ದೆಹಲಿ:
ನಿಷೇಧಿತ ಔಷಧಿಗಳಪಟ್ಟಿ ಸೇರಿದ್ದ ಸ್ಯಾರಿಡಾನ್ ಹಾಗೂ ಮತ್ತೆರಡು ಡ್ರಗ್ಸ್ ಗಳಿಗೆ ಮುಕ್ತಿ ಸಿಕ್ಕಿದೆ. ಔಷಧಿಗಳ ಮೇಲಿನ ನಿಷೇಧ, ನಿರ್ಬಂಧ ಕುರಿತಂತೆ ಸುಪ್ರೀಂಕೋರ್ಟ್ ಸೋಮವಾರ(ಸೆಪ್ಟೆಂಬರ್ 17)ದಂದು ಮಹತ್ವದ ಆದೇಶ ನೀಡಿದೆ.
ಕೇಂದ್ರ ಆರೋಗ್ಯ ಸಚಿವಾಲಯದಿಂದ ನಿಷೇಧಿತ ಮಾತ್ರೆ, ಔಷಧಿಗಳ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಸ್ಯಾರಿಡನ್ ಸೇರಿದಂತೆ 328 ಡ್ರಗ್ಸ್ ನಿಷೇಧಿಸಿದ್ದರೆ, 6 ಡ್ರಗ್ಸ್ ಮೇಲೆ ನಿರ್ಬಂಧ ವಿಧಿಸಲಾಗಿತ್ತು.
ನಿಷೇಧಿತ ಔಷಧಗಳ ಪಟ್ಟಿಯಲ್ಲಿ ನೋವು ನಿವಾರಕ ಮಾತ್ರೆಗಳಾದ ಸ್ಯಾರಿಡಾನ್, ಡಯಾಬಿಟೀಸ್ ಡ್ರಗ್ಸ್ ಗ್ಲೂಕೊನಾರ್ಮ್(Gluconorm), ಆಂಟಿಬಯೋಟಿಕ್ ಗಳಾದ ಲುಪಿಡಿಕ್ಲೋಕ್ಸ್ (Lupidiclox), ಟಾಕ್ಸಿಮ್ ಎ ಜಡ್ಜ್(Taxim AZ) ಸೇರಿವೆ.
ನೋವು ನಿವಾರಕಾ ಮಾತ್ರೆ ಸ್ಯಾರಿಡಾನ್, ಚರ್ಮದ ಕೀಮ್ ಪ್ಯಾಂಡರ್ಮ್ ಸೇರಿದಂತೆ 328 ಔಷಧಿ- ಎಫ್ ಡಿಸಿ ಡ್ರಗ್ಸ್ ಮೇಲೆ ಆರೋಗ್ಯ ಇಲಾಖೆ ನಿಷೇಧ ಹೇರಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ