ನಾಳೆ ಕರ್ನಾಟಕ ಬಂದ್ ಅನುಮಾನ?: ಕನ್ನಡಪರ ಸಂಘಗಳ ಒಕ್ಕೂಟದಲ್ಲೇ ಅಪಸ್ವರ; ಬಂದ್​ನಿಂದ ಹಿಂದೆ ಸರಿದ ಹಲವು ಬಣ

ಬೆಂಗಳೂರು: 

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಕರೆ ನೀಡಿರುವ ‘ಕರ್ನಾಟಕ ಬಂದ್’ಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಜತೆಗೆ ಕನ್ನಡಪರ ಸಂಘಟನೆಗಳಿಂದಲೇ ಅಪಸ್ವರ ವ್ಯಕ್ತವಾಗಿದ್ದು, ಬಂದ್ ರ್ಯಾಲಿಗೆ ಸೀಮಿತವಾಗುವ ಲಕ್ಷಣಗಳು ಗೋಚರಿಸಿವೆ.

    ಕರ್ನಾಟಕ ರಕ್ಷಣ ವೇದಿಕೆಯ ಟಿ.ಎ.ನಾರಾಯಣಗೌಡ, ಜಯ ಕರ್ನಾಟಕ ಅಧ್ಯಕ್ಷ ಜಗದೀಶ್, ಹೋಟೆಲ್ ಉದ್ಯಮ, ಕ್ಯಾಬ್ ಚಾಲಕರು ಸೇರಿ ಹಲವು ಸಂಘ-ಸಂಸ್ಥೆಗಳು ಕರ್ನಾಟಕ ಬಂದ್​ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಸಹ ಬಂದ್ ಹಿಂಪಡೆಯಬೇಕು. ಎಂಇಎಸ್ ವಿರುದ್ಧ ಕಾನೂನಾತ್ಮಕ ಕ್ರಮದ ಭರವಸೆ ನೀಡಿದೆ.

ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಬಂದ್ ಸಮಯ ಇದಲ್ಲ. ಡಿ.31ರ ಬದಲಾಗಿ ಬೇರೆ ದಿನ ನಿಗದಿ ಮಾಡಬೇಕೆಂದು ಮನವಿ ಮಾಡಿದ್ದಾರೆ. ಈ ಕುರಿತು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್​ಗೆ ಬಹಿರಂಗ ಪತ್ರ ಬರೆದು, ಬಂದ್ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

ಮತ್ತೊಂದೆಡೆ ಕರ್ನಾಟಕ ರಕ್ಷಣ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಬಂದ್ ವಿರೋಧಿಸಿ ಮತ್ತು ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಗುರುವಾರ ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ. ಇದರಲ್ಲಿ 30ಕ್ಕೂ ಅಧಿಕ ಸಂಘಟನೆಗಳು ಭಾಗವಹಿಸಲಿದ್ದಾರೆ ಎಂದು ನಾರಾಯಣಗೌಡ ಹೇಳಿಕೆ ಕೊಟ್ಟಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ವಾಟಾಳ್ ನಾಗರಾಜ್, ಶುಕ್ರವಾರ ಬಂದ್​ಗೆ ಕರೆ ನೀಡಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕರ್ನಾಟಕ ಬಂದ್ ಮಾಡಿಯೇ ತೀರುತ್ತೇವೆ ಎಂದು ಸ್ಪಷ್ಟಪಡಿಸಿದರು. ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಒಕ್ಕೂಟದಲ್ಲಿ ಗುರುತಿಸಿಕೊಂಡಿರುವ ನಿರ್ವಪಕ ಸಾ.ರಾ.ಗೋವಿಂದು, ಬಂದ್​ಗೆ ವಿರೋಧ ಮಾಡುವವರು ಇದ್ದೇ ಇರುತ್ತಾರೆ. ಬಂದ್ ಮಾಡಿಯೇ ತೀರುತ್ತೇವೆ. ಈ ಸಂಬಂಧ ಗುರುವಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ಸೇರಿ ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಬಂದ್ ಕೈ ಬಿಡುವಂತೆ ಸಿಎಂ ಮನವಿ

ಕರೊನಾ ಸಂಕಷ್ಟದಲ್ಲಿ ಸಾಕಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಕರ್ನಾಟಕ ಬಂದ್ ಮಾಡುವುದು ಪರಿಹಾರವಲ್ಲ. ಬಂದ್ ಕೈ ಬಿಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಈಗಾಗಲೆ ಎಂಇಎಸ್ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಎಂಇಎಸ್ ನಿಷೇಧಕ್ಕೆ ಕಾನೂನು ವ್ಯಾಪ್ತಿಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಬಂದ್ ಕೈಬಿಟ್ಟು ಬೇರೆ ಮಾರ್ಗ ಕಂಡುಕೊಳ್ಳುವಂತೆ ಕೋರಿದ್ದಾರೆ.

ಕರೊನಾ ಸಂಕಷ್ಟದಲ್ಲಿ ಉದ್ಯಮಗಳು ನಷ್ಟದಲ್ಲಿವೆ. ಬಂದ್​ಗೆ ಕರೆ ಕೊಟ್ಟಿರುವ ಕನ್ನಡಪರ ಸಂಘಗಳ ಮುಖಂಡರು ಮತ್ತೊಮ್ಮೆ ಪರಿಶೀಲನೆ ಮಾಡಬೇಕು.

ಆರಗ ಜ್ಞಾನೇಂದ್ರ ಗೃಹ ಸಚಿವ

ಕೋವಿಡ್​ನಿಂದ ವರ್ತಕರು, ಉದ್ಯಮಿಗಳು, ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದಾಕಾಲ ನಮ್ಮ ಜತೆ ನಿಲ್ಲುತ್ತಿದ್ದ ಚಿತ್ರೋದ್ಯಮ, ಕೆಲ ಸಂಘಟನೆಗಳು ಅಸಮಾಧಾನವನ್ನು ಹೊರಹಾಕಿವೆ. ಬೆಳಗಾವಿಯ ಕ್ರಿಯ ಸಮಿತಿ, ಸಾರ್ವಜನಿಕರು ಬಂದ್​ಗೆ ಬೆಂಬಲ ನೀಡು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link