ಹಿರಿಯೂರು :
ನಗರದ ಚಿಕ್ಕಪೇಟೆ ಬಳಿ ಇರುವ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಇದರ ಅಂಗವಾಗಿ ಸ್ವಾಮಿಗೆ ಅರ್ಚನೆ ಅಭಿಷೇಕ ವಿಶೇಷ ಪೂಜೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಿತು.ಇದೇ ಸಂದರ್ಭದಲ್ಲಿ ಶ್ರೀಕರ ಭಜನಾ ಮಂಡಳಿಯ ಶ್ರೀಮತಿ ಕೃಷ್ಣಕುಮಾರಿ ಮತ್ತು ತಂಡದವರಿಂದ ಭಜನೆ ಹಾಗೂ ದೇವರ ನಾಮಗಳ ಹಾಡುಗಾರಿಕೆ ನಡೆಯಿತು. ನಗರದ ಅನೇಕ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
