ಬೆಂಗಳೂರು:
ಕಾಂಗ್ರೇಸ್ ನ ಉತ್ತರ ಕರ್ನಾಟಕದ ಬಲದಂತಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಾಬುರಾವ್ ಚಿಂಚನಸೂರ್ ಬಿಜೆಪಿಗೆ ಸೇರ್ಪಡೆಗೊಂಡರು.
ಪಕ್ಷಕ್ಕೆ ಸಂತಸದಿಂದ ಬರಮಾಡಿಕೊಂಡ ನಂತರ ಮಾತನಾಡಿದ ಬಿಎಸ್ವೈ, ಚಿಂಚನಸೂರ್ ಆಗಮನದಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಉತ್ತರ ಕರ್ನಾಟಕದಲ್ಲಿ ಜಯ ಸಾಧಿಸುತ್ತೇವೆ ಎಂದರು.
ಬಾಬುರಾವ್ ಚಿಂಚನಸೂರ್ ಮಾತನಾಡಿ, ಕೋಲಿ, ಗಂಗಾಮತಸ್ಥ ಸಮುದಾಯವನ್ನು ಕಾಂಗ್ರೆಸ್ ಕಡೆಗಣಿಸಿದೆ. ನನ್ನ ಸೋಲಿಗೆ ಬಿಜೆಪಿ ಅಥವಾ ಜೆಡಿಎಸ್ ಕಾರಣವಲ್ಲ. ಕಾಂಗ್ರೆಸ್ನವರೇ ಕಾರಣ ಎಂದು ಆರೋಪಿಸಿದರು. ಆ ಪಕ್ಷದಲ್ಲಿ ನಿಯತ್ತಿಗೆ ಬೆಲೆಯೇ ಇಲ್ಲ ಮತ್ತು ಕೆಳ ಸಮುದಾಯದವರನ್ನು ಕಾಂಗ್ರೇಸ್ ತುಳಿಯಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
