ನಗರಸಭೆಯ ಚುನಾವಣೆಯ ಮತಗಳ ಏಣಿಕೆ : ಅನುಮತಿ ಇದ್ದವರಿಗೆ ಮಾತ್ರ ಕಡ್ಡಾಯ ಪ್ರವೇಶ

ಚಳ್ಳಕೆರೆ

              ನಗರಸಭೆಯ 30 ವಾರ್ಡ್‍ಗಳ ಚುನಾವಣೆ ಈಗಾಗಲೇ ಮುಗಿದಿದ್ದು, ಸೋಮವಾರ ಬೆಳಗ್ಗೆ 7ಕ್ಕೆ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಮತಗಳ ಏಣಿಕೆ ಪ್ರಾರಂಭವಾಗಲಿದ್ದು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ನಿಮಗದಿಯ ಸಮಯಕ್ಕಿಂತ ಅರ್ಥಗಂಟೆ ಮುಂಚೆ ತಾಲ್ಲೂಕು ಕಚೇರಿಯ ಮತ ಏಣಿಕೆ ಕೇಂದ್ರಕ್ಕೆ ಆಗಮಿಸುವಂತೆ ತಹಶೀಲ್ದಾರ್ ಟಿ.ಸಿ.ಕಾಂತರಾಜು ಮನವಿ ಮಾಡಿದ್ಧಾರೆ.
              ಈಗಾಗಲೇ ಮತದಾನದ ಸಂದರ್ಭದಲ್ಲಿ ಎಲ್ಲರೂ ಶಾಂತಿಯುತವಾಗಿ ಚುನಾವಣೆ ನಡೆಸಲು ತಾಲ್ಲೂಕು ಆಡಳಿತಕ್ಕೆ ಸಹಕಾರ ನೀಡಿದ್ದು, ಮತ ಏಣಿಕೆ ಕಾರ್ಯಕ್ಕೂ ಸಹ ಇದೇ ರೀತಿ ಸಹಕಾರ ನೀಡಿವಂತೆ ಮನವಿ ಮಾಡಿದ್ಧಾರೆ. ಮತ ಏಣಿಕೆ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು 144 ಸೆಕ್ಷನ್ ಜಾರಿ ಮಾಡಿರುವುದರಿಂದ ಮತ ಏಣಿಕೆ ಕೇಂದ್ರದ ಸುತ್ತ ನಿಷೇದಾಜ್ಞೆ ಜಾರಿಯಲ್ಲಿದ್ದು, ಅನಗತ್ಯ ಯಾರೂ ಸಹ ಗುಂಪು ಸೇರಬಾರದು, ಜೈಕಾರ ಹಾಕಬಾರದು, ಮೆರವಣಿಗೆ ಮಾಡುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ ಮತ್ತು ಡಿ.ಜೆ, ಡ್ರಂಸೆಟ್ ಮುಂತಾದವುಗಳನ್ನು ಉಪಯೋಗಿಸುವಂತಿಲ್ಲವೆಂದು ತಿಳಿಸಿದ್ದಾರೆ.
              ಜಿಲ್ಲಾ ಚುನಾವಣಾ ವೀಕ್ಷಕರಾದ ತಿಮ್ಮಣ್ಣ ಸಮಕ್ಷಮದಲ್ಲಿ ಈಗಾಗಲೇ ಅಭ್ಯರ್ಥಿಗಳನ್ನು ಕರೆದು ಮತ ಏಣಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿಲಾಗಿದೆ. ಒಟ್ಟು 6 ಸುತ್ತುಗಳಲ್ಲಿ ಮತ ಏಣಿಕೆ ಕಾರ್ಯ ನಡೆಯಲಿದ್ದು, 5 ಟೆಬಲ್‍ಗಳನ್ನು ಮತ ಏಣಿಕೆಗಾಗಿ ಸಿದ್ದ ಪಡಿಸಿದೆ. ಯಾವ ಟೆಬಲ್‍ನಲ್ಲಿ ಯಾವ ಮತ ಕೇಂದ್ರದ ಏಣಿಕೆ ನಡೆಯಲಿದೆ ಎಂಬ ಬಗ್ಗೆ ಈಗಾಗಲೇ ಬಹುತೇಕ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಆ ಸಂದರ್ಭದಲ್ಲೂ ಸಹ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಗುವುದು.
              ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮತ ಏಣಿಕೆ ಕೇಂದ್ರಕ್ಕೆ ಅನಗತ್ಯವಾಗಿ ಯಾವುದೇ ವ್ಯಕ್ತಿಗೂ ಪ್ರವೇಶವಿರುವುದಿಲ್ಲ. ಯಾವುದೇ ಪಕ್ಷದ ರಾಜಕೀಯ ಪದಾಧಿಕಾರಿಗಳಿಗೂ ಸಹ ಪ್ರವೇಶ ನಿರ್ಬಂಧಿಸಲಾಗಿದೆ. ಮತ ಏಣಿಕೆ ಕೇಂದ್ರದ ಪಕ್ಕದಲ್ಲೇ ಮಾದ್ಯಮ ಕೇಂದ್ರವನ್ನು ಸ್ಥಾಪಿಸಿದ್ದು, ಅಲ್ಲಿರುವ ಎಲ್ಲಾ ಪತ್ರಕರ್ತರಿಗೆ ಮತ ಏಣಿಕೆ ಪ್ರಗತಿಯ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು.
              ಡಿವೈಎಸ್ಪಿ ಎಸ್.ರೋಷನ್ ಜಮೀರ್ ಪತ್ರಿಕೆಗೆ ಮಾಹಿತಿ ನೀಡಿ, ಈಗಾಗಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು, ಈ ಸಂದರ್ಭದಲ್ಲಿ ಯಾವುದೇ ಗುಂಪು ಘರ್ಷಣೆಗೆ ಅವಕಾಶವಿಲ್ಲದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಮತಗಳ ಏಣಿಕೆ ನಂತರ ವಿಜೇತ ಅಭ್ಯರ್ಥಿ ಯಾವುದೇ ಮೆರವಣಿಗೆ ನಡೆಸದೆ ಬೆಂಬಲಿಗರೊಂದಿಗೆ ಸೇರಿ ವಿಜಯೋತ್ಸವ ಆಚರಿಸದಂತೆ ನಿರ್ಬಂಧ ಹೇರಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಅಭ್ಯರ್ಥಿಗಳು ಚುನಾವಣಾ ನಿಯಮಗಳನ್ನು ತಪ್ಪದೆ ಪಾಲಿಸಬೇಕಿದೆ. ಯಾವುದೇ ಹಂತದಲ್ಲೂ ಅಹಿತಕರ ಘಟನೆ ನಡೆಸಲು ಮುಂದಾದಲ್ಲಿ ನಿದ್ರಾಕ್ಷಣ್ಯವಾಗಿ ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಅವರು ನೀಡಿದ್ಧಾರೆ.
               ಮತ ಏಣಿಕೆ ನಡೆಯುವ ಇಲ್ಲಿನ ತಾಲ್ಲೂಕು ಕಚೇರಿ ಪ್ರವೇಶ ದ್ವಾರದಲ್ಲಿ ಸಾರ್ವಜನಿಕ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇದಿಸಲಾಗಿದೆ. ಮತ ಏಣಿಕೆ ಕೇಂದ್ರದ ಸುತ್ತಲು ಪೊಲೀಸ್ ಬಿಗಿ ಕಾವಲವನ್ನು ಏರ್ಪಸಿದ್ದು, ಚುನಾವಣಾ ಅಧಿಕಾರಿಗಳಿಂದ ಗುರುತಿನ ಚೀಟಿ ಪಡೆದವರಿಗೆ ಮಾತ್ರ ಒಳಗೆ ಪ್ರವೇಶವಿದೆ. ಅನಗತ್ಯವಾಗಿ ಯಾವುದೇ ವ್ಯಕ್ತಿ ಮತಗಳ ಏಣಿಕೆ ಕೇಂದ್ರದ ಬಳಿ ಬರಲು ಪ್ರಯತ್ನಿಸಿದರೆ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ವೃತ್ತ ನಿರೀಕ್ಷ ಎನ್.ತಿಮ್ಮಣ್ಣ ನೀಡಿದ್ಧಾರೆ.
               ಮತಗಳ ಏಣಿಕೆಯ ಬಗ್ಗೆ ಮಾಹಿತಿ ನೀಡಿದ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇವಿಎಂ ಮತಯಂತ್ರಗಳನ್ನು ನಗರಸಭೆ ಚುನಾವಣೆಯಲ್ಲಿ ಉಪಯೋಗಿಸಿದ್ದು, ಮತಗಳ ಏಣಿಕೆ ಅತ್ಯಂತ ವೇಗವಾಗಿ ನಡೆಯಲು ಅನುಕೂಲವಾಗಿದೆ. ಸಂಬಂಧಪಟ್ಟ ವಾರ್ಡ್ ಮತ ಏಣಿಕೆ ಸಂದರ್ಭದಲ್ಲಿ ಹಾಜರಿರುವ ಸಮಕ್ಷಮದಲ್ಲಿ ಈಗಾಗಲೇ ಸೀಜ್ ಆಗಿರುವ ಇವಿಎಂ ಯಂತ್ರವನ್ನು ಅವರ ಸಮಕ್ಷಮದಲ್ಲೇ ತೆರೆದು ಮಾಹಿತಿ ನೀಡಲಾಗುವುದು. ಇದರಿಂದ ಯಾವುದೇ ರೀತಿಯ ಗೊಂದಲ ಉಂಟಾಗದು ಎಂದಿದ್ಧಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap