ಹುಳಿಯಾರು:
ಗುತ್ತಿಗೆದಾರರಿಂದ ಕಾಮಗಾರಿ ಮಾಡಿಸದೆ ತಾವೇ ಕಾಮಗಾರಿ ಮಾಡಿ ಕಾಮಗಾರಿ ಮಾಡಿಸಿ ಎರಡ್ಮೂರು ಸಾವಿರ ರೂಗಳಿಗೂ ಅದಿಕಾರಿಗಳ ಮುಂದೆ ಕೈ ಕಟ್ಟಿ ನಿಲ್ಲುವ ಜನಪ್ರತಿನಿಧಿಗಳಿಂದ ಊರಿನ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಗ್ರಾಪಂ, ಪಪಂ, ಪುರಸಭೆ, ವಿಧಾನಸಭೆ ಹೀಗೆ ಎಲ್ಲಾ ಚುನಾವನೆಗಳಲ್ಲೂ ನಿಸ್ವಾರ್ಥಿಗಳನ್ನು ಗೆಲ್ಲಿಸಿ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಕಿವಿ ಮಾತು ಹೇಳಿದರು.
ಹುಳಿಯಾರಿನ ಕೋಡಿಪಾಳ್ಯದ ಸಾಂಸ್ಕೃತಿಕ ಸದನದಲ್ಲಿ ವರ್ತಕರ ಸಂಘದಿಂದ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗ್ರಾಪಂ.ಗಳಿಗೆ ಸರಕಾರದಿಂದ ಬರುವ ಅನುದಾನದಲ್ಲಿ ಗ್ರಾಪಂನ ಎಲ್ಲಾ ಸದಸ್ಯರು ಸರ್ವನುಮದಿಂದ ಅಂಗೀಕರಿಸಿ ಒಂದು ಕಡೆಯಿಂದ ರಸ್ತೆಗಳನ್ನು ಅಥವಾ ಒಳಚರಂಡಿಗಳನ್ನು ಹಂತ ಹಂತವಾಗಿ ನಿರ್ಮಿಸಿಕೊಂಡರೆ ಗ್ರಾಮ ಅಭಿವೃದ್ದಿ ಪಡಿಸಲು ಸಾಧ್ಯವಿದೆ. ಆದರೆ ಗ್ರಾಪಂ.ಯಲ್ಲಿನ ಎಲ್ಲಾ ಸದಸ್ಯರು ಸರಕಾರದಿಂದ ಬರುವ ಅನುದಾನವನ್ನು ವಿಂಗಡಣೆ ಮಾಡಿಕೊಂಡು ತಮಗೆ ಬೇಕಾದ ಕೆಲಸಗಳನ್ನು ಮಾಡುವುದರಿಂದ ಊರುಗಳು ಅಭಿವೃದ್ಧಿಯಾಗಲ್ಲ ಎಂದರು.
ಉದ್ಯೋಗಖಾತ್ರಿ ಯೋಜನೆಯಲ್ಲಿ ಪ್ರತಿ ಗ್ರಾಪಂ.ಗಳಲ್ಲೂ ಕೋಟ್ಯಾಂತರ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ, ಕಾಂಪೌಡ್ ನಿರ್ಮಿಸಬಹುದಾಗಿದೆ. ಆದರೆ ಪ್ರಗತಿ ಪರಿಶೀಲನ ಸಭೆಯಲ್ಲಿ ಪರಿಶೀಲಿಸಿದರೆ ಚೆಕ್ ಡ್ಯಾಂ, ಬದ ನಿರ್ಮಾಣ, ಕುರಿಶೆಡ್, ಶೌಚಾಲಯ ಬಿಟ್ಟರೆ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿ ಮಾಡಿಯೇ ಇಲ್ಲ. ಇನ್ನಾದರೂ ಗ್ರಾಪಂ ಸದಸ್ಯರು ಸ್ವಾರ್ಥ ಬಿಟ್ಟು ಊರಿನ ಅಭಿವೃದ್ಧಿ ಚಿಂತಿಸಿದರೆ ಶಾಸಕರ ಅನುಧಾನದಲ್ಲಿ ದೊಡ್ಡದೊಡ್ಡ ಕಾಮಗಾರಿ ನಿರ್ಮಿಸಲು ಮುಂದಾಗಬಹುದಾಗಿದೆ ಎಂದರು.
ಹುಳಿಯಾರು ವ್ಯಾಪಾರ ಕೇಂದ್ರವಾಗಿ ಮತ್ತೊಷ್ಟು ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಬಸ್ ನಿಲ್ದಾಣವನ್ನು ಈಗಾಗಲೇ ಅಭಿವೃದ್ಧಿ ಪಡಿಸಲು ಎಂಜಿನಿರ್ ಅವರಿಗೆ ಸೂಚಿಸಿದ್ದೇನೆ. ಬೋರನಕಣಿವೆ ಜಲಾಶಯದ ನೀರನ್ನು ಕನಿಷ್ಠ ವಾರಕ್ಕೆರಡು ಬಾರಿ ಸರಬರಾಜು ಮಾಡುವ ಬಗ್ಗೆ ಅಧಿಕಾರಿಗಳಿಗೆ ಪ್ಲಾನ್ ಸಿದ್ಧಪಡಸಲು ಸೂಚಿಸಿದ್ದೇನೆ.
ಎರಡು ರಾಷ್ಟೀಯ ಹೆದ್ದಾರಿಗಳ ಜೊತೆಗೆ ಈ ಹಿಂದಿನ ಕೇಂದ್ರಸರಕಾರವು ಘೋಷಿಸಿದ್ದ ಹುಳಿಯಾರು ಮಾರ್ಗವಾಗಿ ಹೋಗುವ ರೈಲುಮಾರ್ಗದ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ