ್ಕರ್ ನಗರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹೊಟ್ಟೆನೋವು ವ್ಯಾದಿಗೆ ಒಳಗಾದ ತಿಮ್ಮಣ್ಣ(46) ಎಂಬ ವ್ಯಕ್ತಿ ತನ್ನ ಮನೆಯಲ್ಲೇ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಮೃತನ ಪತ್ನಿ ಸತ್ಯಮ್ಮ ಹಾಗೂ ಸಾಕು ಮಗಳು ಟಿ.ಶ್ವೇತ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾನೆ. ಸ
            ನಗರದ ಬೆಂಗಳೂರು ರಸ್ತೆಯಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಕಾರಿನ ಮುಂಭಾಗದ ಟೈರ್ ಸಿಡಿದು ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಓರ್ವ ವ್ಯಕ್ತಿಗೆ ಮಾತ್ರ ಗಾಯಗಳಾಗಿದ್ದು, ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಳ್ಳಕೆರೆ ಪೊಲೀಸ್ ಮೂರು ಪ್ರಕರಣದ ವಿಚಾರಣೆ ನಡೆಸಿದ್ಧಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ