ನೆರೆ ಸಂತ್ರಸ್ಥರಿಗೆ ತಪಾಸಣೆಗೆ ಹೊರಟ ಎಂಸಿಎ

ದಾವಣಗೆರೆ:  

ಇಲ್ಲಿನ ಮೆಡಿಕಲ್ ಸರ್ವಿಸ್ ಸೆಂಟರ್‍ನಿಂದ ಕೊಡಗು ಜಿಲ್ಲೆಯ ಬಜೆಗುಂಡಿ, ಕೆಂಚಮ್ಮನ ಬಾಣೆ, ಮೀನಕೊಳ್ಳಿ ಮತ್ತು ಕಲ್ಕೊರೆ ಹಳ್ಳಿಗಳಲ್ಲಿ ಮಳೆ ಮತ್ತು ನೆರೆಯಿಂದ ಹಾನಿಗೊಳಗಾದವರಿಗೆ ಉಚಿತ ವೈದ್ಯಕೀಯ ತಪಾಸಣ ಹಾಗು ಔಷಧಿ, ಅವಶ್ಯಕ ವಸ್ತುಗಳ ವಿತರಣಾ ಶಿಬಿರವನ್ನು ಹಮ್ಮಿಕೊಂಡಿದೆ.
ಈ ಶಿಬಿರಕ್ಕೆ ಮೆಡಿಕಲ್ ಸರ್ವಿಸ್ ಸೆಂಟರ್, ದಾವಣಗೆರೆ ಘಟಕದ ಸದಸ್ಯರು, ವೈದ್ಯರು, ನರ್ಸಿಂಗ್ ಸ್ಟಾಫ್ ಮತ್ತು ಸ್ವಯಂಸೇವಕರ 11 ಜನರ ತಂಡ ಇಂದು ತೆರಳುತ್ತಿದೆ. ಇಂದಿನಿಂದ (ಆ.27ರಿಂದ) ಆ.30ರ ವರೆಗೆ ನಡೆಯುವ ಶಿಬಿರದಲ್ಲಿ ಈ ತಂಡ ಸೇವೆಸಲ್ಲಿಸಲಿದೆ.
ತಂಡದಲ್ಲಿ ಡಾ. ವಸುಧೇಂದ್ರ, ಡಾ. ಮೌಲ್ಯರಾಜ್, ಡಾ. ಇಳಾ, ಡಾ. ಪ್ರಿಯಾಂಕ, ಡಾ. ಚಂದನ್, ಡಾ. ಸಂಗಮ್, ಡಾ. ದೊರೆಸ್ವಾಮಿ, ಡಾ. ಸಿದ್ದೇಶ್ವರ್, ಯತೀಂದ್ರ, ನಟರಾಜ್, ಪ್ರಮೋದ್ ಇದ್ದರು.

Recent Articles

spot_img

Related Stories

Share via
Copy link