ಬರಗೂರು :
ಒಕ್ಕಲಿಗ ಹಾಗೂ ಕುಂಚಿಟಿಗ ಜಾತಿ ಒಂದೇ ನಾಣ್ಯದ ಎರಡು ಮುಖ ಇದ್ದಂತೆ, ಕುಂಚಿಟಿಗರನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಯಲ್ಲಿ ಸೇರ್ಪಡೆ ಮಾಡುವಂತ ಒತ್ತಾಯಕ್ಕೆ ಶ್ರೀಮಠದ ಬೆಂಬಲವಿದೆ. ಎಂದು ಶ್ರೀಸ್ಪಟಿಕ ಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮಿಜಿ ಹೇಳಿದರು.
ಶಿರಾ ತಾಲೂಕಿನ ಬರಗೂರು ಗ್ರಾಮದಲ್ಲಿ ಭಾನುವಾರ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಆಚರಣಾ ಸಮಿತಿ ವತಿಯಿಂದ ನಡೆದ ಕೆಂಪೇಗೌಡ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು
ಸಮಾಜದ ತಳ ಸಮುದಾಯಗಳ ಆರ್ಥಿಕ ಆಭಿವೃದ್ಧಿಯ ಕನಸು ಕಟ್ಟಿದ್ದ ಗೌಡರು, 500 ವರ್ಷಗಳ ಹಿಂದೆಯೇ ವ್ಯಾಪರಕ್ಕೆ ಪ್ರತ್ಯೇಕ ಪೇಟೆಗಳನ್ನು ನಿರ್ಮಾಣ ಮಾಡಿ ಬಡವರ ಪ್ರಗತಿ ಜೊತೆಗೆ ವಿಶ್ವಮಟ್ಟದಲ್ಲಿ ಬೆಂಗಳೂರಿನ ಕೀರ್ತಿ ಹೆಚ್ಚವಂತೆ ಮಾಡಿವ ಮೇಕಿನ್ ಕರ್ನಾಟಕ ಕನಸು ಕಂಡಿದ್ದ ನಾಡಪ್ರಭು ಕೆಂಪೇಗೌಡರು ಈ ನಾಡಿನ ಆಭಿವೃದ್ಧಿ ಹರಿಕಾರರು, ದೂರದೃಷ್ಠಿ ಕೋನದಿಂದ ಕೆಂಪೇಗೌಡರು 780 ಕೆರೆಗಳನ್ನು ಬೆಂಗಳೂರಿನಲ್ಲಿ ಕಟ್ಟಿ ಅಂತಜಲ ಮಟ್ಟ ಹೆಚ್ಚಳಕ್ಕೆ ಕಾರಣರಾಗಿದ್ದರು, ಅಷ್ಟು ಕೆರೆಗಳು ಇವತ್ತು ಇದ್ದಿದ್ದರೆ 1.20 ಕೋಟಿ ಜನಸಂಖ್ಯೆ ಇರುವಂತ ನಗರದ ಜನ ಯಾವ ಕಾವೇರಿ ನೀರಿಗೂ ಕೈಚಾಚುವಂತ ಪ್ರಮೇಯ ಬರುತ್ತಿರಲಿಲ್ಲ. ಹೇಮಾವತಿ ಜಲನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿರುವ ಕಾರಣ ಡ್ಯಾಂ ಗಳು ಭರ್ತಿಯಾಗಿವೆ ಶಿರಾ ತಾಲೂಕಿನ ಕಳ್ಳಂಬೆಳ್ಳ, ಶಿರಾ, ಮದಲೂರು ಕೆರೆಗಳನ್ನು ತುಂಬಿಸುವ ಮೂಲಕ ಇಲ್ಲಿನ ರೈತ ಮತ್ತು ಜನ ಸಾಮಾನ್ಯರ ಕುಡಿಯುವ ನೀರಿನ ದಾಹ ನಿಗಿಸುವ ನಿಟ್ಟನಲ್ಲಿ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಕೆರೆಗಳನ್ನು ತುಂಬಿಸುವಂತ ಇಚ್ಚಾಶಕ್ತಿ ಪ್ರದರ್ಶಿಸಬೇಕು.
ಕೆಂಪೇಗೌಡರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಪರಿಸರ ನಾಶ, ಮನುಷ್ಯನ ದುರಾಸೆಯಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಕೊಡಗಿನಲ್ಲಿ ಯಾದಂತ ಸ್ಥಿತಿ ಬೆಂಗಳೂರು ನಗರಕ್ಕು ಬಂದೋದಗುವ ದಿನಗಳು ದೂರವಿಲ್ಲ. ರಾಜ್ಯದ ಆಭಿವೃದ್ಧಿಗೆ ಬೇಕಾಗುವಂತ ಶೇ66ರಷ್ಟು ತೆರಿಗೆ 1.5 ಲಕ್ಷ ಕೋಟಿ ಆದಾಯ ಬೆಂಗಳೂರಿನಿಂದ ಬರುತ್ತಿದ್ದೆ ಕೆರೆಗಳು ನಾಶ ಮಾಡಿ, ಆಧುನಿಕ ಬದುಕಿನತ್ತ ಜನ ವೇಗದಲ್ಲಿ ಸಾಗುತ್ತಿರುವ ಕಾರಣ ನೀತಿ ಆಯೋಗದ ಸಮೀಕ್ಷೆ ಪ್ರಕಾರ 2030 ಬೆಂಗಳೂರಿಗೆ ಜಲಕ್ಷಾಮ ಎದುರಾಗಲಿದ್ದು, ಜನ ಎಚ್ಚರದಿಂದ ಇರುವ ಜೊತೆಗೆ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡ ಬೇಕು. ಆಗಾ ಕೆಂಪೇಗೌಡರು ಕಟ್ಟಿದ ನಾಡಿನ ವೈಭವ ಮತ್ತು ಖ್ಯಾತಿ ಉಳಿಯಲಿದೆ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಬಿ.ಸತ್ಯನಾರಾಯಣ ಕನ್ನಡಿಗರಿಗಷ್ಟೇ ಅಲ್ಲದೆ, ಎಲ್ಲ ಸಮುದಾಯಗಳನ್ನು ಸಮಾನವಾಗಿ ಆಭಿವೃದ್ಧಿಯತ್ತ ಮುನ್ನಡೆಸಿದ ಪ್ರಭು ಈ ಗೌಡರು. ಇಂತಹ ಮಹಾನ್ ವ್ಯಕ್ತಿಯ ಆದರ್ಶ ಇಂದಿನ ಯುವ ಪೀಳಿಗೆಗೆ ದಾರಿದೀಪ ಎಂದರು.
ಸಾಧಕರಿಗೆ ಸನ್ಮಾನ : ಪ್ರಗತಿಪರ ರೈತ ಕಂಬಣ್ಣ, ಡಾ.ಚಂದ್ರಶೇಖರ್, ಡಾ.ಜಗದೀಶ್, ಬಿ.ಬೀರಲಿಂಗಪ್ಪ ಸೇರಿದಂತೆ ಹಲವಾರು ಸಾಧಕರಿಗೆ ಸನ್ಮಾನ ಸೇರಿದಂತೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ಎಸ್.ಆರ್.ಗೌಡ, ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಆರ್.ನಾಗರಾಜು, ಜಿಪಂ ಸದಸ್ಯ ಎಸ್.ರಾಮಕೃಷ್ಣ, ಕಾಂಗ್ರೇಸ್ ಮುಖಂಡರಾದ ಸಿ.ರಾಮಕೃಷ್ಣ, ಬಿ.ಹಲಗುಂಡೇಗೌಡ, ತಾಪಂ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀನರಸಮ್ಮ, ಚಾ.ವಿ.ಸಾ.ನಿಗಮದ ನರಸಿಂಹೇಗೌಡ್ರು,ಬೆಸ್ಕಾಂ ಶಿವರಾಮೇಗೌಡ್ರು,ಬೊಪ್ಪಣ್ಣ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
ಮೆರವಣಿಗೆ: ಕೆಂಪೇಗೌಡ ಜಯಂತಿ ಅಂಗವಾಗಿ ವಿವಿಧ ಜನಪದ ಕಲಾತಂಡಗಳು ಮತ್ತು ಮಹಿಳೆಯರು ಕುಂಭಕಳಸಗಳ ಮೆರವಣಿಗೆ ನಡೆಯಿತು,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
