ನೂತನ ಸಂಸದರಿಂದ ಮಠ ಮಾನ್ಯಗಳಿಗೆ ಭೇಟಿ

ಚಿತ್ರದುರ್ಗ:

     ಮಳೆ ಬಾರದೇಜಿಲ್ಲೆಯಲ್ಲಿಕುಡಿಯುವ ನೀರಿಗೆ ಹಾಹಾಕಾರಉಂಟಾಗಿದ್ದು, ನೀರಿನ ಸಮಸ್ಯೆ ಮತ್ತುಜಿಲ್ಲೆಯಅಭಿವೃದ್ಧಿಗೆ ವಿಶೇಷ ಒತ್ತು ನೀಡುವಂತೆ, ನೂತನ ಸಂಸದ ಎ.ನಾರಾಯಣಸ್ವಾಮಿಯವರಿಗೆ ಸಿರಿಗೆರೆಯ ತರಳಬಾಳು ಬೃಹನ್ಮಠದಡಾ|| ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಲಹೆ ನೀಡಿದರು.

      ನೂತನ ಸಂಸಂದರಾಗಿಆಯ್ಕೆಯಾದ ಎ. ನಾರಾಯಣಸ್ವಾಮಿಯವರು ಪ್ರಥಮ ಬಾರಿಗೆಚಿತ್ರದುರ್ಗಜಿಲ್ಲೆಯ ಸಿರಿಗೆರೆ ತರಳಬಾಳು ಬೃಹನ್ಮಠದಡಾ|| ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೊಸದುರ್ಗದಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳು ಮತ್ತು ಸಾಣೆಹಳ್ಳಿಯ ತರಳಬಾಳು ಬೃಹನ್ಮಠದಡಾ|| ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಜಿಯವರನ್ನು ಭೇಟಿ ಮಾಡಿ, ಆರ್ಶೀವಾದವನ್ನು ಪಡೆದರು.

    ಇದೇ ಸಂದರ್ಭದಲ್ಲಿ ಸಂಸದರ ಮುಂದಿರುವ ಸವಾಲುಗಳ ಬಗ್ಗೆ ಗಮನಕ್ಕೆ ತಂದಡಾ|| ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಾಸಿವೆಹಳ್ಳಿ ಏತನೀರಾವರಿಯೋಜನೆ ನೆನೆಗುದಿಗೆ ಉಳಿದಿದ್ದು, ಹಾಗೆಯೇ ಭರಮಸಾಗರ ಕೆರೆಗಳಿಗೆ ನೀರುತುಂಬಿಸುವ ಯೋಜನೆ ಮತ್ತು ಜಗಳೂರು ತಾಲ್ಲೂಕಿನ 1200 ಕೋಟಿರೂಪಾಯಿಯಲ್ಲಿ ನೀರುತುಂಬಿಸುವ ಯೋಜನೆಗಳು ಕಾರ್ಯಗತವಾಗಬೇಕಿದೆ. ಆ ಯೋಜನೆಗಳಿಗೆ ಸಂಸದರು ಹೆಚ್ಚಿನಒತ್ತು ನೀಡಿ, ಕೆಲಸ ಮಾಡಬೇಕುಎಂದರು.

      ಸಿರಿಗೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ಸರ್ಕಾರದ ಬಿಎಸ್‍ಎನ್‍ಎಲ್ ನಿಗಮವು ಅಪೂರ್ಣವಾಗಿಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಸಿರಿಗೆರೆ ಬೃಹನ್ಮಠ ಮತ್ತು ಸಾರ್ವಜನಿಕರಿಗೆತೊಂದರೆಯಾಗುತ್ತಿದೆ.ಆದ್ದರಿಂದ ನೂತನ ವ್ಯವಸ್ಥೆಗಳನ್ನು ಸಿರಿಗೆರೆ ಮಠದಲ್ಲಿ ಅಳವಡಿಸಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.ಶ್ರೀಗಳ ಸಲಹೆಗೆ ಸ್ಪಂಧಿಸಿದ ಸಂಸದ ನಾರಾಯಣಸ್ವಾಮಿಯವರು ಮಳೆಗಾಲದ ಅಧಿವೇಶನಆರಂಭವಾಗುವ ಮೊದಲೇ ಬಿಎಸ್‍ಎನ್‍ಎಲ್ ವತಿಯಿಂದ ನಡೆಯಬೇಕಾದ ಕೆಲಸಗಳನ್ನು ಪೂರ್ಣಗೊಳಿಸುವ ಬಗ್ಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

     ಕುಂಚಿಟಿಗ ಮಹಾಸಂಸ್ಥಾನ ಮಠದಡಾ|| ಶಾಂತವೀರ ಮಹಾಸ್ವಾಮಿಜಿಯವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದ ನಾರಾಯಣಸ್ವಾಮಿಯವರು ಸ್ವಾಮಿಜಿಯ ಸಲಹೆಗಳನ್ನು ಚಾಚುತಪ್ಪದೇ ಅನುಷ್ಠಾನ ಮಾಡುವುದಾಗಿ ಹೇಳಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಶಾಂತವೀರ ಶ್ರೀಗಳು ನೂತನ ಸಂಸದರುರೈತರು ಮತ್ತುಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂಧಿಸಿ ಕೆಲಸ ಮಾಡುವಂತಾಗಬೇಕು ಆಗ ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಂತಹ ಯೋಜನೆಗಳನ್ನು ಜನಸಾಮಾನ್ಯರಿಗೆತಲುಪಿಸಲು ಸಾಧ್ಯವಾಗುತ್ತದೆಎಂದರು.

      ಸಾಣಿಹಳ್ಳಿ ತರಳಬಾಳು ಶಾಖಾ ಮಠದಡಾ|| ಪಂಡಿತರಾಧ್ಯ ಸ್ವಾಮಿಜಿಯವರು ನೂತನ ಸಂಸದರಿ ಆಶೀರ್ವದಿಸಿ ಮಾತನಾಡಿದರು.ಚುನಾವಣೆಯ ಸಂದರ್ಭದಲ್ಲಿಯಾರೇ ಮತದಾನ ಮಾಡಲಿ, ಬಿಡಲಿ ಅವರೆಲ್ಲರನ್ನೂಐಕ್ಯತೆಯಿಂದ ಒಳಗೊಂಡು ತಾರತಮ್ಯ ಮಾಡದಂತೆ ಆಡಳಿತ ನಡೆಸಿದಾಗ ಉತ್ತಮ ಆಡಳಿತ ನೀಡಲು ಸಾಧ್ಯವಿದೆಎಂದರು.

      ಇದೇ ಸಂದರ್ಭದಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಹೊಳಲ್ಕೆರೆ ತಾಲ್ಲೂಕಿನಾಧ್ಯಂತರೈತರ ಹೊಲಗಳು, ತೋಟಗಳು, ಜಾನುವಾರುಗಳು, ನೀರಿನ ನೆರವಿಲ್ಲದೇಕಂಗಾಲಾಗಿದ್ದು, ಅವುಗಳಿಗೆ ಪರಿಹಾರ ಶಾಶ್ವತವಾಗಿ ಕೆರೆಗಳಿಗೆ ನೀರುತುಂಬಿಸುವ ಯೋಜನೆಗಳನ್ನು ಅನುಷ್ಠಾನ ಮಾಡಿಸುವುದಾಗಿದೆ.ಆ ಕಾರಣಕ್ಕಾಗಿ ಸಂಸದರು ಮತ್ತುಎಲ್ಲಾ ಶಾಸಕರುಒಟ್ಟೊಟ್ಟಾಗಿ ಕೆರೆಗಳಿಗೆ ನೀರುತುಂಬಿಸುವ ಯೋಜನೆಗಳಿಗೆ ಹೆಚ್ಚಿನಒತ್ತು ನೀಡಲಾಗುತ್ತದೆಎಂದು ಹೇಳಿದರು.

      ಸಂಸದ ನಾರಾಯಣಸ್ವಾಮಿಯವರಜೊತೆಗೆ ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರರಾದದಗ್ಗೆ ಶಿವಪ್ರಕಾಶ್, ಖಜಾಂಚಿ ನರೇಂದ್ರ, ಕಾರ್ಯದರ್ಶಿ ಜಿ.ಹೆಚ್. ಮೋಹನ್, ಹಿರಿಯೂರು ಮಂಡಲ ಅಧ್ಯಕ್ಷದ್ಯಾಮಣ್ಣ, ಹೊಳಲ್ಕೆರೆ ಮಂಡಲ ಅಧ್ಯಕ್ಷ ಮಹೇಶ್ವರಪ್ಪ, ಕಾರ್ಯದರ್ಶಿ ನೆಲ್ಲಿಕಟ್ಟೆಜಗದೀಶ್, ಕೆ.ಸಿ.ರಮೇಶ್, ಜಿ.ಪಂ. ಸದಸ್ಯ ಶರಣಪ್ಪ, ಕೋಗುಂಡೆ ಮಂಜಣ್ಣ, ಮೋಹನ್ ಸಿರಿಗೆರೆ, ಬಸವಂತಪ್ಪ, ಇಂದ್ರಪ್ಪ, ನಿಂಗರಾಜು, ಜಿ.ಪಂ. ಸದಸ್ಯತಿಪ್ಪೇಸ್ವಾಮಿ, ಇನ್ನೂ ಮುಂತಾದ ಮುಖಂಡರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link