ಮುಂಬೈ

ಶಾರುಖ್ ಖಾನ್ ಅವರು ಬಾಲಿವುಡ್ನ ಸೂಪರ್ಸ್ಟಾರ್. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದರು. ಅಚ್ಚರಿಯ ವಿಚಾರ ಎಂದರೆ ಶಾರುಖ್ ಖಾನ್ ಅವರು ಕಾಶ್ಮೀರಕ್ಕೆ ತೆರಳುವುದೇ ಇಲ್ಲ ಎಂದು ಶಪಥ ಮಾಡಿದ್ದರು. ಇದಕ್ಕೆ ಕಾರಣವೂ ಇತ್ತು. ಆ ಒಂದು ಮಾತಿಗೆ ಕಟ್ಟುಬಿದ್ದು ಶಾರುಖ್ ಕಾಶ್ಮೀರಕ್ಕೆ ತೆರಳುವುದನ್ನೇ ನಿಲ್ಲಿಸಿದ್ದರು. ಆದರೆ, ಈಗ ಅವರು ಬದಲಾಗಿದ್ದಾರೆ.
ಶಾರುಖ್ ಖಾನ್ ಅವರ ತಂದೆ ಹೆಸರು ಮೀರ್ ತಾಜ್ ಮೊಹ್ಮದ್ ಖಾನ್. ಅವರ ತಾಯಿ ಕಾಶ್ಮೀರಿ. ಸಾಯುವುದಕ್ಕೂ ಮೊದಲು ಮೀರ್ ತಾಜ್ ಮೊಹ್ಮದ್ ಖಾನ್ ಒಂದು ಪ್ರಾಮಿಸ್ ಮಾಡಿಸಿಕೊಂಡಿದ್ದರು. ‘ನನ್ನನ್ನು ಬಿಟ್ಟು ಎಂದಿಗೂ ಕಾಶ್ಮೀರಕ್ಕೆ ತೆರಳಬಾರದು’ ಎಂದು ಹೇಳಿದ್ದರು. ಇದು ಶಾರುಖ್ ಮನಸ್ಸಲ್ಲಿ ಕುಳಿತು ಹೋಗಿತ್ತು.
‘ಜಗತ್ತಿನಲ್ಲಿ ಮೂರು ಪ್ರದೇಶವನ್ನು ಮಿಸ್ ಮಾಡದೇ ನೋಡು. ನಾನು ಇರಲಿ ಅಥವಾ ಬಿಡಲಿ ಇಸ್ತಾಂಬೂಲ್ ಹಾಗೂ ಇಟಲಿಯ ರೋಮ್ನ ಮಿಸ್ ಮಾಡದೆ ನೋಡು ಎಂದು ತಂದೆ ಹೇಳಿದ್ದರು. ಮೂರನೇ ಸ್ಥಳ ಕಾಶ್ಮೀರ. ಇದನ್ನು ನಾನು ಇಲ್ಲದೆ ನೋಡಬೇಡ. ನನ್ನ ಜೊತೆಯೇ ಈ ಜಾಗಕ್ಕೆ ತೆರಳಬೇಕು ಎಂದು ತಂದೆ ಪ್ರಾಮಿಸ್ ಮಾಡಿಸಿಕೊಂಡಿದ್ದರು’ ಎಂಬುದಾಗಿ ಶಾರುಖ್ ಖಾನ್ ವಿವರಿಸಿದ್ದರು. ‘ನನ್ನ ತಂದೆ ಬೇಗ ನಿಧನ ಹೊಂದಿದರು. ನಾನು ಜಗತ್ತಿನ ಹಲವು ಕಡೆಗಳಿಗೆ ತೆರಳಿದ್ದೇನೆ. ಆದರೆ, ಕಾಶ್ಮೀರಕ್ಕೆ ಮಾತ್ರ ತೆರಳಿಲ್ಲ. ನನ್ನ ಗೆಳೆಯರು ಕರೆದಿದ್ದರು. ನಾನು ಹೋಗಿಲ್ಲ. ನಾನು ಇಲ್ಲದೆ ಕಾಶ್ಮೀರಕ್ಕೆ ಹೋಗಬೇಡ ಎಂದು ನನ್ನ ತಂದೆ ಹೇಳಿದ್ದರು’ ಎಂಬುದಾಗಿ ಅವರು ವಿವರಿಸಿದ್ದಾರೆ.
ಯಶ್ ಚೋಪ್ರಾ ಅವರ ‘ಜಬ್ ತಕ್ ಹೇ ಜಾನ್’ ಚಿತ್ರದ ಶೂಟ್ಗಾಗಿ ಶಾರುಖ್ ಖಾನ್ ಗುಲ್ಮಾರ್ಗ್, ಪಹಲ್ಗಾಮ್, ಲಡಾಕ್ಗೆ ತೆರಳಿದ್ದರು. ಇದನ್ನು ಅನೇಕರು ಟೀಕಿಸಿದ್ದರು. ‘ಯಶ್ ಚೋಪ್ರಾ ತಂದೆ ಸಮಾನರು. ಹೀಗಾಗಿ, ಅವರ ಜೊತೆ ಭೇಟಿ ನೀಡಿದ್ದೆ’ ಎಂದಿದ್ದರು ಅವರು.
ಇದನ್ನೂ ಓದಿ: ಶಾರುಖ್ ಖಾನ್ ರೀತಿಯೇ ಮನೆ ಬಿಡಲು ನಿರ್ಧರಿಸಿದ ಆಮಿರ್ ಖಾನ್; ಕಾರಣ ಏನು?
ಶಾರುಖ್ ಖಾನ್ ಅವರು ‘ಡಂಕಿ’ ಸಿನಿಮಾ ಶೂಟ್ಗಾಗಿ 2023ರಲ್ಲಿ ಕಾಶ್ಮೀರಕ್ಕೆ ತೆರಳಿದ್ದರು. 11 ವರ್ಷಗಳ ಬಳಿಕ ಅವರು ಕಾಶ್ಮೀರಕ್ಕೆ ತೆರಳಿದಂತಾಗಿತ್ತು. ಈ ವೇಳೆ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿತ್ತು.
