ನಟನೆಗೆ ಹಠ ಮಾಡುತ್ತಿದ್ದ ಅಪ್ಪುಗೆ ಗೊಂಬೆಗಳೆ ಮದ್ದು

ಹುಳಿಯಾರು:


ಹುಳಿಯಾರಿನ ಕನ್ನಡ ರಾಜ್ಯೋತ್ಸವದಲ್ಲಿ ಹೊನ್ನವಳ್ಳಿಕೃಷ್ಣ ನುಡಿ

       ಬಾಲ್ಯದಲ್ಲಿ ಅಭಿನಯ ಮಾಡಲು ಪುನೀತ್ ಹಠ ಮಾಡುತ್ತಿದ್ದ. ಗೊಂಬೆಗಳನ್ನು ಕೊಟ್ಟರೆ ಹೇಳಿದಂತೆ ಕೇಳುತ್ತಿದ್ದ. ಯಾವ ರೀತಿ ಅಭಿನಯ ಮಾಡು ಅಂದ್ರೂ ಮಾಡುತ್ತಿದ್ದ ಎಂದು ಹಿರಿಯ ನಟ ಹೊನ್ನಾವಳ್ಳಿಕೃಷ್ಣ ಅವರು ಅಗಲಿದ ಪುನೀತ್ ರಾಜ್‍ಕುಮಾರ್ ಅವರನ್ನು ಕುರಿತು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಹುಳಿಯಾರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬುಧವಾರ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಕ್ತಪ್ರಹ್ಲಾದ ಚಿತ್ರದಲ್ಲಿ ಕೊರಳಿಗೆ ಹಾವು ಹಾಕಿಕೊಳ್ಳಲು ಭಯ ಪಡುತ್ತಿದ್ದ, ನಾನು ಹಾಕಿಕೊಂಡು ತೋರಿಸಿದ ಮೇಲೆ ಧೈರ್ಯದಿಂದ ಹಾಕಿಕೊಳ್ಳುತ್ತಿದ್ದ. ನಿರ್ದೇಶಕರು ಯಾರೇ ಆಗಿದ್ದರೂ ಸರಿ ಅಭಿನಯವನ್ನು ನಾನೇ ತೋರಿಸಬೇಕಿತ್ತು. ನಾನು ಇಲ್ಲದಿದ್ದರೆ ನಟನೆಗೆ ಮುಂದಾಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಅಪ್ಪು ನನ್ನನ್ನು ಹಚ್ಚಿಕೊಂಡಿದ್ದ ಎಂದರು.

ಕಾರ್ಯಕ್ರಮದ ಅಂಗವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಣೆ, ಸಾಕ್ಷ್ಯ ಕಣ್ಣಿನ ಆಸ್ಪತ್ರೆ ಸಹಕಾರದೊಂದಿಗೆ ನೇತ್ರದಾನ ನೋಂದಣಿ ಕಾರ್ಯಕ್ರಮ ಹಾಗೂ ದೇಹಧಾಡ್ಯ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿತ್ತು.
ಕರವೇ ಅಧ್ಯಕ್ಷ ಕೋಳಿಶ್ರೀನಿವಾಸ್, ಪಪಂ ಅಧ್ಯಕ್ಷ ಕೆಎಂಎಲ್‍ಕಿರಣ್, ಉಪಾಧ್ಯಕ್ಷೆ ಶೃತಿಸನತ್, ಸದಸ್ಯೆ ಬೀಬಿಫಾತೀಮಾ, ಸಾಕ್ಷ್ಯ ಆಸ್ಪತ್ರೆಯ ಲಕ್ಷ್ಮಿ, ಯುವ ನಿರ್ದೇಶಕ ಹೊನ್ನರಾಜು, ನಿರ್ಮಾಪಕ ನಂದಿಹಳ್ಳಿಶಿವಣ್ಣ, ದಾನಿಗಳಾದ ಎನ್.ಜಿ.ನಾಗರಾಜು, ಶ್ರೀನಿವಾಸ್, ಮಂಜುನಾಥ್, ದರ್ಶನ್, ದೊಡ್ಡಬಿದರೆ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಮಾಜಿ ಅಧ್ಯಕ್ಷ ದೇವರಾಜು, ತಾಪಂ ಮಾಜಿ ಸದಸ್ಯ ಜಯಣ್ಣ, ಕನ್ನಡದಕಂದ ವೆಂಕಟೇಶ್, ಸಿನಿಮಾನಟ ಗೌಡಿ ಸೇರಿದಂತೆ ಕರವೇ ಕಾರ್ಯಕರ್ತರು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

ತಂದೆ ತಾಯಿಯರಂತೆ ವಿನಯತೆ, ಸರಳತೆ, ರೂಢಿಸಿಕೊಳ್ಳುವ ಮೂಲಕ ಅವರಿಗೆ ತಕ್ಕ ಮಗನಾಗಿ ಪುನೀತ್ ಬಾಳಿದ್ದಾರೆ. ಬಲಗೈಯಲ್ಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗದಂತೆ ಸೇವಾಕಾರ್ಯ ಮಾಡಿ ಜನ ಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅನೇಕರಿಗೆ ದಾನ-ಧರ್ಮ ಮಾಡಲು ಸ್ಪೂರ್ತಿಯಾಗಿದ್ದಾರೆ.

-ಟೆನ್ನಿಸ್ ಕೃಷ್ಣ, ಹಿರಿಯ ನಟ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap