ನಗರಸಭೆ ಚುನಾವಣೆ : ಅಭ್ಯರ್ಥಿಗಳ ಭವಿಷ್ಯ ಭದ್ರತಾ ಕೊಠಡಿಯಲ್ಲಿ ಪೊಲೀಸ್ ಸರ್ಪಗಾಲಿನಲ್ಲಿ ಭದ್ರ

ಚಳ್ಳಕೆರೆ

        ನಗರಸಭೆಯ 30 ವಾರ್ಡ್‍ಗಳಲ್ಲಿ ಒಟ್ಟು 99 ಅಭ್ಯರ್ಥಿಗಳು ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದು, ಈಗಾಗಲೇ ಮತದಾರರನ್ನು ಮನ ಒಲಿಸಿ ಮತ ಪಡೆದು ತಮ್ಮ ಅದೃಷ್ಠದ ಪರೀಕ್ಷೆಗೆ ಇಳಿದಿದ್ದು, ಮತದಾರರು ನೀಡಿದ ಮತಗಳು ಪ್ರಸ್ತುತ ಚುನಾವಣಾ ಆಯೋಗದ ನಿರ್ದೇಶನದಂತೆ ಭದ್ರತಾ ಕೊಠಡಿಯಲ್ಲಿ ಭದ್ರವಾಗಿದೆ.

         ನಗರದ 43 ಬೂತ್‍ಗಳಲ್ಲಿ ಮತದಾನ ನಡೆದಿದ್ದು, 41349 ಮತದಾರರಲ್ಲಿ 32004 ಮತದಾರರು ತಮ್ಮ ಚಲಾಯಿಸಿದ್ದು, ಶೇಕಡವಾರು ಮತದಾನ 77.40 ಆಗಿದ್ದು, ಸೋಮವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮತದಾರರ ತೀರ್ಪು ಚುನಾವಣಾ ಆಯೋಗದ ಇವಿಎಂ ಯಂತ್ರದಲ್ಲಿ ಅಡಕವಾಗಿದ್ದು, ಇವಿಎಂ ಯಂತ್ರಗಳಿಗೆ ದೂಳು ಸಹ ಸೋಕದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ದಿನದ 24 ಗಂಟೆಗಳ ಕಾಲ ಬಾರಿ ಭದ್ರತೆಯನ್ನು ಒದಗಿಸಲಾಗಿದೆ.

          ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಉವಿಭಾಗಾದ ಡಿವೈಎಸ್ಪಿ ಎಸ್.ರೋಷನ್ ಜಮೀರ್ ನೇತೃತ್ವದಲ್ಲಿ ಭದ್ರತಾ ಕೊಠಡಿಗೆ ಭದ್ರತೆಯನ್ನು ಒದಗಿಸಲಾಗಿದ್ದು, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ತಮ್ಮ ವೃತ್ತ ವ್ಯಾಪ್ತಿಯ ಸಬ್ ಇನ್ಸ್‍ಪೆಕ್ಟರ್‍ಗಳನ್ನು ಭದ್ರತಾ ಕೊಠಡಿಯ ಕರ್ತವ್ಯಕ್ಕೆ ನಿಯೋಜಿಸಿದ್ದಾರೆ. ತಹಶೀಲ್ದಾರ್ ಟಿ.ಸಿ.ಕಾಂತರಾಜು ಶನಿವಾರ ಭದ್ರತಾ ಕೊಠಡಿಯ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿದರು. ಮತದಾರರು ನೀಡಿ ತೀರ್ಪು ಏನು ಎಂಬ ಬಗ್ಗೆ ಯಾವುದನ್ನು ಸಹ ಖಚಿತವಾಗಿ ಹೇಳಲು ಸಾಧ್ಯವಾಗದು. ಸ್ಥಳೀಯ ಸಂಸ್ಥೆ ಚುನಾವಣೆ ಇದಾದರಿದ್ದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಂತೆ ಈ ಚುನಾವಣೆಯಲ್ಲೂ ಸಹ ಅಭ್ಯರ್ಥಿಗಳು ಬೇರೆ ಎಲ್ಲಾ ಯೋಜನೆಗಳಿಂಗಿತ ಮತದಾರರನ್ನು ಒಲಿಸಿಕೊಳ್ಳಲು ಲಕ್ಷ್ಮಿಕಟಾಕ್ಷ ಹೆಚ್ಚಿನ ರೀತಿಯಲ್ಲಿ ಮಾಡಿದ್ಧಾರೆ. ಅಭ್ಯರ್ಥಿಗಳು ಬಯಸಿದಂತೆ ಮತದಾರರು ಮತಗಳನ್ನು ನೀಡಿದ್ದಲ್ಲಿ ಚುನಾವಣೆಯಲ್ಲಿ ಗೆಲುವು ಎಲ್ಲರಿಗೂ ಸ್ವಾಭಾವಿಕವಾಗುತ್ತದೆ.
ಈ ಚುನಾವಣೆಯಲ್ಲಿ ಕೆಲವು ವಾರ್ಡ್‍ಗಳಲ್ಲಿ ಮಾತ್ರ ಹಣದ ಹೊಳೆ ಹರಿದಿದ್ದರೆ, ಇನ್ನೂ ಕೆಲವು ವಾರ್ಡ್‍ಗಳಲ್ಲಿ ಹೆಚ್ಚಿನ ಹಣದ ಚಲಾವಣೆ ನಡೆದಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಗಳ ಮತಗಳು ಮಾತ್ರ ಹಣದ ದೃಷ್ಠಿಯಿಂದ ಅತಿ ಹೆಚ್ಚು ಮೌಲ್ಯವನ್ನು ಪಡೆದುಕೊಂಡಿರುವುದು ವಿಪರ್ಯಾಸದ ಸಂಗತಿ. ಒಟ್ಟಿನಲ್ಲಿ ಅಭ್ಯರ್ಥಿಗಳ ಹಣೆ ಬರಹ ಏನು ಎಂಬ ಬಗ್ಗೆ ಸೋಮವಾರ ನಡೆಯುವ ಮತ ಏಣಿಕೆ ಸ್ವಷ್ಟ ಚಿತ್ರಣ ನೀಡಲಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link