ಬೆಂಗಳೂರು:
ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ಮಾಪಕ ಕೆ. ಮಂಜು ಪೊಲೀಸ್ ಜೀಪ್ ಹತ್ತುವ ವಿಡಿಯೋ ವೈರಲ್ ಆಗಿದ್ದು, ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಇದೇ ಬೆನ್ನಲ್ಲೇ ಉಪೇಂದ್ರ ನಡೆಗೆ ವಿರೋಧವು ಕೇಳಿಬರುತ್ತಿದೆ.
ನಿನ್ನೆ ಬಿಜಿಎಸ್ ಕಾಲೇಜಿನ ಕಾರ್ಯಕ್ರಮಕ್ಕೆ ಉಪೇಂದ್ರ ಅತಿಥಿಯಾಗಿ ಬಂದಿದ್ದರು. ಇಲ್ಲಿಂದ ಅವರು ಶೂಟಿಂಗ್ ಸ್ಪಾಟ್ಗೆ ಹೋಗಬೇಕಿತ್ತು. ಆದ್ರೆ ಟ್ರಾಫಿಕ್ನಲ್ಲಿ ಅವರ ಕಾರ್ ಸಿಲುಕಿಕೊಂಡಿತ್ತು. ಸರಿಯಾದ ಸಮಯಕ್ಕೆ ಶೂಟಿಂಗ್ಗೆ ತೆರಳಬೇಕಿದ್ದರಿಂದ ಉಪೇಂದ್ರ ಹಾಗೂ ಕೆ. ಮಂಜು ಪೊಲೀಸ್ ಜೀಪ್ನಲ್ಲಿ ಡ್ರಾಪ್ ಪಡೆದುಕೊಂಡಿದ್ದಾರೆ.
ಉಪ್ಪಿಯ ಆಗಮನಕ್ಕಾಗಿ ಚಿತ್ರತಂಡ ಕಾಯುತ್ತಿತ್ತು. ಟ್ರಾಫಿಕ್‌ನಿಂದಾಗಿ ಬೇರೆ ಗಾಡಿಗಳು ಕೂಡ ಬ್ಲಾಕ್ ಆಗಿದ್ದವು. ಹೀಗಾಗಿ ತಕ್ಷಣ ಪೊಲೀಸ್ ಜೀಪ್‌ನ್ನು ಏರಿದ ಉಪ್ಪಿ ಅದರಲ್ಲಿ ಡ್ರಾಪ್ ಹಾಕಿಸಿಕೊಂಡಿದ್ದಾರೆ. ಈ ವಿಡಿಯೋ ಉಪೇಂದ್ರ ಕುಮಾರ್ ಎನ್ನುವವರ ಫೇಸ್‌ಬುಕ್ ಪೇಜ್‌ನಲ್ಲಿ ಹರಿದಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
