ಚಳ್ಳಕೆರೆ
ಈ ಭಾರಿಯ ನಗರಸಭಾ ಚುನಾವಣೆಯ ಫಲಿತಾಂಶ ಹಲವಾರು ದಿಕ್ಕುಗಳಿಂದ ಯೋಚಿಸಿದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲಾಭವನ್ನು ತಂದುಕೊಡುವ ನಿರೀಕ್ಷೆ ಇದೆ. ಕಳೆದ ಅವಧಿಯಲ್ಲಿ ನಗರಸಭೆ ಸದಸ್ಯರಾಗಿದ್ದ ಸುಮಾರು 16 ಜನ ಸದಸ್ಯರು ಮತ್ತೊಮ್ಮೆ ಎರಡನೇ ಬಾರಿಗೆ ಚುನಾವಣೆ ಸ್ಪರ್ಧಿದ ಅ ಪೈಕಿ 3 ಸದಸ್ಯರು ಮಾತ್ರ ಯಶಸ್ಸಿಯಾಗಿದ್ದು, 13 ಸದಸ್ಯರಿಗೆ ಮತದಾರರು ಮಾನ್ಯತೆ ನೀಡಿಲ್ಲ.
ಕಳೆದ ಅವಧಿಯಲ್ಲಿ ಸದಸ್ಯರಾಗಿದ್ದ ಜೆಡಿಎಸ್‍ನ ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್ ಎರಡನೇ ಬಾರಿಗೆ ಆಯ್ಕೆಯಾದರೆ, ನಾಲ್ಕು ಬಾರಿ ಸದಸ್ಯರಾಗಿ ಆಯ್ಕೆಯಾಗಿ 5ನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಹಿರಿಯ ಸದಸ್ಯರಾದ ಪೊಲೀಸ್ ವೀರಣ್ಣ ಈ ಬಾರಿ ಮೊದಲ ಸಲ ಬಿ.ಟಿ.ರಮೇಶ್‍ಗೌಡ ಎದುರು ಸೋಲಿನ ರುಚಿ ಕಂಡಿದ್ಧಾರೆ. ಉಳಿದಂತೆ ಲಕ್ಷ್ಮಿದೇವಿ, ನಾಗವೇಣಮ್ಮ, ಜೆ.ಕೆ.ರವಿ, ಟಿ.ಜೆ.ವೆಂಕಟೇಶ್, ವಿ.ರಾಮು, ಎಂ.ಮಂಜುನಾಥ, ರವಿಕುಮಾರ್, ಪರಿಮಳ, ಟಿ.ವಿಜಯಕುಮಾರ್, ರೇಷ್ಮಭಾನು, ಮಹದೇವಮ್ಮ ಮುಂತಾದವರು ಸೋಲು ಅನುಭವಿಸಿದ್ಧಾರೆ.
ನಗರಸಭೆಯ 9, 26 ಮತ್ತು 27 ವಾರ್ಡ್‍ಗಳಲ್ಲಿ ಮಾತ್ರ ಈ ಹಿಂದೆ ಸ್ಪರ್ಧಿಸಿದ್ದ ಸದಸ್ಯರಾದ ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್, ಬಿ.ಟಿ.ರಮೇಶ್‍ಗೌಡ ಪುನರಾಯ್ಕೆಯಾಗಿದ್ದು, ಉಳಿದಂತೆ 1ನೇ ವಾರ್ಡ್‍ನ ಸಾಕಮ್ಮ, 2ನೇ ವಾರ್ಡ್‍ನ ವೈ.ಪ್ರಕಾಶ್, 3ನೇ ವಾರ್ಡ್ ಆರ್.ರುದ್ರನಾಯಕ, 4ನೇ ವಾರ್ಡ್ ಕೆ.ಸಿ.ನಾಗರಾಜು, 5ನೇವಾರ್ಡ್ ಟಿ.ಮಲ್ಲಿಕಾರ್ಜುನ, 6ನೇ ವಾರ್ಡ್ ಕವಿತಾ, 7ನೇ ವಾರ್ಡ್ ಟಿ.ಶಿವಕುಮಾರ್, 8ನೇ ವಾರ್ಡ್ ಸುಜಾತ, 10ನೇ ವಾರ್ಡ್‍ನ ಸುಮಾ, 11 ವಾರ್ಡ್ ಜಯಣ್ಣ, 12ನೇ ವಾರ್ಡ್ ವಿಶುಕುಮಾರ್, 13ನೇ ವಾರ್ಡ್ ಕವಿತಾನಾಯಕಿ, 14ನೇ ವಾರ್ಡ್ ಜಿ.ಗೋವಿಂದ, 15ನೇ ವಾರ್ಡ್ ಜಯಲಕ್ಷ್ಮಿ, 16ನೇ ವಾರ್ಡ್‍ನ ನಾಗಮಣಿ, 17ನೇ ವಾರ್ಡ್ ಸುಮಕ್ಕ, 18ನೇ ವಾರ್ಡ್ ಎಂ.ಜೆ.ರಾಘವೇಂದ್ರ, 19 ವಾರ್ಡ್ ಕವಿತಾ, 20 ವಾರ್ಡ್ ನಿರ್ಮಲ, 21 ವಾರ್ಡ್ ಎಂ.ಸಾವಿತ್ರಿ, 22 ವಾರ್ಡ್ ತಿಪ್ಪಮ್ಮ, 23ನೇ ವಾರ್ಡ್ ವಿರೂಪಾಕ್ಷ, 24ನೇ ವಾರ್ಡ್ ಆರ್.ಮಂಜುಳಾ, 25ನೇ ವಾರ್ಡ್ ಚಳ್ಳಕೇರಪ್ಪ, 28ನೇ ವಾರ್ಡ್ ಕೆ.ವೀರಭದ್ರಯ್ಯ, 29ನೇ ವಾರ್ಡ್ ಎಚ್.ಪ್ರಶಾಂತ್‍ಕುಮಾರ್, 30 ವಾರ್ಡ್ ಪಾಲಮ್ಮ, 31ನೇ ವಾರ್ಡ್ ಜೈತುಂಬಿ ಇದೇ ಮೊದಲ ಬಾರಿಗೆ ನಗರಸಭೆಯನ್ನು ಪ್ರವೇಶಿಸಿದಿದ್ಧಾರೆ.
ಹಣವಿಲ್ಲದೆ ಗೆದ್ದ ಅಭ್ಯರ್ಥಿ :- ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯೂ ಶಕ್ತಿ ಮೀರಿ ಮತದಾರರಿಗೆ ಹಣವೂ ಸೇರಿದಂತೆ ಅನೇಕ ರೀತಿಯ ಆಮಿಷಗಳನ್ನು ಒಡ್ಡಿದ್ದಾರೆ. ಆದರೆ, ಮತದಾರ ಪ್ರಾಮಾಣಿಕ ವ್ಯಕ್ತಿಗಳಿಗೂ ಸಹ ಗೌರವಿಸುತ್ತಾನೆ ಎಂಬುವುದಕ್ಕೆ 29ನೇ ವಾರ್ಡ್ ನಿಂದ ವಿಜೇತರಾದ ಜೆಡಿಎಸ್‍ನ ಎಚ್.ಪ್ರಶಾಂತ್‍ಕುಮಾರ್ ಉತ್ತಮ ಉದಾಹಣೆಯಾಗುತ್ತಾನೆ. ಇವರ ಎದುರಾಳಿಗಳು ಮತದಾರರಿಗೆ ನಿರೀಕ್ಷೆಗೂ ಮೀರಿ ಹೆಚ್ಚು ಹಣಕೊಟ್ಟರು ಸಹ ಮತದಾರರು ಇವರನ್ನು ಕೈಬಿಟ್ಟಿಲ್ಲ ಎಂಬುವುದು ಅವರ ಅಭಿಪ್ರಾಯ.
ನೂತನವಾಗಿ ಆಯ್ಕೆಯಾದ 31ನೇ ವಾರ್ಡ್‍ನ ಸದಸ್ಯ ಜೈತುಂಬಿ ಮಾತನಾಡಿ, ನಾನು ಗುಜರಿ ಅಂಗಡಿ ನಡೆಸುತ್ತಿದ್ದು, ಚುನಾವಣೆಗೆ ಸ್ಪರ್ಧಿಸುವ ಇಚ್ಚೆ ಇದ್ದಿಲ್ಲ. ಆದರೆ, ನಾಮಪತ್ರ ಸಲ್ಲಿಕೆಯ ಒಂದೆರಡು ದಿನವಿದ್ದಾಗ ನನಗೆ ಕಾಂಗ್ರೆಸ್ ಪಕ್ಷದ ಆಹ್ವಾನ ನೀಡಿ ಸ್ಪರ್ಧೆಗೆ ಇಳಿಯುವಂತೆ ಮಾಡಿತು. ಜನರು ನನ್ನನ್ನು ಆಯ್ಕೆ ಮಾಡಿದ್ಧಾರೆ. ವಾರ್ಡ್‍ನ ಅಭಿವೃದ್ಧಿಯ ಬಗ್ಗೆ ಪ್ರಾಮಾಣಿಕ ಸೇವೆ ಸಲ್ಲಿಸುವೆ ಎಂದರು.
10ನೇ ವಾರ್ಡ್ ನಿಂದ ಜಯಸಾಧಿಸಿದ ಕಾಂಗ್ರೆಸ್ ಸದಸ್ಯೆ ಸುವi ಮಾತನಾಡಿ, ನಾನು ರಾಜಕೀಯಕ್ಕೆ ಹೊಸಬಳಾಗಿದ್ದು, ನನಗೆ ಚುನಾವಣೆಯ ಬಗ್ಗೆ ಮತ್ತು ರಾಜಕೀಯ ಬಗ್ಗೆ ಯಾವುದೇ ಸೂಕ್ತ ಮಾಹಿತಿ ಇಲ್ಲ. ಆದರೆ ನನ್ನ ಪತಿ ಭರಮಣ್ಣ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತೆ ಸೂಚನೆ ನೀಡಿದ್ದು ನೀನು ಸ್ಪರ್ಧಿಸಬೇಕು ಎಂದು ನನ್ನನ್ನು ಚುನಾವಣೆಗೆ ನಿಲ್ಲಿಸಿದರು. ನನಗೆ ಭಯವಿತ್ತು ಆದರೆ, ಮತದಾರರು ನನಗೆ ತೋರಿಸಿದ ಪ್ರೀತಿ ವಿಶ್ವಾಸ ಹಾಗೂ ಗೌರವ ನನಗೆ ಜಯ ತಂದುಕೊಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ