ಚಳ್ಳಕೆರೆ-
ನಗರಸಭಾ ಚುನಾವಣೆಗೆ ಆಗಸ್ಟ್ 31ರಂದು ಮತದಾನ ನಡೆಯಲಿದ್ದು, ಈಗಷ್ಟೇ ನಾಮಪತ್ರ ಸಲ್ಲಿಕೆ ಕಾರ್ಯ ಅಂತ್ಯಗೊಂಡಿದ್ದು, ನಗರಸಭೆಯ 31 ಸ್ಥಾನಗಳಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗಳಿಸಿ ಅಧಿಕಾರಕ್ಕೆ ಪಡೆಯುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ ಶಾಸಕ ಟಿ.ರಘುಮೂರ್ತಿ ಪ್ರಾರಂಭದ ಹಂತದಲ್ಲೇ ಪಕ್ಷಕ್ಕೆ ವಿಜಯವನ್ನು ತಂದುಕೊಡುವಲ್ಲಿ ಯಶಸ್ಸಿಯಾಗಿದ್ದಾರೆ.
ನಗರದ 19ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಪಕ್ಷದ ಏಕೈಕ ಅಭ್ಯರ್ಥಿಯಾಗಿ ಕವಿತಾ(ಬುಜ್ಜಿ) ಜಿ.ವೀರೇಶ್ ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿಯಾಗಿದ್ದು, ಇವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಗಳು ಘೋಷಿಸಬೇಕಿದ್ದು, ಕಾಂಗ್ರೆಸ್ ಪಕ್ಷಕ್ಕೆ ಪ್ರಾರಂಭದಲ್ಲೇ ಅವಿರೋಧ ಆಯ್ಕೆ ಮೂಲಕ ಶುಭ ಸೂಚನೆದೊರೆತಿದೆ ಎಂದು ಅವರು ತಿಳಿಸಿದ್ಧಾರೆ.
ನಾಮಪತ್ರ ಸಲ್ಲಿಕೆ ಕಾರ್ಯದ ನಂತರ ಶಾಸಕರ ನಿವಾಸಕ್ಕೆ ತೆರಳಿದ ಕವಿತಾ ಮತ್ತು ವೀರೇಶ್ ದಂಪತಿಗಳನ್ನು ಶಾಸಕ ಟಿ.ರಘುಮೂರ್ತಿ ಅತ್ಯಂತ ಸಂತೋಷದಿಂದ ಬರಮಾಡಿಕೊಂಡು ಅವರಿಗೆ ಶುಭ ಹಾರೈಸಿದರು. ಕವಿತಾ ಇದೇ ಮೊದಲ ಬಾರಿಗೆ ರಾಜಕೀಯ ರಂಗ ನಗರಸಭೆ ಚುನಾವಣೆ ಮೂಲಕ ಪ್ರವೇಶಿಸಿದ್ದು ಚಳ್ಳಕೆರೆ ನಗರದ ಇತಿಹಾಸದಲ್ಲೇ ಮತದಾನಕ್ಕೂ ಮುನ್ನವೇ ಅವಿರೋಧ ಆಯ್ಕೆಯಾಗಿ ದಾಖಲೆ ಸೃಷ್ಠಿಸಿ ಮೊಟ್ಟ ಮೊದಲ ಮಹಿಳೆಯಾಗಿದ್ಧಾರೆ. ಇವರ ಆಯ್ಕೆಗೆ ಕಾಂಗ್ರೆಸ್ ಪಕ್ಷ ಸಂತಸ ವ್ಯಕ್ತ ಪಡಿಸಿದೆ. ಈ ಸಂದರ್ಭದಲ್ಲಿ ಬಿ.ಟಿ.ರಮೇಶ್‍ಗೌಡ, ಶೇಖರಪ್ಪ, ವೀರಭದ್ರಪ್ಪ, ಹೊನ್ನೂರುಸ್ವಾಮಿ, ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.