ಶಿರಾ:
ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಮತಿದ್ದ ಲಾರಿಯೊಂದಕ್ಕೆ ಕ್ಯಾಂಟರ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರ ಠಾಣಾ ವ್ಯಾಪ್ತಿಯ ಮಾನಂಗಿ ಗೇಟ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.
ಬಸವನ ಬಾಗೇವಾಡಿ ಗ್ರಾಮದ ರೈತ ಶ್ರೀಕಾಂತ್ ಅವರು ತಾವು ಬೆಳೆದಿದ್ದ ಈರುಳ್ಳಿಯನ್ನು ಮಾರಾಟ ಮಾಡಲು ಬೆಂಗಳೂರಿನ ಮಾರ್ಕೇಟ್‍ಗೆ ಕ್ಯಾಂಟರ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದಾಗ ಮಾನಂಗಿ ಗೇಟ್ ಬಳಿ ನಿಂತಿದ್ದ ಲಾರಿಯೊಂದಕ್ಕೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್‍ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕ್ಯಾಂಟರ್ ಲಾರಿ ಚಾಲಕ ಹುನಗುಂದ ಗ್ರಾಮದ ರಮೇಶ್(45), ಬಸನವನ ಬಾಗೇವಾಡಿ ಗ್ರಾಮದ ರೈತ ಶ್ರೀಕಾಂತ್ ಮೃತಪಟ್ಟವರಾಗಿದ್ದು ಲಾರಿ ಕ್ಲೀನರ್ ಶ್ರೀನಿವಾಸ್ ತೀವ್ರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಎಗಾಗಿ ಆತನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಬಂಧ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.