ಜಗಳೂರು:
ನಿಸ್ವಾರ್ಥ ನಾಯಕತ್ವದೊಂದಿಗೆ ಪಕ್ಷಸಂಘಟನೆ ಮಾಡಿದಲ್ಲಿ ಮಾತ್ರ ಪಕ್ಷಬೆಳವಣಿಗೆಯಾಗಲು ಸಾದ್ಯ ಎಂದು ಹರಿಹರ ಕ್ಷೇತ್ರದ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಸಲಹೆ ನೀಡಿದರು.
ಪಟ್ಟಣದ ಶಾದಿಮಹಲ್ ನಲ್ಲಿ ಶನಿವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯರ್ತರ ಸಭೇಯನ್ನುದ್ದೇಶಿಸಿ ಅವರು ಮಾತನಾಡಿದರು.
ಜಗಳೂರು ತಾಲೂಕಿನಲ್ಲಿ ಕಳೆದ ದಶಕಗಳಲ್ಲಿ ಇಬ್ಬರು ಶಾಸಕರನ್ನು ಆಡಳಿತಕ್ಕೆ ತರುವ ಮೂಲಕ ಜೆಡಿಎಸ್ ಪಕ್ಷ ಕ್ಷೇತ್ರದಲ್ಲಿ ಭದ್ರಕೋಟೆಯಾಗಿತ್ತು ಆದರೆ ಇಂದು ಪಕ್ಷಸಂಘಟನೆಯನ್ನು ನಿಭಾಯಿಸುವಲ್ಲಿ ನಾಯಕತ್ವದ ವೈಫಲ್ಯದ ಕೊರತೆಯಿಂದ ಪಕ್ಷದ ಬೆಳವಣಿಗೆ ಕ್ಷೀಣಿಸಿರುವುದು ಬೇಸರದ ಸಂಗತಿಯಾಗಿದೆ.
ಮುಂಬರುವ ಸ್ಥಳೀಯ ಚುನಾವಣೆಯ ದೃಷ್ಠಿಕೋನಕ್ಕಾಗಿ ಕಾರ್ಯಕರ್ತರನ್ನು ಇಂದಿನಿಂದಲೆ ತಾಲೂಕಿನ ಜೆಡಿಎಸ್ ನಾಯಕರುಗಳು ಸ್ಥಳೀಯವಾಗಿದ್ದುಕೊಂಡು ಪಕ್ಷವನ್ನು ಬಲಗೊಳಿಸಬೇಕು ಎಂದು ಹೇಳಿದರು
ಕೇಂದ್ರದ ಬಿಜೆಪಿ ಸರ್ಕಾರ ಹಿಂದುತ್ವದ ಹೆಸರಿನಲ್ಲಿ ಮತವಿಭಜನೆ ಮಾಡಿ ಕೋಮುವಾದ ಸೃಷ್ಠಿಸುವ ಮೂಲಕ ಜಯಸಾಧಿಸುತ್ತೇವೆ ಎಂಬುವ ಹಗಲುಗನಸ್ಸು ಕಾಣುತ್ತಿದ್ದಾರೆ.ಆದರೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ರೈತರ ಸಾಲಮನ್ನಾ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನಮತಗೆದ್ದಿದ್ದಾರೆ.ವರಿಷ್ಠರ ಆದೇಶದಂತೆ ಜಿಲ್ಲೆಯಲ್ಲಿ ಮೈತ್ರಿ ಪಕ್ಷದ ಕಾಂಗ್ರೆಸ್ ಅಭ್ಯರ್ಥಿಯಾದ ಮಂಜಪ್ಪರವರ ಗೆಲುವಿಗಾಗಿ ಶ್ರಮಿಸೋಣ ಡಾ.ಬಿಆರ್ ಅಂಬೇಡ್ಕರ್ ಅವರ ಆಶಯದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತ್ಯಾತೀತತೆ ಉಳಿಸೋಣ ಎಂದು ಕರೆ ನೀಡಿದರು.
ಜೆ.ಡಿ.ಎಸ್.ಮುಖಂಡ ದೇವೇಂದ್ರಪ್ಪ ಚಿಕ್ಕಮ್ಮನಹಟ್ಟಿ ಮಾತನಾಡಿ,ರಾಜ್ಯದ ವರಿಷ್ಠರ ನಿರ್ಣಯದಂತೆ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತಿದ್ದು ಆದರೆ ಇದುವರೆಗೂ ಕಾಂಗ್ರೆಸ್ ನಾಯಕರುಗಳು ನಮ್ಮ ಪಕ್ಷದವರನ್ನು ಆಹ್ವಾನಿಸದೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಒಂದು ವೇಳೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲು ಅನುಭವಿಸಿದರೆ ಅದಕ್ಕೆ ಜೆಡಿಎಸ್ ಪಕ್ಷ ಹೊಣೆಯಾಗುವುದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ 1ಲಕ್ಷದ 50ಸಾವಿರ ಮತಗಳನ್ನು ಜೆಡಿ ಎಸ್ ಅಭ್ಯರ್ಥಿ ಗಳಿಸುವಮೂಲಕ ತನ್ನ ಭದ್ರತೆಯನ್ನು ಕಾಪಾಡಿಕೊಂಡಿದೆ ಇನ್ನು ಹೆಚ್ಚಿನ ಪಕ್ಷದ ಸಂಘಟನೆಗಾಗಿ ತಾಲೂಕಿನಲ್ಲಿ ಶ್ರಮಿಸಲಾಗುತ್ತಿದೆ ಹಾಗೂ ಮೈತ್ರಿಸ ಸರ್ಕಾರದ ಕಾಂಗ್ರೆಸ್ ಅಭ್ಯರ್ಥಿ ಮಂಜಪ್ಪನವರ ಗೆಲುವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲು ಸಂಕಲ್ಪ ಮಾಡಿದ್ದೇವೆ.ಎಂದು ಹೇಳಿದರು.
ಈಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ತಾಲ್ಲೂಕು ಅಧ್ಯಕ್ಷ ಗುರುಸಿದ್ದಪ್ಪ, ಎನ್ ಎಸ್ ರಾಜು, ಜಿಲ್ಲಾಮುಖಂಡರಾದ ಗಣೇಶ ಅಜ್ಗರ್, ಕಡತಿ ಅಂಜಿನಪ್ಪ ,ಶೀಲಾಕುಮಾರಿ ,ವೀರಭದ್ರಪ್ಪ, ಉಸ್ಮಾನ್, ತಿಪ್ಪೇಸ್ವಾಮಿ, ಮಾಜಿಜಿ.ಪಂ ಸದಸ್ಯ ಸಿ.ಲಕ್ಷ್ಮಣ, ಹಾಲೇಹಳ್ಳಿ ಮಂಜುನಾಥ್ ರೆಡ್ಡಿ , ಕೆಚ್ಚೆನಹಳ್ಳಿ ಶಿವಕುಮಾರ್, ಲಕ್ಷ್ಮಣ ಸೇರಿದಂತೆ ಮೊದಲಾದ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು.