ನಾಳೆ ಸಂಡೂರು ಅಖಾಡಕ್ಕೆ ಡಿಸಿಎಂ….!

ಬಳ್ಳಾರಿ:

   ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರ ಪರವಾಗಿ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್‌ ಅವರು ನಾಳೆ  ರಂದು ಪ್ರಚಾರಕ್ಕೆ ಆಗಮಿಸಲಿದ್ದಾರೆ.

   ಈಗಾಗಲೇ ‌ಚುನಾವಣ ಕಣ ತೀವ್ರ‌ರಂಗು ಪಡೆದುಕೊಂಡಿದ್ದು, ಕಾಂಗ್ರೆಸ್ ಪರವಾಗಿ ಸಚಿವರಾದ ‌ಸಂತೋಷ‌ ಲಾಡ್, ಕೆಜೆ ಜಾಜ್೯, ಜಮೀರ್ ಅಹ್ಮದ್ ಖಾನ್‌ ಮತಯಾಚನೆ‌ ನಡೆಸಿದ್ದಾರೆ. ಈಗ ಉಪಮುಖ್ಯಮಂತ್ರಿ ಅವರು ನೇರವಾಗಿ ‌ಚುನಾವಣೆ‌ ಕಣಕ್ಕೆ ಇಳಿಯಲಿದ್ದು, ಕಣ ಮತ್ತಷ್ಟು ರಂಗು ಪಡೆಯಲಿದೆ. ನಂ.೫ ರಂದು ಡಿಸಿಎಂ ಡಿಕೆ‌ ಶಿವಕುಮಾರ್ ಸಂಡೂರು ಕ್ಷೇತ್ರದ ತಿಮ್ಮಾಲಾಪುರ, ಏಳುಬೆಂಚಿ, ಹಳೇ ಮಾದಾಪುರ, ಹಳೇ ದರೋಜಿ, ಹೊಸ ಮಾದಾಪುರದಲ್ಲಿ ಪ್ರಚಾರ ನಡೆಸಲಿದ್ದಾರೆ. ಹೊಸ ದರೋಜಿ ಹಾಗೂ ತೋರಣಗಲ್ಲುವಿನಲ್ಲಿ ಹಮ್ಮಿಕೊಂಡಿರುವ ಬಹಿರಂಗ ಸಭೆಯಲ್ಲೂ ಭಾಗವಹಿಸಲಿದ್ದಾರೆ. ಡಿ ಕೆ ಶಿವಕುಮಾರ್‌ ಅವರೊಂದಿಗೆ ಅಭ್ಯರ್ಥಿ ಅನ್ನಪೂರ್ಣ, ಸಂಸದ ಇ ತುಕಾರಾಂ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.