ಚಳ್ಳಕೆರೆ:
ನಗರದ ಇಂಡಸ್ ವ್ಯಾಲಿ ಖಾಸಗಿ ಶಾಲೆಯಲ್ಲೂ ಸಹ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಟಲ್ ಬಿಹಾರಿ ವಾಯಿಪೇಯಿರವರ ನಿಧನದ ಹಿನ್ನೆಲೆಯಲ್ಲಿ ಶ್ರದ್ದಾಂಜಲಿ ಸಭೆಯನ್ನು ಏರ್ಪಡಿಸಿ ಅಗಲಿದ ಮಹಾನ್ ನಾಯಕರಿಗೆ ಸಂತಾಪ ಸೂಚಿಸಿದರು.
ಶಾಲಾ ಆಡಳಿತಾಧಿಕಾರಿ ಚಿಕ್ಕಣ್ಣ ಮಾತನಾಡಿ, ರಾಷ್ಟ್ರದ ರಾಜಕೀಯ ಜೀವನದಲ್ಲಿ ಹೊಸ ಯುಗವನ್ನು ಪ್ರಾರಂಭಿಸಿದವರು ಅಟಲ್ ಬಿಹಾರಿ ವಾಜಿಪೇಯಿರವರು. ಅವರ ದೂರದೃಷ್ಠಿಯ ಪ್ರಗತಿಪರ ಚಿಂತನೆಗಳು ಈ ದೇಶವನ್ನು ಮುನ್ನಡೆಸಲು ಪ್ರಮುಖ ಕಾರಣವಾಗಿದ್ದವು. ಚತ್ಪುರ್ಷದ ರಸ್ತೆಯ ಯೋಜನೆಯ ನಂತರ ನದಿ ಜೋಡಣೆ ಅವರ ಕನಸ್ಸಾಗಿತ್ತು. ಆದರೆ, ಅಟಲ್‍ಜೀಯವರು ಇಂದು ಎಲ್ಲರಿಗೂ ಕನಸ್ಸಾಗಲಿದ್ಧಾರೆಂದರು.
ಶಾಲೆಯವಿದ್ಯಾರ್ಥಿಗಳು ಸಹ ಮಹಾನ್ ಚೇತನರ ನಿಧನಕ್ಕೆ ದೀಪ ಬೆಳಗಿಸಿ ಕಣ್ಣೀರು ಸುರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಲಾವಣ್ಯ, ಈರಣ್ಣ, ಮಹಲಿಂಗಪ್ಪ ಮುಂತಾದವರು ಇದ್ದರು.