ಹರಪನಹಳ್ಳಿ,
ಇದೇ ಮೇ. 29 ರಂದು ಬುಧವಾರ ನಡೆಯಲಿರುವ ಇಲ್ಲಿಯ ಪುರಸಭಾ ಚುನಾವಣೆಗೆ ಸ್ಥಳೀಯ ಆಡಳಿತ ಸಕಲ ಸಿದ್ದತೆ ಕೈಗೊಂಡಿದ್ದು, ಮತಗಟ್ಟೆ ಸಿಬ್ಬಂದಿ ಈಗಾಗಲೇ ತಾವು ನೇಮಕಾತಿ ಹೊಂದಿದ ಮತಗಟ್ಟೆಗಳಿಗೆ ತೆರಳಿ, ಮತದಾನಕ್ಕೆ ಎದುರು ನೋಡುತ್ತಿದ್ದಾರೆ.
ಪಟ್ಟಣದಲ್ಲಿ 27 ವಾರ್ಡಗಳಿಗೆ 42 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, 19390 ಪುರುಷ, 19631 ಮಹಿಳೆಯರು ಸೇರಿ ಒಟ್ಟು 39027 ಮತದಾರರಿದ್ದಾರೆ.
ಪೊಲೀಸ್ , ಗ್ರೂಪ್ ಡಿ ನೌಕರರು ಸೇರಿ ಒಟ್ಟು 264 ಸಿಬ್ಬಂದಿಯನ್ನು ಚುನಾವಣೆಗೆ ನೇಮಕ ಮಾಡಲಾಗಿದೆ ಎಂದು ತಹಶೀಲ್ದಾರ ಎ.ಎಸ್ .ಪ್ರಸಾದ್ ತಿಳಿಸಿದ್ದಾರೆ.
42 ಮತಗಟ್ಟೆಗಳಲ್ಲಿ 11 ಕ್ರಿಟಿಕಲ್ ಗಳೆಂದು ಗುರುತಿಸಲಾಗಿದೆ, ಪಟ್ಟಣದ ತರಳ ಬಾಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ವ್ಯವಸ್ಥೆ ಮಾಡಲಾಗಿದೆ. ವಾರ್ಡ 1 ಮತದಾರರು ಉಪ್ಪಾರಗೇರಿ, ಸ.ಹಿ.ಪ್ರಾ ಶಾಲೆಯಲ್ಲಿ ಮತದಾನ ಮಾಡಬೇಕು, ವಾರ್ಡ 2 ಕುರುಬರಗೇರಿ ಮತದಾರರು ಕುರುಬರಗೇರಿ ಸ.ಹಿ.ಪ್ರಾ ಶಾಲೆಯಲ್ಲಿ, ವಾರ್ಡ 3 ಅಗಸನಕಟ್ಟಿ ಮತದಾರರು ವಲಯ ಅರಣ್ಯ.ಆಧಿಕಾರಿ ಕಚೇರಿಯಲ್ಲಿ,
ವಾರ್ಡ 4 ಜೋಯಿಸರಕೇರಿ ಮತದಾರರು ಕೃಷಿ ಕಚೇರಿಯಲ್ಲಿ, ವಾರ್ಡ 5 ಬಾಪೂಜಿ ನಗರದವರು ತಾಲೂಕು ಪಂಚಾಯ್ತಿಯಲ್ಲಿ, ವಾರ್ಡ 6 ಬಾಣಗೇರ್ಯಿವರು ತಾ.ಪಂ ಹಾಗೂ ತಾ.ಪಂ ಯ ವಿಕಲಚೇತನ ಭವನದಲ್ಲಿ, ವಾರ್ಡ 7 ಸುಣಗಾರಗೇರಿಯವರು ಶಿಲಾರಗೇರಿ ಉರ್ದು ಶಾಲೆಯಲ್ಲಿ, ವಾರ್ಡ 8 ಸಂಡೂರುಗೇರಿಯವರು ಬಿಇಓ ಕಚೇರಿಯಲ್ಲಿ, ವಾರ್ಡ 9 ಉಪ್ಪಾರಗೇರಿಯವರು ಉಪ್ಪಾರಗೇರಿ ಹಾಗೂ ಮೇಗಳ ಉಪ್ಪಾರಗೇರಿ ಶಾಲೆಗಳಲ್ಲಿ ಮತದಾನ ಮಾಡಬೇಕು.
ವಾರ್ಡ 10 ಶಿಲಾರಗೇರಿ ಯವರು ಸ.ಪ.ಪೂ ಕಾಲೇಜಿನಲ್ಲಿ, ವಾರ್ಡ 11 ಚಿತ್ತಾರಗೇರಿಯವರು ಸ.ಹಿ.ಪ್ರಾ. ಮೇನ್ ಶಾಲೆಯಲ್ಲಿ ವಾರ್ಡ 12 ಪಠಾಣಗೇರಿಯವರು ಬಾಣಗೇರಿ ಉರ್ದು ಶಾಲೆಯಲ್ಲಿ, ವಾರ್ಡ 13 ಹಿಪ್ಪಿತೋಟದವರು ಬಾಣಗೇರಿ ಸಮುದಾಯ ಭವನದಲ್ಲಿ, ವಾರ್ಡ 14 ತೆಲುಗರ ಓಣಿಯವರು ಮೇಗಳಪೇಟೆ ಶಾಲೆಯಲ್ಲಿ, ವಾರ್ಡ 15 ರ ಸಾಳೇರ ಓಣಿಯವರು ಮೇಗಳಪೇಟೆ ಶಾಲೆಯಲ್ಲಿ ಮತದಾನ ಮಾಡಬೇಕು.
ವಾರ್ಡ 16 ರ ಗುಡಿಕೇರಿಯವರು ಪುರಸಭಾ ಕಚೇರಿಯಲ್ಲಿ, ವಾರ್ಡ 17 ಗೌಳೇರಕೇರಿಯವರು ಸ.ಹಿ. ಬಾಲಕೀಯರ ಶಾಲೆಯಲ್ಲಿ, ವಾರ್ಡ 18 ಬ್ರೂಸ್ ಪೇಟೆಯವರು ಸ.ಬಾಲಕೀಯರ ಪ್ರೌಢ ಶಾಲೆಯಲ್ಲಿ, ವಾರ್ಡ 19 ಮೇಗಳಪೇಟೆಯವರು ಟಿಎಂಎಇ ಪ್ರೌಡ ಶಾಲೆಯಲ್ಲಿ, ವಾರ್ಡ 20 ಹಳೇ ಕುರುಬರಗೇರಿಯವರು ಒಂಬತ್ತನೇ ವಾರ್ಡ ಶಾಲೆ, ವಾರ್ಡ 21 ರ ಅಂಬೇಡ್ಕರ ನಗರದವರು ಮುದುಗಲ್ ಬಡಾವಣೆಯ ಅಂಗನವಾಡಿ ಶಾಲೆಯಲ್ಲಿ, ವಾರ್ಡ 22 ಹುಲ್ಲುಗರಡಿಕೇರಿಯವರು ವಾಲ್ಮೀಕಿ ನಗರ ಶಾಲೆಯಲ್ಲಿ, ವಾರ್ಡ 23 ಕೊರವರಕೇರಿಯವರು ಒಂಬತ್ತನೇ ವಾರ್ಡ ಶಾಲೆ, ವಾರ್ಡ 24 ಗುಂಡಿನಕೇರಿಯವರು ಬಾಲಕೀಯರ ಪ್ರೌಢ ಶಾಲೆ ಹಾಗೂ ತೋಟಗಾರಿಕಾ ಕಚೇರಿಗಳಲ್ಲಿ, ವಾರ್ಡ 25 ತೆಕ್ಕದಗರಡಿಕೇರಿಯವರು ಬಾಲಕೀಯರ ಪ್ರೌಢ ಶಾಲೆ, ವಾರ್ಡ 26 ವಾಲ್ಮೀಕಿ ನಗರದವರು ಚಿಕ್ಕೇರಿ ಗುಂಡಿ ಶಾಲೆಯಲ್ಲಿ, ವಾರ್ಡ 27 ಗಾಜಿಕೇರಿಯವರು ವಾಲ್ಮೀಕಿ ನಗರ ಶಾಲೆಯಲ್ಲಿ ಮತದಾನ ಮಾಡಬೇಕು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಭದ್ರತೆ –
ಭದ್ರತೆ ಕುರಿತು ಮಾಹಿತಿ ನೀಡಿದ ಸಿಪಿಐ ದುರುಗಪ್ಪನವರು 1 ಡಿವೈಎಸ್ಪಿ, 2 ಸಿಪಿಐಗಳು, 64ಪಿಎಸ್ ಐಗಳು, 15 ಎ ಎಸ್ ಐಗಳು, 100 ಪೇದೆಗಳು, 60 ಗೃಹ ರಕ್ಷಕದಳ, 2 ಡಿಆರ್ ವಾಹನ, 1 ಕೆಎಸ್ ಆರ್ ಪಿ ವಾಹನ ಹೀಗೆ ಭದ್ರತೆ ಇದೆ ಎಂದು ಅವರು ತಿಳಿಸಿದರು .