ನಾಗಪುರ ಚುನಾವಣೆ : ಬಿಜೆಪಿಗೆ ಭಾರಿ ಮುಖಭಂಗ

ಮುಂಬೈ

ಗುರುವಾರ ಮಹಾರಾಷ್ಟ್ರ ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿತಿನ್ ಗಡ್ಕರಿ, ದೇವೇಂದ್ರ ಫಡ್ನವೀಸ್ ಅವರ ತವರು ನೆಲದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ.  ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಒಕ್ಕೂಟದ ಅಭ್ಯರ್ಥಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.

ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ನಾಗ್ಪುರದಲ್ಲಿ ಭಾರಿ ಮುಖಭಂಗವಾಗಿದೆ.ನಾಗ್ಪರದಲ್ಲಿ  ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನ ಕೇಂದ್ರ ಕಚೇರಿಯನ್ನು ಹೊಂದಿದೆ. ಜೊತೆಗೆ ಇದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರಂತಹ ಪ್ರಮುಖ ನಾಯಕರ ತವರು ಕ್ಷೇತ್ರವು ಸಹ ಹೌದು.

    ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಪಕ್ಷದ ಸುಧಾಕರ್ ಅಡ್ಬಲೆ ಗೆಲುವು ಸಾಧಿಸುವ ಮೂಲಕ ಬಿಜೆಪಿ ಬೆಂಬಲಿತ ನಾಗೋ ಗನಾರ್ ಅವರನ್ನು ಸೋಲಿಸಿದರು. ರಾಜ್ಯ ಶಾಸಕಾಂಗದ ಮೇಲ್ಮನೆಗೆ ದ್ವೈವಾರ್ಷಿಕ ಚುನಾವಣೆಗಳು ಮುಖ್ಯವಾಗಿ ಬಿಜೆಪಿ ಮತ್ತು ಶಿಂಧೆ ಅವರ ಶಿವಸೇನೆ ಬಣದ ಆಡಳಿತದ ಮೈತ್ರಿ ಮತ್ತು ಶ್ರೀ ಠಾಕ್ರೆ ಅವರ ಶಿವಸೇನಾ ಶಿಬಿರ, ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಒಳಗೊಂಡಿರುವ ಎಂವಿಎ ಬೆಂಬಲಿತ ಅಭ್ಯರ್ಥಿಗಳ ನಡುವೆ ನಡೆಯಿತು.

Recent Articles

spot_img

Related Stories

Share via
Copy link