ನೀರಾವರಿ ಸೌಲಬ್ಯಕ್ಕೆ ಸರ್ಕಾರ ಬದ್ಧ;ಶ್ರೀರಾಮುಲು

ಮೊಳಕಾಲ್ಮೂರು

     ಚುನಾವಣೆ ಪೂರ್ವದಲ್ಲಿ ನೀಡಿರುವ ಭರವಸೆಯಂತೆ ಜನರಿಗೆ ಕುಡಿಯುವ ನೀರಿಗಾಗಿ ತುಂಗಭದ್ರಾ ಹಿನ್ನೀರು ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರಾವರಿ ಸೌಲಭ್ಯಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು.

     ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಸಂತೆಗುಡ್ಡ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಶನಿವಾರ ಆಯೋಜಿಸಿದ್ದ ‘ಜನಸಂಪರ್ಕ ಸಭೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

      ಭದ್ರಾ ಮೇಲ್ಡಂಡೆ ಯೋಜನೆಯಡಿ ಕೆರೆ ತುಂಬಿಸುವ ಕಾರ್ಯದಲ್ಲಿ ಟೆಂಡರ್ ಪ್ರಗತಿಯಲ್ಲಿದೆ. ಕುಡಿಯುವ ನೀರಿಗಾಗಿ ತುಂಗಾಭದ್ರಾ ಹಿನ್ನೀರು ಹಾಗೂ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಬರುವ 3 ವರ್ಷದೊಳಗೆ ಪೂರೈಸುವುದಾಗಿ ಭರವಸೆ ನೀಡಿದರು. 55 ಲಕ್ಷ ರೂ ಗಳಲ್ಲಿ ಬಾಂಡ್ರವಿ ಗ್ರಾಮದ ಸೇತುವೆ ನಿರ್ಮಿಸಲಾಗಿದೆ. 4 ಲಕ್ಷ ರೂಗಳಲ್ಲಿ ಆಂಜನೇಯ ಸ್ವಾಮಿ ದೇವಾಲಯ ಅಭಿವೃದ್ಧಿ ಮಾಡಲಾಗಿದೆ. 27 ಲಕ್ಷ ರೂಗಳಲ್ಲಿ ಶಾಲಾ ಕಾಂಪೌಂಡ್ ನಿರ್ಮಿಸಲು ಡಿ.ಎಂ.ಎಫ್. ನಿಧಿಯಡಿ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

      ಜನಸಂಪರ್ಕ ಸಭೆಯಲ್ಲಿ ಜನರು ನೂರಾರು ಸಮಸ್ಯೆಗಳನ್ನು ತಂದು ಪರಿಹರಿಸುಂತೆ ಸಚಿವರಲ್ಲಿ ಮನವಿ ಮಾಡಿದರು. ಕುಂದುಕೊರ ತೆಗಳಲ್ಲಿ 1 ರಿಂದ 7ನೇ ತರಗತಿಯಲ್ಲಿ 250 ಮಕ್ಕಳಿದ್ದು, ಕೇವಲ ಇಬ್ಬರು ಶಿಕ್ಷಕರಿದ್ದಾರೆ. ಇದರಿಂದ ಮಕ್ಕಳಿಗೆ ಪಾಠ ಪ್ರವಚನ ನೀಡಲು ತೊಂದರೆಯಾಗುತ್ತಿದ್ದು, ಅಗತ್ಯವಿರುವ ಶಿಕ್ಷಕರನ್ನು ನೇಮಿಸುವಂತೆ ಮನವಿ ಮಾಡಿದರು

     ಮಳೆಯಿಂದ ಶಾಲಾ ಕೊಠಡಿ ಹಾಳಾಗಿರುವ ಬಗ್ಗೆ, ಆರೋಗ್ಯ ಸಹಾಯಕರ (ಎಎನ್‍ಎಂ) ವಸತಿಗೃಹ ಮತ್ತು ಕೊಠಡಿ ನಿರ್ಮಾಣ, ಜಾನುವಾರುಗಳ ಸಂಖ್ಯೆ ಹೆಚ್ಚಾಗಿದ್ದು, ಪಶು ವೈದ್ಯಕೀಯ ಆಸ್ಪತ್ರೆ, ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ರಾಂಪುರ ಮಾರ್ಗದಲ್ಲಿ ಬಸ್ ವ್ಯವಸ್ಥೆ, ಬಾಂಡ್ರವಿ ಪ್ರದೇಶದಲ್ಲಿ ಹೆಚ್ಚು ಜನಸಂಖ್ಯೆಯಿದ್ದು ಗ್ರಾಮದಲ್ಲಿ ಒಂದು ಸಮುದಾಯ ಭವನ, ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ದಾರ, ಜಿಲ್ಲಾ ಗಣಿ ಪ್ರತಿಷ್ಟಾನ ನಿಧಿಯಿಂದ ಗ್ರಾಮದಲ್ಲಿ ಮೂಲ ಸೌಕರ್ಯ ಕಲ್ಪಿಸುವ ಬಗ್ಗೆಯೂ ಜನರು ಬೇಡಿಕೆಯಿಟ್ಟರು

    ಕುಡಿಯುವ ನೀರಿನ ಮೂಲ ‘ಕುಂಬಾರ ಕಟ್ಟೆ ಪ್ರದೇಶ’ ದಲ್ಲಿ ಮಳೆಯಿಂದಾಗಿ ಮುಚ್ಚಿದ್ದು, ಅದನ್ನು ಸರಿಪಡಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ, ಶುದ್ಧ ನೀರಿನ ಘಟಕಗಳ ನಿರ್ವಹಣೆ, ನಿರಂತರ ಜ್ಯೋತಿ ನಿರ್ಮಿಸುವಲ್ಲಿ ಅರಣ್ಯ ಮತ್ತು ಬೆಸ್ಕಾ ಇಲಾಖೆ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂಬುದಾಗಿ ತಮ್ಮ ಸಮಸ್ಯೆಗಳ ಪತ್ರವನ್ನು ಸಚಿವರಿಗೆ ನೀಡಿದರು.

    ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನಾಗರೆಡ್ಡಿ, ತಾಲ್ಲೂಕು ಪಂಚಾಯತ್ ಸದಸ್ಯ ತಿಪ್ಪೇಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ಕುಮಾರಸ್ವಾಮಿ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಬಸವರಾಜಪ್ಪ, ತಹಶೀಲ್ದಾರ್ ಎಂ.ಬಸವರಾಜು ಹಾಗೂ ಗ್ರಾಮದ ಮುಖಂಡರಾದ ಗೋವಿಂದಪ್ಪ, ಬಸವರಾಜು ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link