ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಪ್ರತಿಪಾದನೆ ಬಡತನ ನಿವಾರಣೆಯಾದರೆ ಬಾಲ್ಯ ವಿವಾಹ ನಿರ್ಮೂಲನೆ

ಚಿತ್ರದುರ್ಗ;

     ಸಮಾಜದಲ್ಲಿ ಬಡತನ ನಿವಾರಣೆ ಮಾಡಿದಲ್ಲಿ ಮಾತ್ರ ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ. ವಸ್ತ್ರಮಠ ಅವರು ಹೇಳಿದರು.

      ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಕೀಲರ ಸಂಘ ಇವರ ಸಹಯೋಗದಲ್ಲಿ ವಕೀಲರ ಭವನದಲ್ಲಿಆಯೋಜಿಸಲಾಗಿದ್ದ ವಿಧವಾ ಕೋಶ, ಬಾಲ್ಯವಿವಾಹ ನಿಷೇಧಕಾಯ್ದೆ ಹಾಗೂ ಓಬವ್ವ ಪಡೆಕುರಿತ ಕಾನೂನು ಅರಿವುಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

     ಬಾಲ್ಯವಿವಾಹ ಪದ್ದತಿ ಹೋಗಲಾಡಿಸಲು ಎಲ್ಲರೂ ಶ್ರಮಿಸುವ ಅಗತ್ಯವಿದೆ.ಬಡತನ ನಿವಾರಣೆಯಾದರೆ ಬಾಲ್ಯ ವಿವಾಹ ಪದ್ದತಿ ನಿರ್ಮೂಲನೆ ಮಾಡಬಹುದಾಗಿದೆ.ಈ ಬಡತನಕ್ಕೆ ಹಲವಾರು ಕಾರಣಗಳಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡುವುದರಿಂದ ಮುಂದೆ ಇಂತಹ ಬಾಲ್ಯ ವಿವಾಹಗಳನ್ನು ವಿರೋಧಿಸುವ ಶಕ್ತಿ ಸ್ವತಃ ಬರುತ್ತದೆ.

    ವಿಧವೆಯರಿಗೆ ಸಮಾಜದಲ್ಲಿ ಶೋಷಣೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹೆಣ್ಣು ಮಕ್ಕಳು ಮೊಬೈಲ್ ಬಳಕೆ ಆದಷ್ಟು ಸ್ವಯಂ ನಿಯಂತ್ರಿಸಿಕೊಳ್ಳುವುದು ಅಗತ್ಯ. ಜಿಲ್ಲೆಯಲ್ಲಿ ಓಬವ್ವ ಪಡೆ ಮಹಿಳಾ ಪೊಲೀಸರು ಹೆಣ್ಣು ಮಕ್ಕಳಿಗೆ ರಕ್ಷಣೆಕೊಡುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಚುಡಾಯಿಸಿದರೆ, ಓಬವ್ವ ಪಡೆಗೆದೂರು ನೀಡಿದಲ್ಲಿ, ಕೂಡಲೆಅವರು ಹಾಜರಾಗಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವರು ಎಂದು ತಿಳಿಸಿದರು.

     ಹಿರಿಯ ಸಿವಿಲ್ ನ್ಯಾಯಾಧೀಶರಾದಎಸ್.ಆರ್.ದಿಂಡಾಲಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿಇತ್ತೀಚೆಗೆ ಸ್ಥಾಪನೆಯಾದ ವಿಧವಾಕೋಶದಕಾರ್ಯಕಾರಿ ಸಮಿತಿ ಬಗ್ಗೆ ಹಾಗೂ ವಿಧವೆಯರಿಗೆ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.

     ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಇತಿಹಾಸ ಪೂರ್ವದಿಂದಲೂ ಬಾಲ್ಯವಿವಾಹ ಪದ್ದತಿಇದೆ. ಹಲವು ಸಮಾಜ ಸುಧಾರಕರು, ಹಿರಿಯ ನಾಯಕರ ಪರಿಶ್ರಮದಿಂದಇತ್ತೀಚೆಗೆ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ.ಸಹಾಯವಾಣಿಗಳಾದ 1098 ಮತ್ತು 1049 ಸಹಾಯವಾಣಿಗೆಕರೆ ಮಾಡಿ ಬಾಲ್ಯವಿವಾಹದ ಬಗ್ಗೆ ದೂರು ಸಲ್ಲಿಸಬಹುದು.ಬಾಲ್ಯವಿವಾಹದ ಬಗ್ಗೆ ಗ್ರಾಮೀಣ ಮಟ್ಟದಲ್ಲಿಅಂಗನವಾಡಿ, ಆಶಾ ಕಾರ್ಯಕರ್ತರುಜಾಗೃತಿ ಮೂಡಿಸಬೇಕುಎಂದು ಸಲಹೆ ನೀಡಿದರು.

     ಹಿರಿಯ ಸಿವಿಲ್ ನ್ಯಾಯಾಧೀಶರಾದ ಮುನಿರತ್ನಮ್ಮ ಮಾತನಾಡಿ ಮದುವೆಯಾಗಿ ಗಂಡತೀರಿಕೊಂಡ ನಂತರ ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಮೂಢನಂಬಿಕೆಗಳಿಂದ ವಿಧವೆಯರಿಗೆ ಸಮಸ್ಯೆಇದೆ.ಸುಪ್ರೀಂಕೋರ್ಟ್‍ಆದೇಶದಂತೆ ಸರ್ಕಾರಗಳು ಜಿಲ್ಲಾ ಮಟ್ಟದಲ್ಲಿ ವಿಧವಾಕೋಶ ಪ್ರಾರಂಭಿಸಿದೆ. ವಿಧವೆಯರಿಗೆ ವಿಧವಾ ವೇತನ, ಉದ್ಯೋಗತರಬೇತಿ, ಇತರ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಹಲವು ವಿಧವೆಯರಿಗೆ ಸರ್ಕಾರದ ಸೌಲಭ್ಯತಲುಪುತ್ತಿಲ್ಲ, ಅಂಗನವಾಡಿ, ಆಶಾ ಕಾರ್ಯಕರ್ತರು ಸರ್ಕಾರದ ಸೌಲಭ್ಯಗಳ ಬಗ್ಗೆ ವಿಧವೆಯರಿಗೆ ತಿಳಿಸಬೇಕೆಂದು ಸಲಹೆ ನೀಡಿದರು.

      ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾಜಾನಾಯ್ಕ, ಜಿಲ್ಲಾರಕ್ಷಣಾಧಿಕಾರಿ ಶ್ರೀನಾಥ್ ಎಂ.ಜೋಷಿ, ವಕೀಲರ ಸಂಘದಅಧ್ಯಕ್ಷಎನ್.ಬಿ.ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ಶಿವುಯಾದವ್ ಕಾರ್ಯಕ್ರಮಕುರಿತು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆಯ ಪುಷ್ಪಲತಾ ನಿರೂಪಿಸಿದರು.ವೆಂಕಟಲಕ್ಷ್ಮಿ ಸ್ವಾಗತಿಸಿದರು.ಜಿ.ಸಿ.ಚಂದ್ರಪ್ಪ ವಂದಿಸಿದರು.ಕಾರ್ಯಕ್ರಮದಲ್ಲಿಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ನ್ಯಾಯಾಂಗ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap