ಜಗಳೂರು:
ಆಧುನಿಕಯುಗದಲ್ಲಿ ಮಕ್ಕಳು ಟಿವಿ ,ಮೊಬೆಲ್‍ಗಳಿಗೆ ದಾಸರಾಗಿದ್ದು, ಇಂದು ನಮ್ಮ ಮಕ್ಕಳಿಗೆ ಸಂಪ್ರದಾಯ, ಸಂಸ್ಕøತಿ,ಸಂಸ್ಕಾರದ ಬಗ್ಗೆ ಸರಿಯಾದ ನಿಟ್ಟಿನಲ್ಲಿ ಅರಿವು ಮೂಡಿಸುವಲ್ಲಿ ವಿಫಲರಾಗಿದ್ದೇವೆ ಎಂದು ನವಚೇತನಾ ಶಾಲೆಯ ಕಾರ್ಯದರ್ಶಿ ಅರವಿಂದನ್ ಪಿ.ಎಸ್. ವಿಷಾಧ ವ್ಯಕ್ತ ಪಡಿಸಿದರು.
ಪಟ್ಟಣದ ಗೀತಮ್ಮರವರ ಮನೆಯಲ್ಲಿ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಘಟಕದ ವತಿಯಿಂದ ಮನೆಯಂಗಳದಲ್ಲಿ ಸಾಹಿತ್ಯೋತ್ಸವ ಶ್ರಾವಣ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನೆಯಂಗಳದಲ್ಲಿ ಸಾಹಿತ್ಯೋತ್ಸವ ತುಂಬಾ ಅರ್ಥಪೂರ್ಣವಾದ ಆಚರಣೆ ಆಗಿದೆ. ಇಂತಹ ಮಕ್ಕಳಿಗೆ ಪುಸ್ತಕ ಓದುವ ಅರಿವು ಮೂಡಿಸುವುದರ ಜೊತೆಗೆ ನಮ್ಮ ಮನೆಯಲ್ಲಿರುವ ಸಂಬಂಧಗಳನ್ನು ಗಟ್ಟಿಗೊಳಿಸುವ ಹಾಗೂ ಪ್ರೀತಿ ವಿಶ್ವಾಸದಿಂದ ಒಟ್ಟು ಕುಟುಂಬದಲ್ಲಿ ಅರ್ಥಪೂರ್ಣ ಜೀವನ ನಡೆಸುವುದು, ನಾವು ಆಚರಿಸುವ ಪೂಜೆ, ಜಪ-ತಪಗಳು ಕೇವಲ ಆಡಂಬರಕ್ಕಾಗಿ ಆಚರಿಸದೇ ಅರ್ಥಪೂರ್ಣವಾಗಿ ಶ್ರದ್ಧೆ ಭಕ್ತಿಯಿಂದ ಆಚರಿಸಿದರೇ ಖಂಡಿತಾ ಪೂಜೆಯ ಫಲ ಲಭಿಸುತ್ತದೆ ಎಂದವರು ತಿಳಿಸಿದರು. ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾದ ಬಿ.ಟಿ.ಗೀತಾಮಂಜು ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರಿಗೆ ಅರಿಶಿನ-ಕುಂಕುಮದೊಂದಿಗೆ ಉಡಿಕೊಡಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಘಟಕದ ಪದಾಧಿಕಾರಿಗಳಾದ ಶಿಕ್ಷಕರಾದ ಆಂಜಿನೇಯ, ವೀರಣ್ಣ, ಎಸ್.ಬಸಮ್ಮ, ಬಿ.ಟಿ.ಮಂಜುನಾಥ್, ಇಂದ್ರಮ್ಮ, ಗೀತಮ್ಮ, ವಿನುತ, ಮಹೇಶ್, ಹನುಮಂತರಾಜು, ಸಾವಿತ್ರಮ್ಮ, ಚೈತ್ರ, ಬಿ.ಟಿ.ಮಂಜಣ್ಣ ಮೊದಲಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ